ಸಮಸ್ಯೆ ಬಗೆಹರಿಸುವಂತೆ ಗ್ರಂಥಾಲಯ ಮೇಲ್ವಿಚಾರಕರಿಂದ ಸಿಇಒಗೆ ಮನವಿ

| Published : Mar 06 2024, 02:17 AM IST

ಸಾರಾಂಶ

ವಿಜಯಪುರ: ಜಿಲ್ಲೆಯಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಬೇಡಿಕೆಗಳು, ಕುಂದು ಕೊರತೆಗಳನ್ನು ಈಡೇರಿಸುವಂತೆ ಜಿಪಂ ಸಿಇಓ ರಿಷಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು. 2020ರ ನಿಂದ ಇಲ್ಲಿವರೆಗೆ ಬಹುತೇಕ ಕಡೆಗೆ ಗ್ರಂಥಾಲಯಗಳ ಪತ್ರಿಕೆ ಬಿಲ್ ನೀಡದಿರುವುದು, 6 ತಿಂಗಳಿನಿಂದ ವೇತನ ಜಮೆ ಇದ್ದರೂ ನೀಡದಿರುವುದು, ಇ-ಅಟೆಂಡೆನ್ ಮಾಡುವಲ್ಲಿ ಮುತುವರ್ಜಿ ವಹಿಸದಿರುವುದ, ಗ್ರಂಥಾಲಯಗಳಿಗೆ ಅವಶ್ಯಕ ರಜಿಸ್ಟರ್, ರಶೀದಿ ಪುಸ್ತಕ, ಸೀಲು, ಕುರ್ಚಿ, ಪೀಠೋಪಕರಣ, ಡಿಜಿಟಲ್ ಗ್ರಂಥಾಲಯ ಗಳಿಗೆ ಅವಶ್ಯಕ ಪರಿಕರಗಳು, ವೈಫೈ, ಇಂಟರ್ನೆಟ್ ಕಲ್ಪಿಸುವದು, ವರ್ಗಾವಣೆ, ಅನುಕಂಪದ ನೌಕರಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸಿಇಒ ಅವರಿಗೆ ಮನವಿಯ ಮೂಲಕ ಗಮನಕ್ಕೆ ತರಲಾಯಿತು. ಮನವಿ ಸ್ವೀಕರಿಸಿ ಕೂಡಲೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವದಾಗಿ ಸಿಇಒ ಭರವಸೆ ನೀಡಿದರು.

ವಿಜಯಪುರ: ಜಿಲ್ಲೆಯಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಬೇಡಿಕೆಗಳು, ಕುಂದು ಕೊರತೆಗಳನ್ನು ಈಡೇರಿಸುವಂತೆ ಜಿಪಂ ಸಿಇಓ ರಿಷಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು. 2020ರ ನಿಂದ ಇಲ್ಲಿವರೆಗೆ ಬಹುತೇಕ ಕಡೆಗೆ ಗ್ರಂಥಾಲಯಗಳ ಪತ್ರಿಕೆ ಬಿಲ್ ನೀಡದಿರುವುದು, 6 ತಿಂಗಳಿನಿಂದ ವೇತನ ಜಮೆ ಇದ್ದರೂ ನೀಡದಿರುವುದು, ಇ-ಅಟೆಂಡೆನ್ ಮಾಡುವಲ್ಲಿ ಮುತುವರ್ಜಿ ವಹಿಸದಿರುವುದ, ಗ್ರಂಥಾಲಯಗಳಿಗೆ ಅವಶ್ಯಕ ರಜಿಸ್ಟರ್, ರಶೀದಿ ಪುಸ್ತಕ, ಸೀಲು, ಕುರ್ಚಿ, ಪೀಠೋಪಕರಣ, ಡಿಜಿಟಲ್ ಗ್ರಂಥಾಲಯ ಗಳಿಗೆ ಅವಶ್ಯಕ ಪರಿಕರಗಳು, ವೈಫೈ, ಇಂಟರ್ನೆಟ್ ಕಲ್ಪಿಸುವದು, ವರ್ಗಾವಣೆ, ಅನುಕಂಪದ ನೌಕರಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸಿಇಒ ಅವರಿಗೆ ಮನವಿಯ ಮೂಲಕ ಗಮನಕ್ಕೆ ತರಲಾಯಿತು. ಮನವಿ ಸ್ವೀಕರಿಸಿ ಕೂಡಲೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವದಾಗಿ ಸಿಇಒ ಭರವಸೆ ನೀಡಿದರು. ಅರಿವು ಕೇಂದ್ರ ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ದೇಸಾಯಿ, ಪ್ರಧಾನ ಕಾರ್ಯದರ್ಶಿ ಶಿವಶಂಕರ ಉಕುಮನಾಳ, ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಭೀಮಸಿಂಗ್ ರಾಠೋಡ, ರಾಜು ಮೇಲಕೇರಿ, ಶಂಕರ ಅಗಸರ, ಶಂಕರ ಸಾರವಾಡ ಇದ್ದರು