ಸಾರಾಂಶ
ರೈಲ್ವೆ ಇಲಾಖೆ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಸಂಜೀವ ಕಿಶೋರ ಅವರಿಗೆ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಮೀಟಿ ವತಿಯಿಂದ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಿಂದ ಮಲ್ಲಾಪುರ-ಮುಗಳೊಳ್ಳಿ ರೈಲ್ವೆ ಹಳಿಯ ಬದಿಗೆ ರಸ್ತೆ ನಿರ್ಮಾಣ ಮಾಡುವಂತೆ ಬಾಗಲಕೋಟೆ ನೂತನ ರೈಲ್ವೆ ನಿಲ್ದಾಣ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ದಕ್ಷಿಣ-ನೈರುತ್ಯ ವಲಯದ ರೈಲ್ವೆ ಇಲಾಖೆ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಸಂಜೀವ ಕಿಶೋರ ಅವರಿಗೆ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಮೀಟಿ ವತಿಯಿಂದ ಬುಧವಾರ ಮನವಿ ಸಲ್ಲಿಸಿದರು.ಬಾಗಲಕೋಟೆಯಿಂದ 2-3 ಕಿ.ಮೀ ಅಂತರದಲ್ಲಿರುವ ಮಲ್ಲಾಪುರ ಮಲ್ಲಯ್ಯನ ದೇವಸ್ಥಾನ ಬಹಳ ಪುರಾತನವಾಗಿದ್ದು, ಈ ದೇವಸ್ಥಾನಕ್ಕೆ ಬಾಗಲಕೋಟೆಯಿಂದ ಸಾವಿರಾರು ಭಕ್ತರು ಹೋಗಿ ಬರುತ್ತಾರೆ. ಆಲಮಟ್ಟಿ ಹಿನ್ನೀರಿನಿಂದ ರಸ್ತೆ ಮುಳಗಡೆಯಾಗಿ, ದೇವಸ್ಥಾನಕ್ಕೆ ಹೋಗಲು 20-25 ಕಿಮೀ ಸುತ್ತವರಿದು ಹೋಗಿಬರಬೇಕಾಗಿದೆ. ಮಲ್ಲಾಪುರದ ಸುತ್ತಮುತ್ತಲು ರೈತರ ಜಮೀನುಗಳಿದ್ದು, ಜಮೀನುಗಳಿಗೆ ಹೋಗಲು ರೈತರಿಗೂ ಸಹ ತೊಂದರೆಯಾಗುತ್ತಿದೆ. ಈಗ ಹೊಸದಾಗಿ ರೈಲ್ವೆ ಹಳಿ ಕಾಮಗಾರಿ ನಡೆದಿದ್ದು, ಬಾಗಲಕೋಟೆಯಿಂದ(ಮಲ್ಲಾಪುರ) ಮುಗಳೊಳ್ಳಿಗೆ ಹೋಗಲು ರಸ್ತೆ( ಬ್ರಿಡ್ಜ್ ನಂ. 33ಕೆಎಮ್96/700-800) ಡಬಲ್ ಲೈನ್ ನಿರ್ಮಾಣ ಕಾರ್ಯ ನಡೆದಿದ್ದು, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠರ ಆಶಯದಂತೆ ಭಕ್ತರಿಗೆ ಹಾಗೂ ರೈತರಿಗೆ ಅನುಕೂಲವಾಗವಂತೆ ಬಾಗಲಕೋಟೆಯಿಂದ ಮಲ್ಲಾಪುರ ಮುಗಳೊಳ್ಳಿಗೆ ಹೋಗಲು ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಳಿಯ ಮಗ್ಗಲು ರಸ್ತೆ ನಿರ್ಮಸಿಕೋಡಬೇಕೆಂದು ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಮೀಟಿಯವರು ಒತ್ತಾಯಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಇದ್ದರು. ಕಮಿಟಿಯ ಪ್ರಭುಕಾಂತ ನಾರಾ, ಮಲ್ಲಪ್ಪ ಡಾವಣಗೇರೆ, ವೀರಣ್ಣ ಗಂಗಾವತಿ, ರಾಮಣ್ಣ ಕಟ್ಟಿಮನಿ, ಬಸವರಾಜ ಯಂಕಂಚಿ , ನಾನೆಗೌಡ ಪಾಟೀಲ, ಮಲ್ಲಯ್ಯಸ್ವಾಮಿ ಕುಂದರಿಗಿಮಠ, ಬಸಯ್ಯ, ಶಂಕರ ಸಗರ, ಸಂಗಪ್ಪ ಸಜ್ಜನ, ದರಿಯಪ್ಪ ಯಳ್ಳಿಗುತ್ತಿ, ಸಂಗಪ್ಪ ಕೊಪ್ಪದ, ಶಿವಶಂಕರ ಯಾದವಾಡ, ತಮ್ಮಣ್ಣ ಯಳ್ಳಿಗುತ್ತಿ, ಸುರೇಶ ಮಜ್ಜಗಿ ಸೇರಿದಂತೆ ಅನೇಕರು ಇದ್ದರು.