ಸಾರಾಂಶ
ಮಹಾಕವಿ ಕುವೆಂಪು ಅವರ ನಂತರ ಮತ್ತೊಂದು ರಾಮಾಯಣ ಮಹಾ ಕಾವ್ಯವನ್ನು ರಚಿಸಿದ ಕೀರ್ತಿ ವೀರಪ್ಪ ಮೊಯ್ಲಿಯವರದು. ವೀರಪ್ಪಮೊಯ್ಲಿ ನಾಡಿನ ಶೋಷಿತರ ಧ್ವನಿ. ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವೀರಪ್ಪ ಮೊಯ್ಲಿ ಅವರನ್ನು ಆಯ್ಕೆ ಮಾಡಿದರೆ ರಾಯಯಣ ರಚಿಸಿದ ಮಹಾಕವಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ತಾಲೂಕು ನಯನಜ ಕ್ಷತ್ರೀಯ ಸಮಾಜ ಮನವಿ ಮಾಡಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ.ಶಿವಪ್ಪ, ವೀರಪ್ಪಮೊಯ್ಲಿ ನಾಡು ಕಂಡ ಶ್ರೇಷ್ಠ ನಾಯಕ. ರಾಜಕೀಯ ಕ್ಷೇತ್ರದಲ್ಲಿದ್ದರೂ ಸಾಂಸ್ಕೃತಿಕ ಮನಸ್ಸಿನ ಹೃದಯವಂತ. ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾಕವಿ ಕುವೆಂಪು ಅವರ ನಂತರ ಮತ್ತೊಂದು ರಾಮಾಯಣ ಮಹಾ ಕಾವ್ಯವನ್ನು ರಚಿಸಿದ ಕೀರ್ತಿ ವೀರಪ್ಪ ಮೊಯ್ಲಿಯವರದು. ವೀರಪ್ಪಮೊಯ್ಲಿ ನಾಡಿನ ಶೋಷಿತರ ಧ್ವನಿ. ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವೀರಪ್ಪ ಮೊಯ್ಲಿ ಅವರನ್ನು ಆಯ್ಕೆ ಮಾಡಿದರೆ ರಾಯಯಣ ರಚಿಸಿದ ಮಹಾಕವಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಮತ್ತು ಸಾಹಿತ್ಯಾಭಿಮಾನಿಗಳು ಈ ಬಗ್ಗೆ ಗಮನ ಹರಿಸಿ ಜಯದೇವಿ ತಾಯಿ ಲಿಗಾಡೆ, ಚದುರಂಗರ ಅನಂತರ ಮತ್ತೊಬ್ಬ ಸೃಜನಶೀಲ ಮಹಾಕವಿ ಹಾಗೂ ಸಜ್ಜನ ರಾಜಕಾರಣಿಯನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮೆರೆಸಿದ ಕೀರ್ತಿ ಮಂಡ್ಯ ಜಿಲ್ಲೆಗೆ ಸಲ್ಲಲಿದೆ ಎಂದಿದ್ದಾರೆ.