ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಮಗು ಸಿ.ಎಂ.ಪ್ರೇಯಶ್‌ಗೌಡಗೆ ಹುಟ್ಟಿನಿಂದ ಬೆಳವಣಿಗೆ ಕುಂಠಿತದಿಂದ ಬಳಲುತ್ತಿದ್ದು, ವೈದ್ಯೋಪಚಾರದ ನೆರವಿಗೆ ಸಹಾಯಾಸ್ತ ಚಾಚುವಂತೆ ಸ್ವರ್ಣಸಂದ್ರದ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಕಾರ್ಯಕರ್ತೆ ನಾಗರತ್ನ ಮನವಿ ಮಾಡಿದರು.ಮಗುವಿನ ಬೆಳವಣಿಗೆ ಸಮಸ್ಯೆ ಕಂಡ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತೋರಿಸಲಾಗಿ, ಚುಚ್ಚುಮದ್ದಿನಿಂದ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿದ ಹಿನ್ನೆಲೆ ನಿರಂತರವಾಗಿ ಚುಚ್ಚುಮದ್ದು ಕೊಡಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗ 10 ವರ್ಷ ತುಂಬಿದ ಪ್ರೇಯಶ್‌ಗೌಡಗೆ 20 ವರ್ಷಗಳು ತುಂಬುವವರೆಗೂ ಪ್ರತಿನಿತ್ಯ ಚುಚ್ಚುಮದ್ದು ನೀಡುವಂತೆ ವೈದ್ಯರು ಸಲಹೆ ನೀಡಿದ್ದು, ಒಂದು ತಿಂಗಳಿಗಾಗುವ ಚುಚ್ಚು ಮದ್ದು 5 ಸಾವಿರ ರು. ಇದ್ದದ್ದು, ಈಗ 11 ಸಾವಿರ ರು.ಗಳಾಗಿದೆ. ಮಗುವಿನ ಆರೈಕೆ ಮಾಡುತ್ತಿರುವ ಹಾಲಹಳ್ಳಿಯ ಅಜ್ಜಿ ಸರಿತಾ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಹಾಯಕ್ಕೆ ಮನವಿ ಮಾಡಿದ್ದಾರೆ ಎಂದರು.ಸರ್ಕಾರದ ಯಾವುದೇ ಆಸ್ಪತ್ರೆಯಲ್ಲಿ ಚುಚ್ಚುಮದ್ದು ದೊರೆಯದೇ ಇದ್ದು, ಹೊರದೇಶದಿಂದ ತರಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು, ಸ್ವ-ಸಹಾಯ ಸಂಘದಿಂದ 5 ತಿಂಗಳಿಗಾಗುವಷ್ಟು ಸಹಾಯ ಮಾಡಿದ್ದು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದರು.
ಸಹಾಯಾಸ್ತ ಚಾಚುವ ದಾನಿಗಳು PREYASH GOWDA C M ಮಗುವಿನ ಖಾತೆ ಸಂಖ್ಯೆ: 12305100156240, IFSC CODE: PKGB0012305ಗೆ ಸಹಾಯ ಮಾಡಲು ಕೋರಿದರು.ಗೋಷ್ಠಿಯಲ್ಲಿ ಮಗು ಪ್ರೆಯಶ್ ಗೌಡ, ಮಗುವಿನ ಅಜ್ಜಿ ಸರಿತಾ ಇದ್ದರು.
ಕರಾಟೆ: ವರುಣವಿಗೆ ಪ್ರಥಮ ಸ್ಥಾನಮಂಡ್ಯ: ತಾಲೂಕಿನ ಗೊರವಾಲೆ ಸರ್ಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ವರುಣವಿರವರು ಮಳವಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಕರಾಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಅವರು ತಿಳಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿನಿಗೆ ಕರಾಟೆ ತರಬೇತುದಾರ ನಾರಾಯಣ್ ಹಾಗೂ ಮಹಾದೇವ ಶುಭ ಹಾರೈಸಿದ್ದಾರೆ.