ಸಾರಾಂಶ
ತರೀಕೆರೆ ಪುರಸಭೆ ಕಾರ್ಯಾಲಯದಿಂದ ಆಯವ್ಯಯ ಪೂರ್ವಬಾವಿ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆಪುರಸಭೆ ವತಿಯಿಂದ ಪೌರಕಾರ್ಮಿಕರಿಗೆ ಪಟ್ಟಣದಲ್ಲಿ ವಿಶೇಷ ಸೌಲಭ್ಯವುಳ್ಳ ವಿಶ್ರಾಂತಿ ಗೃಹ ನಿರ್ಮಿಸಬೇಕೆಂದು ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಸಲಹೆ ನೀಡಿದರು.
ಪುರಸಭಾ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆ ಮತ್ತ್ತು 2024-25ನೇ ಸಾಲಿನ ಆಯವ್ಯಯ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಪ್ರಾರಂಭದಲ್ಲಿ ಮಾತನಾಡಿ, ಪ್ರತಿನಿತ್ಯ ಇಡೀ ಪಟ್ಟಣ ಸ್ವಚ್ಛವಾಗಿಡಲು ಪೌರಕಾರ್ಮಿಕರು ಶ್ರಮಿಸುತ್ತಾರೆ. ಪುರಸಭೆ ಪೌರಕಾರ್ಮಿಕರಿಗೆ ಸುಸಜ್ಜಿತ ವಿಶ್ರಾಂತಿಗೃಹ ನಿರ್ಮಿಸ ಬೇಕು. ಪಟ್ಟಣದ ಸ್ವಚ್ಛತೆ, ಸೌಂದರ್ಯ ವೃದ್ದಿಗೆ ಐ.ಇ.ಸಿ.ಕಾರ್ಯಕ್ರಮಕ್ಕೆ ಸರ್ಕಾರದಿಂದ ನಿಗಧಿ ಪಡಿಸಿದ ಹಣ ಸಾಲದೇ ಇದ್ದಲ್ಲಿ ಆಯವ್ಯಯದಲ್ಲಿ ಪುರಸಭೆ ಅನುದಾನದಲ್ಲಿ ಹಣ ಕಾಯ್ದಿರಿಸಬೇಕೆಂದು ಹೇಳಿದರು.ಪರಿಸರ ಸ್ನೇಹಿ ಆಟೋ ಟಿಪ್ಪರ್.ಗಳುಃ
ಈಗ ಉಪಯೋಗಿಸುತ್ತಿರುವ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳು ಸುಸ್ಥಿತಿಯಲ್ಲಿರದೆ ಇರುವುದರಿಂದ ಟಿಪ್ಪರ್ ನಿರ್ವಹಣೆ ಖರ್ಚುಗಳು ಜಾಸ್ತಿ., ಅಂತಹ ಆಟೋ ಟಿಪ್ಪರ್ ಗಳನ್ನು ಸ್ಕ್ಯಾಪ್ ಮಾಡಿಸಿ ವಿದ್ಯುತ್ ಚಾಲಿತ ಪರಿಸರ ಸ್ನೇಹಿ ಆಟೋ ಟಿಪ್ಪರ್ ಗಳನ್ನು ಖರೀದಿಸಬೇಕು. ಪಟ್ಟಣದಲ್ಲಿರುವ ಪ್ರಮುಖ ಕೆರೆಗೆ ಬೋಟಿಂಗ್ವ್ಯವಸ್ಥೆ ಮಾಡಿ ಕೆರೆ ಸುತ್ತಲೂ ಪಾದಚಾರಿ ಮಾರ್ಗ ನಿರ್ಮಿಸಿ ಸಾಧ್ಯವಾದರೆ ಸ್ಥಳಾವಕಾಶವಿದ್ದರೆ ಅಲ್ಲಿ ಚಿಕ್ಕ ಉದ್ಯಾನ ನಿರ್ಮಿಸಬಹುದು ಎಂದು ಹೇಳಿದರು.ವಾಹನ ಶೆಡ್ ನಿರ್ಮಾಣ ಅಗತ್ಯಃ
ಪುರಸಭೆಗೆ ಸಂಬಂಧಿಸಿದ ವಾಹನಗಳನ್ನು ಸುರಕ್ಷಿತವಾಗಿ ನಿಲ್ಲಿಸಲು ಬಿಸಿಲು, ಗಾಳಿ, ಮಳೆಗೆ ಹಾಳಾಗದಂತೆ ಸುರಕ್ಷತೆ ದೃಷ್ಟಿಯಿಂದ ವಾಹನ ಶೆಡ್ ನಿರ್ಮಿಸಬೇಕು. ಪ್ಲಾಸ್ಟಿಕ್ ಮುಕ್ತ ತರೀಕೆರೆ ನಗರವಾಗಿಸಲು, ಪಟ್ಟಣದ ಮಹಿಳಾ ಸ್ವಸಹಾಯ ಸಂಘಗಳನ್ನು ಉಪಯೋಗಿಸಿಕೊಂಡು ಪ್ಲಾಸ್ಟಿಕ್.ಗೆ ಪರ್ಯಾಯ ವಸ್ತುಗಳನ್ನು ತಯಾರಿಸಲು ಮತ್ತು ಸ್ವಸಹಾಯ ಸಂಘಗಳಿಗೆ ಯಂತ್ರೋಪಕರಣ ಖರೀದಿಸಲು ಅರ್ಥಿಕ ನೆರವು ಕಲ್ಪಿಸಬೇಕು ಎಂದು ಹೇಳಿದರು.ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಸಾಕಷ್ಟು ಯಂತ್ರೋಪಕರಣ ಅಳವಡಿಸಿದ್ದು, ಇದರ ನಿರ್ವಹಣೆ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಲು ಹೊರಗುತ್ತಿಗೆ ಅಧಾರದ ಮೇರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಡಾಟಾ ಎಂಟ್ರಿ ಅಪರೇಟರ್ ಗಳನ್ನು ಮುಂದುವರಿಸಬೇಕು. ಹಬ್ಬ ಹರಿದಿನಗಳಲ್ಲಿ ವಿಶೇಷ ಭತ್ಯ ನೀಡಬೇಕು ಎಂದು ಹೇಳಿದರು,
ಜನಸಂಧಣಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಣೆ ಮತ್ತು ವಿಲೇವಾರಿಗೆ ರಿವೈಸ್ ವೆಂಡಿಂಗ್ ಯಂತ್ರಗಳನ್ನು ಆಯ್ದ ಜಾಗದಲ್ಲಿ ಅಳವಡಿಸಬೇಕು. ವಿದ್ಯುತ್ ಚಾಲಿತ ಬೈಕ್ ಮತ್ತು ಕಾರ್ ಗಳಿಗೆ ರಾ.ಹೆ.ಮತ್ತು ಪುರಸಭೆಗೆ ಸಂಬಂದಿಸಿದ ಸ್ಥಳ ಗಳಲ್ಲಿ ವಿದ್ಯುತ್ ಚಾರ್ಜರ್ ಸ್ಟೇಷನ್ ನಿರ್ಮಿಸಿ ನೆಲ ಬಾಡಿಗೆ ಪಡೆಯುವುದು ಎಂಬುದೂ ಸೇರಿದಂತೆ ಅನೇಕ ಸಲಹೆ ಗಳನ್ನು ನೀಡಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ, ಪುರಸಭೆ ನಾಮಿನಿ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ವ್ಯವಸ್ಥಾಪಕ ವಿಜಯಕುಮಾರ್, ಪರಿಸರ ಅಭಿಯಂತರರಾದ ತಾಹಿರಾ ತಸ್ನೀಂ, ಕಂದಾಯ ಅಧಿಕಾರಿ ಮಂಜುನಾಥ್, ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.
11ಕೆಟಿಆರ್.ಕೆ.5ಃತರೀಕೆರೆಯಲ್ಲಿ ಪುರಸಭೆಯಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆ ಮತ್ತು
2024-25ನೇ ಸಾಲಿನ ಆಯವ್ಯಯ ಬಜೆಟ್ ಪೂರ್ವಬಾವಿ ಸಭೆ ನಡೆಯಿತು. ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.