ಸಾರಾಂಶ
ಜನಸಾಮಾನ್ಯರ ನೋವು- ನಲಿವುಗಳಿಗೆ ಕೂಡಲೇ ಸ್ಪಂದಿಸುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಳಕಳಿ ಅನುಕರಣೀಯ.
ಕುರುಗೋಡು: ಧರ್ಮಾಚರಣೆ, ಕಲೆ, ಸಂಸ್ಕೃತಿಯಲ್ಲಿ ರಾಜ್ಯಕ್ಕೆ ಶ್ರೇಷ್ಠ ಸ್ಥಾನವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಅಂಗಳೂರು ತಿಳಿಸಿದರು.ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಮಹಾಲಕ್ಷ್ಮಿ ಪೂಜೆ ಅಂಗವಾಗಿ ಜರುಗಿದ ಧರ್ಮಸಭೆಯಲ್ಲಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳಾ ಸಬಲೀಕರಣಕ್ಕಾಗಿ ಆರ್ಥಿಕ ವಹಿವಾಟು ನಡೆಸುತ್ತಿದೆ. ಜತೆಗೆ ಪುರಾತನ ದೇವಸ್ಥಾನಗಳ ಪುನರುಜ್ಜೀವನ, ಹೊಸ ದೇವಸ್ಥಾನಗಳ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಡೆಸ್ಕ್, ಮದ್ಯವರ್ಜನ ಶಿಬಿರ, ವಿದ್ಯಾರ್ಥಿವೇತನ, ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನ, ರೈತರಿಗೆ ಕೃಷಿ ಮಾರ್ಗದರ್ಶನ ನೀಡುವ ಯೋಜನೆ ಜಾರಿಗೆ ತಂದಿದೆ ಎಂದರು.
ಜಿಪಂ ಮಾಜಿ ಸದಸ್ಯ ಕೆ. ಭೀಮಲಿಂಗಪ್ಪ ಮಾತನಾಡಿ, ಜನಸಾಮಾನ್ಯರ ನೋವು- ನಲಿವುಗಳಿಗೆ ಕೂಡಲೇ ಸ್ಪಂದಿಸುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಳಕಳಿ ಅನುಕರಣೀಯವಾದುದು ಎಂದರು.ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸುಲಭವಾಗಿ ಸಾಲ ಸೌಲಭ್ಯ ನೀಡಿ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಎನ್. ಪಂಪಾಪತಿ, ಉಪಾಧ್ಯಕ್ಷೆ ರಾಜಮ್ಮ ಎಚ್. ಹುಲುಗಪ್ಪ, ಜೆ. ವೀರೇಶ್ ಗೌಡ, ಗ್ರಾಪಂ ಸದಸ್ಯರಾದ ಎಸ್.ಎಂ. ಅಡಿವೆಯ್ಯ ಸ್ವಾಮಿ, ನಾಗರಾಜ ಗೌಡ, ಅಂಬರೀಶ್ ಗೌಡ, ಮಲ್ಲಮ್ಮ, ಹಿರಿಯ ಆರೋಗ್ಯ ಸಹಾಯಕ ಚಿದಾನಂದ, ಸತೀಶ್, ಕೃಷಿ ಮೇಲ್ವಿಚಾರಕ ಪ್ರಭು ಹಿರೇಮಠ, ಹನುಮಂತಪ್ಪ, ಶಿವಪ್ರಕಾಶ್, ಚಂದ್ರು, ಶೇಕ್ಷಾವಲಿ ಮತ್ತು ಪಾರ್ವತಿ ಇದ್ದರು.