ವೈಜ್ಞಾನಿಕ ಮನೋಭಾವ ಅಗತ್ಯ

| Published : Mar 05 2025, 12:31 AM IST

ಸಾರಾಂಶ

ಹೊಳಲ್ಕರೆ ಸ್ನೇಹ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ವಿಶ್ವ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನ ಕ್ಷೇತ್ರಕ್ಕೆ ದುಡಿದವರ ಗೌರವಿಸಲಾಯಿತು.

ವಿಶ್ವ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನಿ ಸೋಮೇಶ್ ಕನ್ನಡ ಪ್ರಭವಾರ್ತೆ ಹೊಳಲ್ಕೆರೆ

ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಶಿಕ್ಷಕರಾದವರು ಮಾಡಬೇಕಿದೆ. ಬಹುತೇಕ ವಿದ್ಯಾರ್ಥಿಗಳು ಬರೀ ಇಂಜಿನಿಯರಿಂಗ್, ದಂತ, ವೈದ್ಯಕೀಯ, ಐಟಿಐ, ಪಾಲಿಟೆಕ್ನಿಕ್ ಕಡೆ ಹೋಗುತ್ತಿದ್ದಾರೆ. ವಿಜ್ಞಾನದ ಕಡೆ ಯಾರು ಬರುತ್ತಿಲ್ಲ. ಮಕ್ಕಳಿಗೆ ಚಿಕ್ಕನಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿ ಬರಿಸುವ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಸೋಮೇಶ್ ಹೇಳಿದರು.

ಹೊಳಲ್ಕೆರೆ ಪಟ್ಟಣದ ಹೊರವಲಯದ ಸ್ನೇಹ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ವಿಶ್ವ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿಜ್ಞಾನ ಎನ್ನುವುದು ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ವಿಜ್ಞಾನ ಇಲ್ಲದೆ ನಮ್ಮ ಬದುಕು ಇಲ್ಲ ಎನ್ನುವಂತಾಗಿದೆ. ವಿಜ್ಞಾನ ನಮಗೆ ಏನೆಲ್ಲಾ ಅವಿಷ್ಕಾರ ನೀಡಿದ್ದು ಎಲ್ಲ ಅನುಭವಿಸುತ್ತಿದೇವೆ . ಮುಂದಿನ ಪೀಳಿಗೆ ವಿಜ್ಞಾನದ ಅವಿಷ್ಕಾರಗಳನ್ನು ಅನುಭವಿಸಲು ಇಂದಿನ ಮಕ್ಕಳು ವಿಜ್ಞಾನದ ಬಗ್ಗೆ ಅಸಕ್ತಿಯನ್ನು ಬೆಳಸಿಕೊಳ್ಳಬೇಕಿದೆ ಎಂದರು.

ಜಿಸಿಟಿಇಯ ಮಾಜಿ ಜಂಟಿ ನಿರ್ದೆಶಕ ಗುರುಪ್ರಸಾದ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಹೊರ ಹಾಕಲು ವಿಜ್ಞಾನ ವಸ್ತು ಪ್ರದರ್ಶನ ವೇದಿಕೆಯಾಗಿದೆ. ಮಕ್ಕಳಾದವರು ಪ್ರಶ್ನೆ ಮಾಡದೇ ಏನನ್ನೂ ಸಹಾ ಒಪ್ಪಿಕೊಳ್ಳ ಬೇಡಿ. ಯಾವುದೇ ವಿಷಯವಾದರೂ ಸಹಾ ಅದರ ಬಗ್ಗೆ ಆಳವಾಗಿ ತಿಳಿದುಕೊಂಡು ಪ್ರಶ್ನೆಯನ್ನು ಮಾಡಿ ಸರಿಯಾದ ಉತ್ತರ ದೂರಕಿದ ನಂತರ ಒಪ್ಪಿಕೊಳ್ಳಿ, ಇಂದಿನ ವಿಜ್ಞಾನದ ಆವಿಷ್ಕಾರದ ಫಲವಾಗಿ ನಾವು ಕುಳಿತ್ತಲ್ಲಿಯೇ ಪ್ರಪಂಚದ ವಿಷಯವನ್ನು ತಿಳಿಯುತ್ತೇವೆ, ಇದು ವಿಜ್ಞಾನದ ಸಾಧನೆಯಾಗಿದೆ ಎಂದರು.

ವಿಜ್ಞಾನ ಪೌಂಡೇಷೇನ್‍ ಕಾರ್ಯದರ್ಶಿಗಳಾದ ಹೆಚ್.ಎಸ್.ಟಿ.ಸ್ವಾಮಿ ಮಾತನಾಡಿ, ನೀವುಗಳೆಲ್ಲರೂ ಬಾಲ ವಿಜ್ಞಾನಿಗಳಾಗಿದ್ದು ನಿಮ್ಮಲ್ಲಿನ ಆಪಾರವಾದ ವಿಜ್ಞಾನ ಆಸಕ್ತಿ ಮುಂದಿನ ದಿನಮಾನದಲ್ಲಿ ನಿಮ್ಮನ್ನು ವಿಜ್ಞಾನಿಗಳನ್ನಾಗಿ ಮಾಡುತ್ತದೆ ಎಂದರು. ಸ್ನೇಹ ಪಬ್ಲಿಕ್ ಸ್ಕೂಲ್‍ ಅಧ್ಯಕ್ಷ ಜೆ.ಎಸ್. ಮಂಜುನಾಥ್, ಕಾರ್ಯದರ್ಶಿ ಜೆ.ಎಸ್.ವಸಂತ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಇದ್ದರು.