ತೀವ್ರ ಬರ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ, ಬತ್ತಿ ಹೋಗುತ್ತಿರುವ ಅಂತರ್ಜಲ ಹೀಗೆ ಸಾಲು ಸಾಲು ಸಂಕಷ್ಟಗಳ ನಡುವೆ ಮಳೆಗಾಲದಲ್ಲಿಯೂ ತೀವ್ರ ಬೇಸಿಗೆಯ ಬಿರುಬಿಸಿಲಿಂದಾಗಿ ಬೆಂದು ಹೋಗಿದ್ದ ಜಿಲ್ಲೆ ಜನರನ್ನು ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣವು ತಂಪಿನ ಅನುಭೂತಿಗೆ ಜಾರುವಂತೆ ಮಾಡಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ತೀವ್ರ ಬರ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ, ಬತ್ತಿ ಹೋಗುತ್ತಿರುವ ಅಂತರ್ಜಲ ಹೀಗೆ ಸಾಲು ಸಾಲು ಸಂಕಷ್ಟಗಳ ನಡುವೆ ಮಳೆಗಾಲದಲ್ಲಿಯೂ ತೀವ್ರ ಬೇಸಿಗೆಯ ಬಿರುಬಿಸಿಲಿಂದಾಗಿ ಬೆಂದು ಹೋಗಿದ್ದ ಜಿಲ್ಲೆ ಜನರನ್ನು ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣವು ತಂಪಿನ ಅನುಭೂತಿಗೆ ಜಾರುವಂತೆ ಮಾಡಿದೆ.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ವಿವಿಧ ತಾಲೂಕುಗಳ ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಎರಡು ದಿನಗಳಿಂದ ಅಲ್ಪಸ್ವಲ್ಪ ಪ್ರಮಾಣ ದಲ್ಲಿ ಮಳೆಯಾಗುತ್ತಿದ್ದು, ಇದರಿಂದಾಗಿ ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿದೆ. ತಿಂಗಳಿನಿಂದ ಬಿರುಬಿಸಿಲಿನಿಂದಾಗಿ ಕಂಗಾಲಾಗಿದ್ದ ಜನರು ಇದು ಮಳೆಗಾಲವೋ ಇಲ್ಲವೇ ಬೇಸಿಗೆ ಕಾಲವೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹಗಲಿನಲ್ಲಿ ಶೇ.35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಅದೇ ರೀತಿ ರಾತ್ರಿಯಲ್ಲಿ ಶೇ.27ರಷ್ಟು ಕನಿಷ್ಠ ತಾಪಮಾನದಿಂದಾಗಿ ತೀವ್ರ ಶಕೆಯನ್ನು ಅನುಭವಿಸುತ್ತಿದ್ದ ಜನರು ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ನೆಮ್ಮದಿಗೆ ಜಾರಿ ಸಂತೋಷಗೊಂಡಿದ್ದಾರೆ.
ಜಿಲ್ಲೆ ದೇವದುರ್ಗ ತಾಲೂಕಿನ 14.4 ಮಿಮೀ, ಲಿಂಗಸುಗೂರಿನಲ್ಲಿ 9.2 ಮಿ.ಮೀ., ಮಾನ್ವಿಯಲ್ಲಿ 10.1 ಮಿ.ಮೀ., ರಾಯಚೂರಿನಲ್ಲಿ 20.3 ಮಿ.ಮೀ., ಸಿಂಧನೂರಿ ನಲ್ಲಿ 9.5, ಮಸ್ಕಿಯಲ್ಲಿ 6.4, ಸಿರವಾರದಲ್ಲಿ 9.7 ಮತ್ತು ಅರಕೇರಾ ತಾಲೂಕಿನಲ್ಲಿ 8.7 ಮಿ.ಮೀ. ನಷ್ಟು ಮಳೆಯಾಗಿದ್ದು, ಒಟ್ಟಾರೆ ಜಿಲ್ಲೆಯಾದ್ಯಂತ 11.5 ಮಿ.ಮೀ., ನಷ್ಟು ಮಳೆಯಾಗಿದೆ.ವಂದಲಿ ಆಂಜನೇಯ ಗುಡಿ ಗೋಪುರಕ್ಕೆ ಬಡಿದ ಸಿಡಿಲು: ಜಿಲ್ಲೆ ದೇವದುರ್ಗ ತಾಲೂಕಿನ ಐತಿಹಾಸಿಕ ವಂದಲಿ ಆಂಜನೇಯ ದೇವಸ್ಥಾದ ಮಹಾದ್ವಾರದ ಗೋಪುರಕ್ಕೆ ಇತ್ತೀಚೆಗೆ ಸಿಡಿಲು ಬಡಿದು ಭಾರಿ ಹಾನಿಯಾಗಿದ್ದು, ಗೋಪುರಕ್ಕೆ ಸಿಡಿಲು ಬಡಿದಿರುವುದು ಭಕ್ತರಲ್ಲಿ ಆತಂಕ ಉಂಟು ಮಾಡಿದೆ. ವಂದಲಿ ಆಂಜನೇಯ ದೇವಸ್ಥಾನದ ಪ್ರಾಂಗಣದ ಪ್ರವೇಶದ ಮಹಾಧ್ವಾರಕ್ಕೆ ಲಕ್ಷಾಂತರ ಹಣದಿಂದ ಬೖಹತ್ ಗೋಪುರ ನಿರ್ಮಿಸಲಾಗಿತ್ತು. ಮಹಾದ್ವಾರದ ಗೋಪುರ ನಿರ್ಮಾಣ ಪೂರ್ಣಗೊಂಡಿತ್ತು. ಭಾನುವಾರ ರಾತ್ರಿ ಭಾರಿ ಸಿಡಿಲು ಬಡಿದು ಮಹಾ ಗೋಪುರದ ಹಲವು ಭಾಗಗಳು ಛಿದ್ರಗೊಂಡಿದ್ದರೆ. ಅಲಂಕಾರಿಕ ಗೊಂಬೆಗಳ ದೇಹದ ಭಾಗಗಳು ಮುರಿದು ಬಿದ್ದು ಮಹಾಗೋಪುರದಲ್ಲಿ ಭಾರಿ ಬಿರುಕುಗಳು ಉಂಟಾಗಿವೆ. ಮಹಾಗೋಪುರದ ಮೇಲೆ ಹಾರಿಸಲಾಗಿದ್ದ ಭಗವಾಧ್ವಜಗಳು ಸುಟ್ಟು ಕರಕಲಾಗಿವೆ. ಮಹಾಗೋಪುರಕ್ಕೆ ಸಿಡಿಲು ಬಡಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ.