ಸಾರಾಂಶ
ಕುರುಗೋಡು: ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸೋಮವಾರ ಸಡಗರದಿಂದ ಆಚರಿಸಿದರು.
ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಅಕ್ಬರ್ ಷಾ ಜಾಮಿಯಾ ಮಸೀದಿ ಮತ್ತು ಬಳ್ಳಾರಿ ರಸ್ತೆಯಲ್ಲಿರುವ ಮದೀನಾ ಮಸೀದಿಯಿಂದ ಮೆಕ್ಕ ಮತ್ತು ಮದೀನಾ ಮಾದರಿಗಳನ್ನು ಮೆರವಣಿಗೆ ಮಾಡಲಾಯಿತು.ಸ್ತಬ್ಧಚಿತ್ರಗಳನ್ನು ಹೊತ್ತ ಅಲಂಕೃತ ಟ್ರ್ಯಾಕ್ಟರ್‌ಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗೆ ಮತ್ತು ಸಾರ್ವಜನಿಕರಿಗೆ ಕೆಲವರು ತಂಪು ಪಾನೀಯ, ಬಾಳೆಹಣ್ಣು ಮತ್ತು ಸಿಹಿ ತಿನಿಸು ವಿತರಿಸಿ, ಭಾವೈಕ್ಯತೆ ಮೆರೆದರು.
ಮುಸ್ಲಿಂ ಸಮಾಜದ ಮುಖಂಡ ಖಾದರ್ ಬಾಷಾ, ಶಾಮೀಯಾ ಮೌಲಾಲಿ, ಹನೀಫ್, ಹೊನ್ನೂರ್ ಸಾಬ್, ಸಿದ್ದಿಸಾಬ್; ಖಾಸಿಂಸಾಬ್, ನಭಿಸಾಬ್, ಮಾಬುಸಾಬ್, ಹೊನ್ನೂರುಸಾಬ್, ಗಿಳಿಮಾಬುಸಾಬ್, ಕಡಿಗೆಮಿಷನ್, ಬಿ.ಪಿ.ಮೊಹಮ್ಮದ್ ಸಾಬ್, ಸಿರಿಗೇರಿ ಹೊನ್ನೂರುಸಾಬ್, ಸಾದಿಕ್, ಏರ್ಟೆಲ್ ಬಾಷಾ, ಟ್ರ್ಯಾಕ್ಟರ್ ಬಾಷಾ, ಫಿಲ್ಟರ್ ವಾಟರ್ ಮೆಹೆಬೂಬ್, ಹಾಜೀಸಾಬ್, ಹೊನ್ನೂರುಸಾಬ್, ಅನ್ವರ್‌ಬಾಷಾ, ಮೌಲ, ಮುನಾಫ್, ಕಲೀಲ್ ಭಾಗವಹಿಸಿದ್ದರು.ಬಾದನಹಟ್ಟಿಯಲ್ಲಿ ಈದ್ ಮಿಲಾದ್: ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನು ಗ್ರಾಮದ ಮುಸ್ಲಿಂ ಸಮಾಜದ ಬಂಧುಗಳು ಸಂಭ್ರಮದಿಂದ ಆಚರಿಸಿದರು. ಮಕ್ಕಾ ಮದೀನಾ ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ ಗ್ರಾಮದ ಸುನ್ನೀಜಾಮೀಯಾ ಮಸೀದಿಯಿಂದ ಪ್ರಾರಂಭವಾಗಿ ಮುಖ್ಯವೃತ್ತ, ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ, ಆಟೋ ಸ್ಟ್ರ್ಯಾಂಡ್, ವಾಲ್ಮೀಕಿ ನಗರ ಪ್ರದೇಶಗಳಲ್ಲಿ ಸಂಚರಿಸಿ ಪುನಃ ಮಸೀದಿಗೆ ತಲುಪಿತು. ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜದ ಮುಖಂಡ ಸರ್ಮಾಸ್, ಬಷೀರ್, ಹೊನ್ನೂರ್ವಲಿ, ಯಲ್ಲಾಪುರ ಅಲ್ಲಾಸಾಬ್, ಮಜೀದ್‌ಸಾಬ್, ಮುಕ್ತಿಯಾರ್, ವಲಿಸಾಬ್, ಹಸನ್‌ಸಾಬ್, ಸತ್ತಾರ್‌ಸಾಬ್, ಜಡೇಸಾಬ್, ಟಿ. ಬಾಷಾಸಾಬ್, ಸಿದ್ದಿಸಾಬ್, ವೆಲ್ಡಿಂಗ್ ಚಾಂದ್‌ಬಾಷಾ, ಖಾಸಿಂಸಾಬ್, ಮೆಡಿಕಲ್ ಬಡೇಸಾಬ್, ಮುಲ್ಲಾರ್ಮಾಬುಸಾಬ್, ಉಮ್ರಿಸಾಬ್ ಭಾಗವಹಿಸಿದ್ದರು. ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದವರು ಹೊಸ ಉಡುಪುಗಳನ್ನು ಧರಿಸಿ, ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು.