ಸಹಕಾರಿ ಸಂಘ ಯಶಸ್ವಿಗೆ ಸೇವಾ ಮನೋಭಾವನೆ ಅಗತ್ಯ: ಹಂಪಯ್ಯ ನಾಯಕ

| Published : Feb 12 2024, 01:33 AM IST

ಸಹಕಾರಿ ಸಂಘ ಯಶಸ್ವಿಗೆ ಸೇವಾ ಮನೋಭಾವನೆ ಅಗತ್ಯ: ಹಂಪಯ್ಯ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಮಾನ್ವಿ ಪಟ್ಟಣದಲ್ಲಿ ನಮ್ಮ ಆಸರೆ ಪತ್ತಿನ ಸೌಹಾರ್ದ ಸಹಾಕರಿ ಸಂಘದ ನೂತನ ಕಚೇರಿಯನ್ನು ಶಾಸಕ ಹಂಪಯ್ಯ ನಾಯಕ ಉದ್ಘಾಟಿಸಿದರು.

ಮಾನ್ವಿ: ಸಹಕಾರಿಯು ಯಶಸ್ವಿ ಆಗಬೇಕಾದಲ್ಲಿ ಸಹಾಕರಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೇವ ಮನೋಭಾವನೆ ಉಳ್ಳವರಾಗಿರಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಪಟ್ಟಣದಲ್ಲಿ ನಮ್ಮ ಆಸರೆ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಸಮಾಜದಲ್ಲಿನ ಆರ್ಥಿಕ ದುರ್ಬಲರಿಗೆ, ರೈತರಿಗೆ, ಸಣ್ಣ ವ್ಯಾಪರಸ್ಥರಿಗೆ, ಮಹಿಳೆಯರಿಗೆ ಸಂಕಷ್ಟದ ಸಮಯದಲ್ಲಿ ಸುಲಭವಾಗಿ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸ್ಪಂದಿಸುತ್ತಿವೆ. ಹಾಗೂ ಗ್ರಾಹಕರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದಾಗ ಮಾತ್ರ ಸಹಕಾರಿ ಸಂಸ್ಥೆಗಳು ಹೆಚ್ಚು ಜನರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಲ್ಮಠ ಶ್ರೀ ವಿರುಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಸೆಂಟ್‌ ಮೇರಿಸ್ ಚರ್ಚ್‌ನ ಗುರುಗಳಾದ ಜ್ಞಾನ ಪ್ರಕಾಶಂ, ಮಾಜಿ ಶಾಸಕ ಗಂಗಾಧರನಾಯಕ, ಸಹಕಾರಿಯ ಅಧ್ಯಕ್ಷ ಎ.ಬಾಲಸ್ವಾಮಿ ಕೋಡ್ಲಿ, ನಿರ್ದೆಶಕರಾದ ಶರಣಯ್ಯನಾಯಕ ಕೆ.ಗುಡದಿನ್ನಿ, ವಸಂತ ಕೋಡ್ಲಿ, ಪ್ರೀತಂ ಕೊಡ್ಲಿ, ಪ್ರಭುರಾಜ ಕೊಡ್ಲಿ ಸೇರಿದಂತೆ ಇನ್ನಿತರರು ಇದ್ದರು.