ಸಾರಾಂಶ
ಹಾವೇರಿ: ಸಿಡಿಲು ಬಡಿದು ಕುರಿಗಾಹಿ ತಂದೆ ಸ್ಥಳದಲ್ಲಿಯೇ ಮೃತಪಟ್ಟರೆ, ಮಗ ಗಾಯಗೊಂಡ ಘಟನೆ ಶಿಗ್ಗಾಂವಿ ತಾಲೂಕಿನ ಮುಕಬಸರಿಕಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ (40) ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ. ಆಕಾಶ್ ಮಾಳಪ್ಪ(19) ಗಾಯಗೊಂಡ ಯುವಕ.ಗುರುವಾರ ಸಂಜೆ ಕುರಿ ಮೇಯಿಸುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ತಂದೆ ಮಾಳಪ್ಪ ಗಡ್ಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಾಯಾಳು ಆಕಾಶ ಅವರನ್ನು ಶಿಗ್ಗಾಂವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಿಗ್ಗಾಂವಿ ತಹಸೀಲ್ದಾರ್ ರವಿ ಕೊರವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಾತಿ ಭೇದ ಮರೆತು ಏಕತೆ ಕಾಪಾಡೋಣ
ರಾಣಿಬೆನ್ನೂರು: ಭಯೋತ್ಪಾದಕರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಕ್ರೂರ ಕೃತ್ಯಗಳೇ ಇವರ ಧರ್ಮವಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಖಾಸಿಂ ರಬ್ಬಾನಿ ತಿಳಿಸಿದರು.ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರು ಸಾವಿಗೀಡಾಗಿರುವ ಘಟನೆ ಖಂಡಿಸಿ ನಗರದ ಪೋಸ್ಟ್ ಸರ್ಕಲ್ ಬಳಿ ಬುಧವಾರ ರಾತ್ರಿ ಎಸ್‌ಡಿಪಿಐ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ಹಾಗೂ ಮೃತರ ಆತ್ಮಕ್ಕೆ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.ದೇಶದ ಶಾಂತತೆ ಮತ್ತು ಭದ್ರತೆಯನ್ನು ಭಂಗಗೊಳಿಸುವ, ಅಮಾಯಕರ ರಕ್ತ ಹರಿಸಲು ಹಿಂದೆ ಮುಂದೆ ನೋಡದ ಭಯೋತ್ಪಾದಕರ ವಿರುದ್ಧ ದೇಶದ ಪ್ರತಿಯೊಬ್ಬ ನಾಗರಿಕನೂ ಒಗ್ಗಟ್ಟಾಗಿ ನಿಲ್ಲಬೇಕಾದ ಅವಶ್ಯಕತೆಯಿದೆ. ನಾವು ಮೊದಲು ಭಾರತೀಯರಾಗಬೇಕು. ಧರ್ಮ, ಜಾತಿ, ಭಾಷೆ ಎಂಬ ಭೇದಗಳನ್ನು ಮರೆತು ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು ಎಂದರು.ಸಂಘಟನೆಯ ಸ್ಥಳೀಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಲ್ಮಾನ್ ಖತೀಬ್ ಮಾತನಾಡಿ, ಹಿಂಸೆಯನ್ನು ಪ್ರಚೋದಿಸುವ ಮತ್ತು ದೇಶದ ವಿರುದ್ಧ ವಿಷ ಹರಡುವವರ ವಿರುದ್ಧ ದೇಶದ ಪ್ರತಿಯೊಬ್ಬರೂ ಏಕಮತದಿಂದ ನಿಲ್ಲಬೇಕಾಗಿದೆ ಎಂದರು.ಸಂಘಟನೆಯ ಉಪಾಧ್ಯಕ್ಷ ಇರ್ಷಾದ ಕುಂಚೂರ, ಸದ್ದಾಂ ಕಠಾರಿ, ಮೊಯಿನ ಅಲಿ, ಸದ್ದಾಂ ಕನವಳ್ಳಿ, ಸದಾಖತ, ನೂರುದ್ದೀನ, ಮುಸ್ತಫಾ ದಾರೋಗರ, ಕರೀಂ ಹಾವನೂರ, ತೌಸಿಫ ಪಠಾಣ, ಉಮರ, ತುಹಿದ ಮತ್ತಿತರರಿದ್ದರು.