ಮಹತ್ವದ ಘೋಷಣೆಗಳಿಲ್ಲದ ಮಾಮೂಲಿ ಬಜೆಟ್

| Published : Feb 02 2025, 01:03 AM IST

ಸಾರಾಂಶ

ದೊಡ್ಡಬಳ್ಳಾಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಸಂಸತ್‌ನಲ್ಲಿ ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರದ ಗಮನೀಯ ಅಂಶಗಳ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಹಜವಾಗಿಯೇ ಬಿಜೆಪಿ-ಜೆಡಿಎಸ್‌ ಪಕ್ಷಗಳು ಬಜೆಟ್‌ ಅನ್ನು ಸ್ವಾಗತಿಸಿ ಇದೊಂದು ಪ್ರಗತಿಪರ ಬಜೆಟ್‌ ಎಂದು ಗುಣಗಾನ ಮಾಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್, ಇದು ದೂರದೃಷ್ಟಿಯಿಲ್ಲದ ಅಂಕಿ-ಸಂಖ್ಯೆಗಳ ಲೆಕ್ಕಾಚಾರ ಅಷ್ಟೇ ಎಂದು ಟೀಕಿಸಿದೆ.

ದೊಡ್ಡಬಳ್ಳಾಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಸಂಸತ್‌ನಲ್ಲಿ ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರದ ಗಮನೀಯ ಅಂಶಗಳ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಹಜವಾಗಿಯೇ ಬಿಜೆಪಿ-ಜೆಡಿಎಸ್‌ ಪಕ್ಷಗಳು ಬಜೆಟ್‌ ಅನ್ನು ಸ್ವಾಗತಿಸಿ ಇದೊಂದು ಪ್ರಗತಿಪರ ಬಜೆಟ್‌ ಎಂದು ಗುಣಗಾನ ಮಾಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್, ಇದು ದೂರದೃಷ್ಟಿಯಿಲ್ಲದ ಅಂಕಿ-ಸಂಖ್ಯೆಗಳ ಲೆಕ್ಕಾಚಾರ ಅಷ್ಟೇ ಎಂದು ಟೀಕಿಸಿದೆ.

ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಅತಿ ಹೆಚ್ಚು ಅನುದಾನ ಒದಗಿಸಿದ್ದು, ವಿಜ್ಞಾನ ಕ್ಷೇತ್ರದಕ್ಕೆ ಅತಿ ಕಡಿಮೆ ಆದ್ಯತೆ ನೀಡಲಾಗಿದೆ. ಆರೋಗ್ಯ, ಇಂಧನ, ಸಮಾಜ ಕಲ್ಯಾಣ ವಲಯಗಳಿಗೆ ಮತ್ತಷ್ಟು ಉತ್ತೇಜನಕಾರಿ ಯೋಜನೆಗಳ ಅಗತ್ಯವಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಯೋಜನೆಗಳಿಲ್ಲ.

ಉಪನಗರ ರೈಲು ಯೋಜನೆ, ಮೆಟ್ರೋ ವಿಸ್ತರಣೆ, ಜವಳಿ ಕ್ಷೇತ್ರಕ್ಕೆ ನಿರೀಕ್ಷಿಸಲಾಗಿದ್ದ ಉತ್ತೇಜನಕಾರಿ ಯೋಜನೆಗಳು ಮರೀಚಿಕೆಯಾಗಿವೆ. ಕೈಗಾರಿಕೋದ್ಯಮಕ್ಕೆ ಹಾಗೂ ಔದ್ಯೋಗಿಕ ವಲಯಕ್ಕೆ ಒಂದಿಷ್ಟು ಆದ್ಯತೆ ದೊರೆತಿರುವುದು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಬಹುದು ಎಂದು ನಿರೀಕ್ಷಿಸಲಾಗಿದೆ.

(ಬಾಕ್ಸ್‌)

ಕೋಟ್ಸ್‌.............

ಎಲ್ಲ ವರ್ಗಗಳಿಗೂ ಆದ್ಯತೆ

ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ದೂರದೃಷ್ಟಿಯ ಬಜೆಟ್‌ ಇದಾಗಿದೆ. ಪ್ರಮುಖವಾಗಿ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಧ್ಯಮವರ್ಗದ ಉದ್ಯಮಗಳ ಸಬಲೀಕರಣ ಸಾಕಾರದ ಗುರಿ ಸಾಧನೆಗೆ ಉಪಯುಕ್ತವಾಗಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದ್ದು, ಎಲ್ಲ ವರ್ಗಗಳಿಗೂ ಆದ್ಯತೆ ನೀಡಲಾಗಿದೆ.

-ಧೀರಜ್‌ ಮುನಿರಾಜ್, ಶಾಸಕರು, ದೊಡ್ಡಬಳ್ಳಾಪುರ

-------.............

ರಾಜ್ಯವನ್ನ ಸಂಪೂರ್ಣ ನಿರ್ಲಕ್ಷ್ಯ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅಗತ್ಯ ಅನುದಾನ ನೀಡಿಲ್ಲ. ನಿರೀಕ್ಷೆಗಳು ಹುಸಿಯಾಗಿವೆ. ಕೆಲವರ್ಗಗಳಿಗೆ ಆದ್ಯತೆ ನೀಡಿ, ಕೆಲವು ಆದ್ಯತಾ ವಲಯಗಳನ್ನು ನಿರ್ಲಕ್ಷಿಸಲಾಗಿದೆ. ಮೂಲಸೌಕರ್ಯ, ರೈಲ್ವೆ, ಕೃಷಿಗೆ ಹೆಚ್ಚಿನ ಅನುದಾನ ಅಗತ್ಯವಿತ್ತು.

-ಟಿ.ವೆಂಕಟರಮಣಯ್ಯ, ಮಾಜಿ ಶಾಸಕರು, ದೊಡ್ಡಬಳ್ಳಾಪುರ

--------------------

ತೆರಿಗೆ ಮಿತಿ ಹೆಚ್ಚಳ ಸ್ವಾಗತಾರ್ಹ

ಪ್ರಸ್ತುತ ಬಜೆಟ್ ನಲ್ಲಿ ಆರ್ಥಿಕ ಹಿಂಜರಿತ, ಹಣದುಬ್ಬರ ಕಡಿವಾಣ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ರೂಪಿಸಲಾಗಿದೆ. ಈ ಬಜೆಟ್ ದೇಶದ ಬಡವ, ಯುವ, ಅನ್ನದಾತ ಮತ್ತು ಮಹಿಳಾ ಕೇಂದ್ರೀಕೃತವಾಗಿದೆ. 12 ಲಕ್ಷ ಆದಾಯದವರೆಗೂ ತೆರಿಗೆ ವಿನಾಯಿತಿ ನೀಡಿದ್ದು, ಮಧ್ಯಮ ವರ್ಗದ ಬಹುದಿನಗಳ ಬೇಡಿಕೆ ಈಡೇರಿದೆ.

-ಟಿ.ಎಸ್‌. ಉದಯ ಆರಾಧ್ಯ, ಜೆಡಿಎಸ್‌ ಯುವ ಮುಖಂಡ, ತೂಬಗೆರೆ

--

ಮುಂಚೂಣಿ ಆರ್ಥಿಕತೆಗೆ ಪೂರಕ

ದೇಶವನ್ನು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ಮುನ್ನಡೆಸಲು ಬಜೆಟ್‌ ಪೂರಕವಾಗಿದೆ. ಪ್ರಧಾನ ಮಂತ್ರಿ ಧನ-ಧಾನ್ಯ ಯೋಜನೆ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳಿಗೆ ಬ್ರಾಡ್ ಬ್ಯಾಂಡ್ ಒದಗಿಸುವ ಜನಪರ ಘೋಷಣೆಗಳಿದ್ದರೂ, ವಿದ್ಯಾರ್ಥಿಗಳಿಗೆ ಅನುಕೂಲವಾಗಬಲ್ಲ ಮತ್ತಷ್ಟು ಯೋಜನೆಗಳನ್ನು ನಿರೀಕ್ಷಿಸಲಾಗಿತ್ತು.

-ಜೆ.ವಿ.ಚಂದ್ರಶೇಖರ್, ವಾಣಿಜ್ಯ ಶಾಸ್ತ್ರ ಉಪನ್ಯಾಸಕರು, ದೊಡ್ಡಬಳ್ಳಾಪುರ

----------------------------

ಉದ್ಯೋಗ ಸೃಷ್ಟಿಗೆ ಆದ್ಯತೆ ಇಲ್ಲ

ತೆರಿಗೆ ಮಿತಿ ಪರಿಷ್ಕರಣೆ ಹಾಗೂ ಶೈಕ್ಷಣಿಕ ಸಾಲದ ಮೇಲಿನ ತೆರಿಗೆ ಇಳಿಕೆ ಸ್ವಾಗತಾರ್ಹ. ಆದರೆ ಕೃಷಿ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ನೀಡಿಲ್ಲ. ಭಾರತ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಆದರೆ ಉದ್ಯೋಗಾವಕಾಶಗಳ ಸೃಷ್ಟಿಗೆ ಹೆಚ್ಚು ಗಮನ ಹರಿಸಿಲ್ಲ. ರಾಜ್ಯ ರೈಲ್ವೆ ಯೋಜನೆಗಳಿಗೆ ಸಮರ್ಪಕ ಅನುದಾನ ದೊರೆತಿಲ್ಲ.

-ಎಂ.ಸಿ.ಮಂಜುನಾಥ್, ಅರ್ಥಶಾಸ್ತ್ರ ಅಧ್ಯಾಪಕರು, ದೊಡ್ಡಬಳ್ಳಾಪುರ

-------------

ಬಡವರಿಗೆ ಪ್ರಯೋಜನವಿಲ್ಲ:

ಇದು ಮಧ್ಯಮ ವರ್ಗದವರಿಗೆ ತೆರಿಗೆ ವಿಷಯದಲ್ಲಿ ಉತ್ತಮ ಬಜೆಟ್. ಆದರೆ ರೈತರಿಗೆ ಹಾಗೂ ಕಡುಬಡವರಿಗೆ ಅನುಕೂಲವಿಲ್ಲ. ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಯಾವುದೇ ರೀತಿಯ ದೂರಾಲೋಚನೆ ಇಲ್ಲದ ಬಜೆಟ್ ಇದಾಗಿದೆ. ಕೃಷಿಕರ ಹಕ್ಕೊತ್ತಾಯಗಳ ಈಡೇರಿಕೆಗೆ ಪೂರಕವಾದ ಯಾವುದೇ ಅಂಶಗಳೂ ಇಲ್ಲ.

-ಬಿ.ಎಸ್.ಚಂದ್ರಶೇಖರ್, ರಾಜ್ಯಾಧ್ಯಕ್ಷ, ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ

(ಫೋಟೋ ಕ್ಯಾಪ್ಷನ್‌)

1ಕೆಡಿಬಿಪಿ5- ಧೀರಜ್‌ ಮುನಿರಾಜ್.

--

1ಕೆಡಿಬಿಪಿ6- ಟಿ.ವೆಂಕಟರಮಣಯ್ಯ.

--

1ಕೆಡಿಬಿಪಿ7- ಉದಯ ಆರಾಧ್ಯ.

--

1ಕೆಡಿಬಿಪಿ8- ಜೆ.ವಿ.ಚಂದ್ರಶೇಖರ್.

--

1ಕೆಡಿಬಿಪಿ9- ಎಂ.ಸಿ.ಮಂಜುನಾಥ್.

--

1ಕೆಡಿಬಿಪಿ10- ಬಿ.ಎಸ್.ಚಂದ್ರಶೇಖರ್.