ಸಂಗೀತದ ಒಂದು ಧ್ವನಿಯಲ್ಲಿ ದೇಶ ಕಟ್ಟುವ ಶಕ್ತಿಯಿದೆ: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

| Published : Nov 24 2024, 01:46 AM IST

ಸಂಗೀತದ ಒಂದು ಧ್ವನಿಯಲ್ಲಿ ದೇಶ ಕಟ್ಟುವ ಶಕ್ತಿಯಿದೆ: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಗೀತದ ಒಂದು ಧ್ವನಿಯಲ್ಲಿ ದೇಶವನ್ನು ಕಟ್ಟುವ ಶಕ್ತಿ ಇದೆ. ಇಂಥ ಕಾರ್ಯ ಗ್ರಾಮೀಣ ವಲಯದಲ್ಲಿ ನಡೆಯುತ್ತಿರುವ ಶ್ಲಾಘನೀಯ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಂಗೀತದ ಒಂದು ಧ್ವನಿಯಲ್ಲಿ ದೇಶವನ್ನು ಕಟ್ಟುವ ಶಕ್ತಿ ಇದೆ. ಇಂಥ ಕಾರ್ಯ ಗ್ರಾಮೀಣ ವಲಯದಲ್ಲಿ ನಡೆಯುತ್ತಿರುವ ಶ್ಲಾಘನೀಯ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಯಮಕನಮರಡಿ ಹತ್ತರಗಿಯ ಎನ್.ಎಸ್.ಎಫ್. ಶಾಲಾ ಆವರಣದಲ್ಲಿ ಶನಿವಾರ ಸಂಜೆ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ 11ನೇ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಆಗಿನ ಕಾಲದಲ್ಲಿನ ಜಾನಪದದಲ್ಲಿ ಸಂಗೀತಕ್ಕೆ ಅಮೋಘ ಶಕ್ತಿಯಿದೆ. ಅಂತಹ ಶಕ್ತಿ ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತಿರುವ ಸತೀಶ ಜಾರಕಿಹೊಳಿ ಫೌಂಡೇಶನ್‌ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

ಕಳೆದ ಬಾರಿ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ಶಿರಗಾಂವದ ಸಂಧ್ಯಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತು ಬೆಳ್ಳಿ ಮೌನ ಬಂಗಾರದಂತಿರುವ ಸತೀಶ ಜಾರಕಿಹೊಳಿ ಕಾರ್ಯ ಶ್ಲಾಘಿಸಿ ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ ಎಂಬ ಕಾರ್ಯ ಮಾಡುತ್ತಿರುವ ಈ ಸತೀಶ ಪ್ರತಿಭಾ ಪುರಸ್ಕಾರದ ಕಾರ್ಯ ಅಪ್ರತಿಮ ಎಂದು ಹೇಳಿದರು.

ಬೃಹನ್ಮಠದ ಉಳ್ಳಾಗಡ್ಡಿ-ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಮಾತನಾಡಿ, ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಸುಧಾರಿಸಿದರೆ ಸಮಾಜ ಸುಧಾರಿಸಿತ್ತದೆ ಎಂಬಂತೆ ಶಿಕ್ಷಣಕ್ಕೆ ಒತ್ತು ನೀಡುವ ಸತೀಶ ಜಾರಕಿಹೊಳಿ ಕಾರ್ಯ ಶ್ಲಾಘನೀಯ. ಸೋತರೂ ಪರವಾಗಿಲ್ಲ, ಗೆಲುವನ್ನು ಸಾಯಿಸದಿರು ಎಂಬಂತೆ ಗೆಲ್ಲುವ ತವಕ, ತುಡಿತ ಸದಾ ಜೀವನದಲ್ಲಿರಬೇಕೆಂದರು.

ವೇದಿಕೆಯಲ್ಲಿ ಯುವ ಧುರೀಣ ಕಿರಣಸಿಂಗ್ ರಜಪೂತ, ಆಸ್ಮಾ ಫಣಿಬಂತ, ಸತೀಶ ಶುಗರ್ಸ್‌ ಅರ್ವಾಡ್‌ನ ಪ್ರಧಾನ ಕಾರ್ಯದರ್ಶಿ ರಿಯಾಜ್ ಚೌಗಲಾ, ಕ್ಷೇತ್ರ ಶಿಕ್ಷಣಾಧೀಕಾರಿ,ಪ್ರ ಭಾವತಿ ಪಾಟೀಲ, ರವಿಂದ್ರ ಜಿಂಡ್ರಾಳಿ, ಶಶಿಕಾಂತ ಹಟ್ಟಿ, ಸುರೇಶ ಜೋರಾಪೂರೆ, ಹತ್ತರಗಿ ಗ್ರಾಪಂ ಸಮೀರ್ ಬೇಪಾರಿ ಇತರರು ಉಪಸ್ಥಿತರಿದ್ದರು,