ಸಾರಾಂಶ
ಮೈಕ್ರೋ ಫೈನಾನ್ಸ್ ಹಾವಳಿಗೆ ಕೆಲವರು ಆತ್ಮಹತ್ಯೆ ಹಾಗೂ ಕೆಲವರು ಮನೆ, ಮಠ ಬಿಟ್ಟು ಹೋಗುತ್ತಿದ್ದಾರೆ, ಕೇಂದ್ರ ಸರ್ಕಾರ ಮೈಕ್ರೋ ಫೈನಾನ್ಸ್ ಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿತ್ತು, ಆದರೆ ಅವರು ತೆಗೆದುಕೊಂಡಿಲ್ಲ, ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಬೇಕು ಎನ್ನುವ ಕಾರಣ ಇದಾಗಿದೆ ಎಂದು ಆರೋಪಿಸಿದರು.
ಕೋಲಾರ : ರಾಜ್ಯದ ಧರ್ಮಸ್ಥಳ ಸಂಘ, ಮೈಕ್ರೋ ಫೈನಾನ್ಸ್ ಮತ್ತು ಇತರೆ ಸಂಘಗಳ ಮೇಲೆ ನಿಯಂತ್ರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕತ್ತಿದೆಯಾ ಎಂದು ರೈತ ಸಂಘದ ರಾಜ್ಯ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನವ ಕರ್ನಾಟಕ ನವ ಆಂದೋಲನದ ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರ, ಪದಾಧಿಕಾರಿಗಳ ಹಾಗೂ ರೈತ ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಫೈನಾನ್ಸ್ ಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸವನ್ನು ನಾವು ಬಂದು ಮಾಡುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಕೆಲವರು ಆತ್ಮಹತ್ಯೆ ಹಾಗೂ ಕೆಲವರು ಮನೆ, ಮಠ ಬಿಟ್ಟು ಹೋಗುತ್ತಿದ್ದಾರೆ, ಕೇಂದ್ರ ಸರ್ಕಾರ ಮೈಕ್ರೋ ಫೈನಾನ್ಸ್ ಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿತ್ತು, ಆದರೆ ಅವರು ತೆಗೆದುಕೊಂಡಿಲ್ಲ, ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಬೇಕು ಎನ್ನುವ ಕಾರಣ ಇದಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಗದಾಪ್ರಹಾರ ಪ್ರಾರಂಭಿಸಿದರೆ ಯಾವುದೇ ಮೈಕ್ರೋ ಫೈನಾನ್ಸ್ ಗಳಿಗೆ ಉಳಿಗಾಲವಿಲ್ಲ, ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ಮೇಲೆ ಕ್ರಮಕೈಗೊಂಡು ಜನ ಸಾಮಾನ್ಯರ ನೆರವಿಗೆ ಧಾವಿಸಬೇಕು.