ಸಾರಾಂಶ
ಕ್ರಿ.ಪೂ.6ನೇ ಶತಮಾನದಲ್ಲಿಯೇ ಜಗತ್ತಿಗೆ ಸತ್ಯ ಮತ್ತು ಅಹಿಂಸೆ ತತ್ವವನ್ನು ಸಾರಿದ ಮಹಾನ್ ಚೇತನ ಭಗವಾನ್ ಮಹಾವೀರ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾವೀರ ಜಯಂತಿ । ಭಗವಾನ್‌ರ ಭಾವಚಿತ್ರ ಪುಷ್ಪ ನಮನ ಸಲ್ಲಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಕ್ರಿ.ಪೂ.6ನೇ ಶತಮಾನದಲ್ಲಿಯೇ ಜಗತ್ತಿಗೆ ಸತ್ಯ ಮತ್ತು ಅಹಿಂಸೆ ತತ್ವವನ್ನು ಸಾರಿದ ಮಹಾನ್ ಚೇತನ ಭಗವಾನ್ ಮಹಾವೀರ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಮಹಾವೀರರ ಸತ್ಯ ಮತ್ತು ಅಹಿಂಸೆಯ ತತ್ವಾದರ್ಶ, ಬೋಧನೆಗಳು ಇಂದಿನ ಸಮಕಾಲಿನ ಬದುಕಿನಲ್ಲಿ ನಾವೆಲ್ಲರೂ ರೂಢಿಸಿಕೊಳ್ಳಬೇಕು. ಪ್ರಸ್ತುತ ಜಗತ್ತು ತುಂಬಾ ಹಿಂಸಾತ್ಮಕ ದಾಳಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾವೀರರ ಸಾರಿದ ಸತ್ಯ, ಅಹಿಂಸೆ, ತತ್ವಾದರ್ಶ, ಬೋಧನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಶಾಂತಿ, ಸುಭಿಕ್ಷತೆಯನ್ನು ಕಾಪಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದರು.
ಜಿಪಂ ಯೋಜನಾಧಿಕಾರಿ ಶಾರದ, ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜೈನ ಸಂಘದ ಅಧ್ಯಕ್ಷ ನರೇಂದ್ರ ಕುಮಾರ್, ವಿನೋದ್ ಜೈನ್, ಪಾರ್ಶ್ವನಾಥ್ ಜೈನ್ ಮೂರ್ತಿ ಪೂಜಾರ್, ಮುಖೇಶ್ ಜೈನ್, ಮಂದಿರ ಟ್ರಸ್ಟಿಯಾದ ರಾಜು ಭಂಡಾರಿ, ದಿಗಂಬರ ಸಮಾಜದ ಮಹೇಂದ್ರ ಕುಮಾರ್, ಜಿನದತ್, ಚಂದ್ರಪ್ರಭು, ಸುದರ್ಶನ್ ಸೇರಿ ಮತ್ತಿತರರು ಇದ್ದರು.