ಸಾರಾಂಶ
ಗದಗ ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 2ನೇ ವಲಯ ಮಹಿಳಾ ಮತ್ತು ಪುರುಷರ ಟೇಬಲ್ ಟೆನಿಸ್ ಪಂದ್ಯಾವಳಿ ಉದ್ಘಾಟಿಸಲಾಯಿತು.
ಗದಗ: ಸೋಲಿನಲ್ಲಿಯೂ ಗೆಲುವನ್ನು ಕಾಣುವುದೇ ನಿಜವಾದ ಕ್ರೀಡಾಪಟುವಿನ ಲಕ್ಷಣವಾಗಿದೆ ಎಂದು ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಬಸವರಾಜ ವಸ್ತ್ರದ ಹೇಳಿದರು.
ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಸಹಯೋಗದಲ್ಲಿ ಆಯೋಜಿಸಿದ 2023-24ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 2ನೇ ವಲಯ ಮಹಿಳಾ ಮತ್ತು ಪುರುಷರ ಟೇಬಲ್ ಟೆನಿಸ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ಯಾವಾಗಲೂ ತಮ್ಮ ಗುರಿ ಬಿಡದೆ ಕ್ರೀಡೆಯ ಕಡೆಗೆ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಮನಸ್ಸನ್ನು ವಿಚಲಿತಗೊಳಿಸಿಕೊಳ್ಳಬಾರದು. ಅಂದಾಗ ಮಾತ್ರ ಕ್ರೀಡೆಗಳಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಕ್ರೀಡೆಯಿಂದ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ನೆಮ್ಮದಿ ಪಡೆಯಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಮಾತನಾಡಿ, ಕ್ರೀಡೆಗೆ ವಯಸ್ಸಿನ ಅಂತರ, ಅಂತಸ್ತು, ಜಾತಿ ಭೇದವಿಲ್ಲ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದರು.
ಈ. ಶ್ರೀಕಾಂತ ಬಂಡಿ, ಡಾ. ಸುಧಾ ಕೌಜಗೇರಿ, ಡಾ. ಲಕ್ಷ್ಮಣ ಮುಳಗುಂದ, ಡಾ. ಉಲ್ಲಾಸ್ ಶೆಟ್ಟಿ, ಪ್ರೊ. ಮಹಾನಂದ ಹಿರೇಮಠ, ಡಾ. ಅಪ್ಪಣ್ಣ ಹಂಜೆ, ಡಾ. ಮಂಜುನಾಥ ತ್ಯಾಲಗಡಿ, ಪ್ರೊ. ಪ್ರಶಾಂತ ಹುಲಕುಂದ, ಜಿತೇಂದ್ರ ಜಹಾಗೀರದಾರ, ಡಾ. ಬಸವರಾಜ ಅಂಬಿಗೇರ, ಡಾ. ಪ್ರಬಲ ರೋಡ್ಡಣ್ಣವರ, ಗಣೇಶ ದೊಂಗಡಿ, ಸಂಗೀತಾ ಕಲಾಲ, ಡಾ. ಕಿರಣಕುಮಾರ ರಾಯರ್ ಇದ್ದರು.ಪ್ರೊ. ಎಸ್.ಕೆ. ಆಲೂರ ಸ್ವಾಗತಿಸಿದರು. ಪ್ರೊ. ಪರಶುರಾಮ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನೂರ್‌ಜಾನ ಕದಂಪುರ ವಂದಿಸಿದರು.