ದೇಶಕ್ಕೆ ಒಂದೇ ಕಾನೂನು ಎಂದು ಪ್ರತಿಪಾದಿಸಿದ ಧೀಮಂತ ನಾಯಕ: ಹಾಲಪ್ಪ ಆಚಾರ

| Published : Jun 24 2024, 01:30 AM IST

ದೇಶಕ್ಕೆ ಒಂದೇ ಕಾನೂನು ಎಂದು ಪ್ರತಿಪಾದಿಸಿದ ಧೀಮಂತ ನಾಯಕ: ಹಾಲಪ್ಪ ಆಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯ ಮೂಲ ಪುರುಷ ಶ್ಯಾಮ ಪ್ರಸಾದ್ ಮುಖರ್ಜಿ ಅವರ ತತ್ವ, ಆದರ್ಶಗಳು ನಮ್ಮೆಲ್ಲರ ರಾಜಕೀಯ ಬದುಕಿಗೆ ಸ್ಫೂರ್ತಿಯಾಗಬೇಕು.

ಶ್ಯಾಮ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ । ಮಾಜಿ ಸಚಿವ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ಮಾಜಿ ಪ್ರಧಾನಿ ನೆಹರು ಜಮ್ಮು ಕಾಶ್ಮಿರಕ್ಕೆ ಬೇರೆ ಕಾನೂನು, ಉಳಿದೆಡೆ ಬೇರೆ ಕಾನೂನು ಎಂದಾಗ ಅದನ್ನು ವಿರೋಧಿಸಿ ಇಡೀ ದೇಶಕ್ಕೆ ಒಂದೇ ಕಾನೂನು ಬೇಕು ಎಂದು ಪ್ರತಿಪಾದಿಸಿದ ಧೀಮಂತ ನಾಯಕ ಶ್ಯಾಮಪ್ರಸಾದ ಮುಖರ್ಜಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯಸ್ಮರಣೋತ್ಸವ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಭಾರತೀಯ ಜನಸಂಘ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಇದು ೧೯೫೧ರಿಂದ ೧೯೮೦ ರವರೆಗೆ ಅಸ್ತಿತ್ವದಲ್ಲಿತ್ತು. ನಂತರ ಇದು ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಂಡಿತು.

೧೯೫೧ರ ಅ. ೨೧ರಂದು ನೆಹರೂ ಅವರ ಮಂತ್ರಿಮಂಡಲದಿಂದ ಹೊರಬಂದು ಭಾರತೀಯ ಜನಸಂಘವನ್ನು ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಥಾಪಿಸಿದರು. ದೇಶವನ್ನು ಇಬ್ಬಾಗ ಮಾಡಿ ಪಾಕಿಸ್ತಾನ ಕೊಟ್ಟದ್ದು ಮಾತ್ರವಲ್ಲದೆ ಜಮ್ಮು ಕಾಶ್ಮಿರಕ್ಕೆ ಬೇರೆ ಕಾನೂನು ಎಂಬ ನೆಹರೂ ವಿಚಾರವನ್ನು ಬಲವಾಗಿ ಧಿಕ್ಕರಿಸಿ, ಜಮ್ಮು ಕಾಶ್ಮಿರಕ್ಕೆ ಹೋಗಿ ಅಲ್ಲಿ ಭಾರತೀಯ ಧ್ವಜವನ್ನು ಆರೋಹಣವನ್ನು ಮುಖರ್ಜಿ ಮಾಡಿದರು. ಅವರ ಸಾವು ಇಂದಿಗೂ ನಿಗೂಢವಾಗಿದೆ. ತಮ್ಮ ಬದುಕನ್ನು ರಾಷ್ಟ್ರಕ್ಕೆ ಅರ್ಪಣೆ ಮಾಡಿದ್ದಾರೆ. 15 ಕೋಟಿ ಸದಸ್ಯರನ್ನು ಹೊಂದಿರುವ ಸಂಘಟನೆಯಾದ ಬಿಜೆಪಿಯ ಮೂಲ ಪುರುಷ ಶ್ಯಾಮ ಪ್ರಸಾದ್ ಮುಖರ್ಜಿ ಆಗಿದ್ದಾರೆ. ಅವರ ತತ್ವ, ಆದರ್ಶಗಳು ನಮ್ಮೆಲ್ಲರ ರಾಜಕೀಯ ಬದುಕಿಗೆ ಸ್ಫೂರ್ತಿಯಾಗಲಿ ಎಂದರು.

ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸನಗೌಡ ತೊಂಡಿಹಾಳ, ಶಿವಕುಮಾರ ನಾಗಲಾಪುರಮಠ, ಶಂಭು ಜೋಳದ, ಗೌರಾ ಬಸವರಾಜ, ಕರಬಸಯ್ಯ ಬಿನ್ನಾಳ, ಬಸವರಾಜ ಹಾಳಕೇರಿ, ಶಿವಪ್ಪ ವಾದಿ, ಶರಣಪ್ಪ ಬಣ್ಣದಬಾವಿ, ಸಿದ್ದು ಉಳ್ಳಾಗಡ್ಡಿ ಇತರರಿದ್ದರು.