ಗುರುವಿನ ಸ್ಪರ್ಶದಿಂದ ಕಲ್ಲು ಕೂಡ ದೇವರು

| Published : Dec 27 2024, 12:48 AM IST

ಗುರುವಿನ ಸ್ಪರ್ಶದಿಂದ ಕಲ್ಲು ಕೂಡ ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಕಲ್ಲು ಸಹ ಶಿಲ್ಪಿಯಿಂದ ಕೆತ್ತಲ್ಪಟ್ಟು ಗುರುವಿನ ಹಸ್ತ ಸ್ಪರ್ಶ ಹಾಗೂ ಮಂತ್ರಗಳಿಂದ ದೇವರ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು. ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜಡೆಯ ಶಾಂತಲಿಂಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಕಲ್ಲು ಸಹ ಶಿಲ್ಪಿಯಿಂದ ಕೆತ್ತಲ್ಪಟ್ಟು ಗುರುವಿನ ಹಸ್ತ ಸ್ಪರ್ಶ ಹಾಗೂ ಮಂತ್ರಗಳಿಂದ ದೇವರ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜಡೆಯ ಶಾಂತಲಿಂಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಾಮಿ ವಿವೇಕಾನಂದರು ಚಿಕ್ಕವರಿದ್ದಾಗ ದೇವರಿಲ್ಲ ಎಂಬ ಬಗ್ಗೆ ವಾದ ಮಾಡುತ್ತಿದ್ದರು. ಅಲ್ಲದೆ, ಹಲವು ಶರಣರು, ಬುದ್ದಿವಂತರು, ಧರ್ಮಾಧಿಕಾರಿಗಳೊಂದಿಗೆ ವಾದ ಮಾಡಿ ದೇವರಿಲ್ಲ ಎಂಬುದರ ಕುರಿತು ಚರ್ಚೆ ನಡೆಸಿ ತಾವೇ ಗೆಲ್ಲುತ್ತಿದ್ದರು ಎಂದು ತಿಳಿಸಿದರು.

ಮುಂದೆ ಒಬ್ಬ ಶಿವಯೋಗಿಗಳೊಂದಿಗೆ ದೇವರಿಲ್ಲ ಎಂದು ವಾದ ಮಾಡಿ ಗೆದ್ದರು. ನೀನು ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸು ಎಂದು ಹೇಳಿದರು.

ಅವರು ಹೇಳುತ್ತಿದ್ದಂತೆ ನರೇಂದ್ರ ರಾಮಕೃಷ್ಣರ ಮಠಕ್ಕೆ ಹೋಗಿ ಚರ್ಚಿಸಲು ಪ್ರಾರಂಭಿಸಿದರು. ಕೊನೆಗೆ ರಾಮಕೃಷ್ಣರು ಆತನನ್ನು ತಮ್ಮ ಹಸ್ತಸ್ಪರ್ಷ ಹಾಗೂ ದೃಷ್ಠಿಯಿಂದ ತಮ್ಮ ಶಕ್ತಿಯನ್ನು ನರೇಂದ್ರನಿಗೆ ಧಾರೆ ಎರೆದರು. ಆಗ ಮೂರು ದಿನಗಳ ಕಾಲ ನರೇಂದ್ರ ಧ್ಯಾನದಲ್ಲಿ ಮಗ್ನನಾಗಿದ್ದ ಮೂರು ದಿನಗಳ ನಂತರ ರಾಮಕೃಷ್ಣ ಪರಮಹಂಸರು ನರೇಂದ್ರನನ್ನು ಧ್ಯಾನದಿಂದ ಎಬ್ಬಿಸಿ ಫಲಾಹಾರ ಸೇವಿಸಲು ತಿಳಿಸಿ ನಂತರ ಕೇಳಿದರು. ಈಗ ದೇವರಿದ್ದಾನೋ ಇಲ್ಲವೋ ಎಂದರು. ಆಗ ನರೇಂದ್ರ ಸ್ವಾಮಿ ವಿವೇಕಾನಂದನಾಗಿ ಪರಿವರ್ತನೆಯಾದರು. ಅವರ ಮಾತಿಗೆ ದೇವರಿಲ್ಲದೇ ಜಗದಲ್ಲಿ ಏನೂ ಇಲ್ಲ ಎಂದು ರಾಮಕೃಷ್ಣರನ್ನು ಗುರುವಾಗಿ ಸ್ವೀಕರಿಸಿದರು. ಅದರಂತೆ ಮಲಘಾಣದ ಜಡೆ ಶಾಂತಲಿಂಗ ಶಿವಾಚಾರ್ಯರು ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ಧೀಕ್ಷೆ ನೀಡಿದ್ದು, ಆನಂದ ಮಹಾರಾಜರು ಸಹ ಸ್ವಾಮಿ ವಿವೇಕಾನಂದರಂತೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಹಿರೂರದ ಜಯಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಯುಗಾದಿ ಹಾಗೂ ದೀಪಾವಳಿಯ ಹಬ್ಬಗಳಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮೀಜಿಯ ದರ್ಶನಕ್ಕೆ ಹೆಚ್ಚಿನ ಜನ ಇರುವುದರಿಂದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯೇ ನಿಮ್ಮ ಗ್ರಾಮದಲ್ಲಿ ಸ್ಥಾಪಿತನಾಗಿ ನಿಮಗೆ ದರ್ಶನ ನೀಡುತ್ತಿದ್ದಾನೆ. ಇದು ಮಾರ್ಸನಳ್ಳಿ ಗ್ರಾಮಸ್ಥರ ಸುದೈವವೇ ಸರಿ ಎಂದರು.

ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು, ಕೆರೂಟಗಿಯ ಶಿವಬಸವ ಶಿವಾಚಾರ್ಯರು, ಆಲಮೇಲದ ಗುರುಲಿಂಗ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಸಿಂದಗಿಯ ಸಂಗನಬಸವ ಮಹಾಸ್ವಾಮೀಜಿಗಳು ಸೇರಿದಂತೆ ಹಲವರು ಸಾನಿಧ್ಯವಹಿಸಿದ್ದರು.

ವೈದ್ಯ ಡಾ.ಸಂದೀಪ ಪಾಟೀಲ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಭೂದಾನ ಮಾಡಿದ ಸುವರ್ಣ ಹಾಗೂ ರಾವುತಪ್ಪ ವಾಲೀಕಾರ ಅವರಿಗೆ ಶ್ರೀಶೈಲ ಶ್ರೀಗಳು ಗೌರವಿಸಿದರು.

ವೇದಿಕೆಯಲ್ಲಿ ಮಲ್ಲು ಮೇತ್ರಿ, ಹಣಮಂತ ಜಮಾದಾರ, ಶ್ಯಾಮ ಮಸಳಿ, ಮಾಳಪ್ಪ ಪೂಜಾರಿ, ಅಲಿಸಾಬ ಗೌರ, ಹೊನ್ನಪ್ಪ ಸೊಂಪೂರ, ಅರವಿಂದ ಬಗಲಿ, ರುಕುಮ್‌ಪಟೇಲ್ ಪಾಸೋಡಿ, ರಮೇಶ ಕಲ್ಯಾಣಿ, ಪ್ರಭು ವಾಲೀಕಾರ, ವಿಠ್ಠಲಗೌಡ ಪಾಟೀಲ, ಸತೀಶ ಜಮಾದಾರ, ಸತೀಶ ಮಸಳಿ, ಪ್ರಭುಗೌಡ ಬಿರಾದಾರ, ದೌಲಮಲಿಕ್ ದೇವರಮನಿ, ವಿಠ್ಠಲ ಏಳಗಿ, ಬತ್ತುಸಾಹುಕಾರ ಬಸಗೊಂಡ, ಶ್ರೀಶೈಲ ಜಮಾದಾರ, ಮಾಳಪ್ಪ ಇಂಡಿ, ರಾಚಪ್ಪ ಬಗಲಿ, ಬಾಪುಗೌಡ ಪಾಟೀಲ, ವಿಠ್ಠಲ ವಾಲೀಕಾರ, ಸೋಮು ಜಮಾದಾರ, ಸುಭಾಸ ಮೇತ್ರಿ ಸೇರಿ ಹಲವರು ಇದ್ದರು. ಸಿದ್ದರಾಮ ಜಮಾದಾರ, ಎಸ್.ಎಸ್.ಕೋಳಿ, ಈರಣ್ಣ ಜಮಾದಾರ, ದ್ಯಾಮಗೊಂಡ ಜಮಾದಾರ, ಯಲ್ಲಾಲಿಂಗ ಜಮಾದಾರ, ಸಂಕು ಜಮಾದಾರ, ಮಹೇಶ ಚಾಂದಕವಟೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.