ರಾಷ್ಟ್ರದ ಅಭಿವೃದ್ಧಿಗೆ ಬಲಿಷ್ಠ ಯೋಜನೆ ಅಗತ್ಯ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ

| Published : Dec 20 2024, 12:45 AM IST / Updated: Dec 20 2024, 12:40 PM IST

ರಾಷ್ಟ್ರದ ಅಭಿವೃದ್ಧಿಗೆ ಬಲಿಷ್ಠ ಯೋಜನೆ ಅಗತ್ಯ : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಮಟ್ಟದಲ್ಲಿ ಬೇಡಿಕೆಗೆ ತಕ್ಕಂತೆ ಸುಸ್ಥಿರ, ಬಾಳಿಕೆ ಬರುವ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ವಸ್ತುಗಳನ್ನು ಉತ್ಪನ್ನ ಮಾಡುವ ಅಗತ್ಯವಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

 ಬೆಳಗಾವಿ : ಜಾಗತಿಕ ಮಟ್ಟದಲ್ಲಿ ಬೇಡಿಕೆಗೆ ತಕ್ಕಂತೆ ಸುಸ್ಥಿರ, ಬಾಳಿಕೆ ಬರುವ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ವಸ್ತುಗಳನ್ನು ಉತ್ಪನ್ನ ಮಾಡುವ ಅಗತ್ಯವಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಖಾಸಗಿ ಹೊಟೇಲ್‌ ನಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ಮತ್ತು ಇನ್‌ಸ್ಟಿಟ್ಯೂಶನ್ ಆಫ್ ಎಂಜಿನಿಯರ್ಸ್ (ಭಾರತ) ಲೋಕಲ್ ಸೆಂಟರ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಸ್ಟೇನ್‌ಲೆಸ್ ಸ್ಟೀಲ್ ಅಭಿವೃದ್ಧಿ ಸಂಘ ಗುರುವಾರ ಆಯೋಜಿಸಿದ್ದ ಒಂದು ದಿನದ ಅಂತಾರಾಷ್ಟ್ರೀಯ ಮಾಹಿತಿ ವಿನಿಯೋಗ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು,

ರಾಷ್ಟ್ರದ ಅಭಿವೃದ್ಧಿಗಾಗಿ ಬಲಿಷ್ಠ ಯೋಜನೆ ರೂಪಿಸುವ ಅಗತ್ಯವಿದ್ದು, ಇದಕ್ಕಾಗಿ ಗುಣಮಟ್ಟದ ಉತ್ಪನ್ನ ಬಳಸಿಕೊಳ್ಳುವ ಅಗತ್ಯವಿದೆ. ಈ ದಿಸೆಯಲ್ಲಿ ಪರಿಸರ ಸ್ನೇಹಿ ಎನಿಸಿರುವ ಸ್ಟೇನ್‌ಲೆಸ್ ಸ್ಟೀಲ್ ಉಪಯುಕ್ತ ಉತ್ಪನ್ನವಾಗಿದೆ. ಆಧುನಿಕತೆಗೆ ತಕ್ಕಂತೆ ಮತ್ತು ಸರ್ಕಾರಿ ಯೋಜನೆಗಳಿಗೆ ಈ ಉತ್ಪನ್ನ ಬಳಸಿಕೊಳ್ಳಲು ಪರಿಶಿಲಿಸಲಾಗುವುದು ಎಂದವರು ಹೇಳಿದರು.

ಗಗನಚುಂಬಿ ಕಟ್ಟಡಗಳಿಂದ ಹಿಡಿದು ಸೊಗಸಾದ ಕಾರುಗಳವರೆಗೆ, ಕಟ್ಟಡ, ಸಾರಿಗೆ, ಆರೋಗ್ಯ ಮತ್ತು ಗ್ರಾಹಕ ವಸ್ತುಗಳ ವಲಯಗಳಿಗೆ ಈ ಉತ್ಪನ್ನ ಅನುಕೂಲವಾಗಿದೆ. ಅಂದಾಜು 50 ವರ್ಷಗಳ ಕಾಲ ಬಾಳಿಕೆ ಬರಲಿದೆ. ಈ ಮಾನ್ಯತೆ ಸ್ಟಿಲ್ ಬಳಕೆಯಿಂದ ಬಹುವರ್ಷ ಬಾಳಿಕೆ ಬರುವ ಸೇತುವೆ, ನೀರಾವರಿ ಯೋಜನೆ, ಜಲಾಶಯಗಳಿಗೆ ಉಪಯುಕ್ತವಾಗಿದೆ ಎಂದವರು ಹೇಳಿದರು.

ಬಳಿಕ ವಿವಿಧ ಕಂಪನಿಗಳ ಉತ್ಪನ್ನ ಸಚಿವರು ವೀಕ್ಷಿಸಿ ಮಾಹಿತಿ ಪಡೆದರು. ಈ ವೇಳೆ ಸ್ಟೇನ್‌ಲೆಸ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿಮ್ಮ ಕೊಲೀನಸ್‌ , ಡಾ. ಗ್ರಹಮ್‌ ಸಸೆಕ್ಸ್ ಅವರು ವಿಡಿಯೋ ಕಾನ್ಪರೆನ್ಸ್‌ ಮೂಲಕ ಮಾತನಾಡಿದರು.

ಈ ಸಂದರ್ಭದಲ್ಲಿ ಲೋಕೊಪಯೋಗಿ ಪ್ರಧಾನ ಕಾರ್ಯದರ್ಶಿ ಡಾ.ಎಸ್‌ ಸೆಲ್ವಕುಮಾರ್‌, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ವಿ.ಎನ್. ಪಾಟೀಲ, ಪಿ.ಕೆ ಸರ್ಕಾರ, ರಾಜು ಗರಗ, ದೇವೇಂದ್ರ ದೇವಗನ್‌, ಕೃಷ್ಣಮೂರ್ತಿ ಕುಲಕರ್ಣಿ, ಅಮಿತಕುಮಾರ್ ತ್ಯಾಗಿ, ಡಾ.ಸರ್ವನನ್, ಎಸ್‌ .ವೈ. ಕುಂದರಗಿ, ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಐಎಸ್‌ ಎಸ್‌ ಡಿಎ ಅಧ್ಯಕ್ಷ ರಾಜಮನಿ ಕೃಷ್ಣಮೂರ್ತಿ ಸ್ವಾಗತಿದರು. ಕಾರ್ಯನಿವಾರ್ಹಕ ನಿರ್ದೇಶಕ ರೋಹಿತ ಕುಮಾರ ವಂದಿಸಿದರು.