ನೀರಲಗಿ ಶಾಲೆ ಚಾವಣಿಯ ತೊಲೆ ಬಿದ್ದು ವಿದ್ಯಾರ್ಥಿಗೆ ಗಾಯ

| Published : Aug 02 2024, 12:49 AM IST

ನೀರಲಗಿ ಶಾಲೆ ಚಾವಣಿಯ ತೊಲೆ ಬಿದ್ದು ವಿದ್ಯಾರ್ಥಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಮಳೆಯಿಂದಾಗಿ ಶಾಲೆಯ ಚಾವಣಿ ಶಿಥಿಲಗೊಂಡು ರಾಪ್ಟರ್ (ತೊಲೆಗೆ ಹೊಂದಿಸಿದ ಕಟ್ಟಿಗೆ) ಮುರಿದು ಬಿದ್ದು ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಗುತ್ತಲ ಸಮೀಪದ ನೀರಲಗಿ (ಎಂ) ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.

ಗುತ್ತಲ: ನಿರಂತರ ಮಳೆಯಿಂದಾಗಿ ಶಾಲೆಯ ಚಾವಣಿ ಶಿಥಿಲಗೊಂಡು ರಾಪ್ಟರ್ (ತೊಲೆಗೆ ಹೊಂದಿಸಿದ ಕಟ್ಟಿಗೆ) ಮುರಿದು ಬಿದ್ದು ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಗುತ್ತಲ ಸಮೀಪದ ನೀರಲಗಿ (ಎಂ) ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.ಶಾಲೆಯ ೬ನೇ ತರಗತಿ ವಿದ್ಯಾರ್ಥಿ ವಿನಾಯಕ ಮೋರೆ ಎಂಬ ವಿದ್ಯಾರ್ಥಿ ಕಾಲಿನ ಮೇಲೆ ಕಟ್ಟಿಗೆ ತುಂಡು ಬಿದ್ದು ಗಾಯಗೊಂಡಿದ್ದಾನೆ. ತರಗತಿಯಲ್ಲಿ ಸುಮಾರು ೨೫ ವಿದ್ಯಾರ್ಥಿಗಳು ಪಾಠ ಕೇಳುವ ಸಂದರ್ಭದಲ್ಲಿ ಈ ಘಟನೆ ನಡೆದು ಕೂದಲೆಳೆಯ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ ಶಾಲಾ ಕೊಠಡಿಗಳು ಸಂರ್ಪೂಣ ಹಾಳಾಗಿದ್ದು ಶಿಥಿಲಾವಸ್ಥೆಗೆ ಹಂತದಲ್ಲಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸುತ್ತಿದ್ದರೂ ಸ್ಪಂದಿಸಿದ್ದಿಲ್ಲ. ಹೀಗಾಗಿ ಇವತ್ತು ಈ ಘಟನೆ ನಡೆದಿದ್ದು, ಏನಾದರೂ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗ್ರಾಮಕ್ಕೆ ಆಗಮಿಸಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪರಿಸ್ಥಿತಿ ಗಮನಿಸಿ ದುರಸ್ತಿಗೆ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.