ಸಲಾಯನ್‌ ಹಚ್ಚಿಕೊಂಡೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!

| Published : Mar 31 2024, 02:00 AM IST

ಸಲಾಯನ್‌ ಹಚ್ಚಿಕೊಂಡೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಸಲಾಯನ್‌ ಹಚ್ಚಿಕೊಂಡೇ ಪರೀಕ್ಷೆ ಬರೆದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ ವಿಮೋಚನಾ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ನಡೆದಿದೆ. ಬಳ್ಳಿಗೇರಿ ಸರ್ಕಾರಿ ಪ್ರೌಢಶಾಲೆಯ ಕವಿತಾ ಮಲ್ಲಪ್ಪ ಹಿಪ್ಪರಗಿ ವೈದ್ಯಕೀಯ ಚಿಕಿತ್ಸೆ ಪಡೆದು ಪರೀಕ್ಷೆ ಬರೆದ ವಿದ್ಯಾರ್ಥಿನಿ.

ಕನ್ನಡಪ್ರಭ ವಾರ್ತೆ ಅಥಣಿ

ಆಗಿದ್ದೇನು?: ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ವಿದ್ಯಾರ್ಥಿಯ ಪಾಲಕರು ಪರೀಕ್ಷೆ ಹೋಗಬೇಡವೆಂದರೂ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷೆ ಆರಂಭವಾಗಿ ಅರ್ಧ ಗಂಟೆ ನಂತರ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಆರಂಭವಾಗಿ ತಲೆ ಸುತ್ತಿ ಕುಸಿದುಬಿದ್ದಿದ್ದಳು. ತಕ್ಷಣ ಆರೋಗ್ಯ ಕಾರ್ಯಕರ್ತೆ ಮತ್ತು ಸ್ಥಳೀಯ ಸಿಬ್ಬಂದಿಯವರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. ಪರೀಕ್ಷಾ ಕೇಂದ್ರದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದು ಮರಳಿ ಸಲಾಯನ್‌ ಹಚ್ಚಿಕೊಂಡೇ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾಳೆ.

---------ಪರೀಕ್ಷೆ ಬರೆಯುವಾಗ ಅವಳ ಆರೋಗ್ಯ ಮೇಲ್ವಿಚಾರಣೆಯನ್ನು ಸಮುದಾಯ ಆರೋಗ್ಯ ರಕ್ಷಕ, ಆ್ಯಂಬುಲೆನ್ಸ್‌ ಚಾಲಕ ಬಂದು ಮೇಲ್ವಿಚಾರಣೆ ಮಾಡಿದ್ದಾರೆ. ವಿದ್ಯಾರ್ಥಿನಿ ಆರೋಗ್ಯವಾಗಿದ್ದು, ಯಾವುದೇ ಅಪಾಯ ಇಲ್ಲ. ಮುಂದೆಯೂ ಪರೀಕ್ಷೆ ಬರೆಯಲು ಯಾವುದೇ ಅಭ್ಯಂತರ ಇಲ್ಲ.

- ಡಾ.ಬಸಗೌಡ ಕಾಗೆ,

ಅಥಣಿ ತಾಲೂಕು ಆರೋಗ್ಯಾಧಿಕಾರಿ.

-----------------

ಆರೋಗ್ಯ ಇಲಾಖೆ ಸಕಾಲಕ್ಕೆ ಚಿಕಿತ್ಸೆ ನೀಡಿ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆಗಳು.

-ಎಂ.ಬಿ.ಮೋರಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗುಂಡು ಖೋತ, ಸಂಪನ್ಮೂಲ ಅಧಿಕಾರಿ.