ಸಾರಾಂಶ
ಹಿರೇಕೆರೂರು: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡುವುದರ ಮುಖಾಂತರ ಸಾಮಾಜಿಕ ಜೀವನದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ತಾವುಗಳು ಕಲಿತ ಜ್ಞಾನ ಪಡೆದ ಅಂಕಗಳ ಮೇಲೆ ಮಾತ್ರ ಅವರಿಗೆ ಕೆಲಸ ಯಾರ ಸಹಾಯ ಸಹಕಾರವಿಲ್ಲದೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಅವರು ತಾಲೂಕಿನ ಅಲದಗೇರಿ ಗ್ರಾಮದಲ್ಲಿ ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಕೆ.ಎಚ್. ಪಟೇಲ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ಎರಡನೆ ದಿವಸದ ವಿಶೇಷ ಶಿಬಿರವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಎನ್ ಎಸ್ ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಬದುಕಿನ ಆಯಾಮಗಳನ್ನು ತಿಳಿಸುವುದರೊಂದಿಗೆ ಸಹಬಾಳ್ವೆಯ ಪಾಠವನ್ನು ಹೇಳಿಕೊಡುವುದು ಎಂದರು. ಶ್ರಮದಾನದ ಮೂಲಕ ಗ್ರಾಮವನ್ನು ಸ್ವಚ್ಛಗೊಳಿಸುವುದರೊಂದಿಗೆ ಜನತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದೀರಿ. ಹಳ್ಳಿಗಳಲ್ಲಿ ಇಂಥ ಶಿಬಿರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ. ಸ್ವಚ್ಛತೆ ಮತ್ತು ಶಿಕ್ಷಣ ಎರಡೂ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶಿಕ್ಷಣದಿಂದ ಬದುಕು ಬದಲಾಗಬೇಕು, ನೀವು ಪಡೆಯುವ ಶಿಕ್ಷಣ ಮುಂದಿನ ಬದುಕಿನ ದಾರಿದೀಪವಾಗಬೇಕು ಎಂದರು.ಈ ವೇಳೆ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಮರಬಸಪ್ಪ ಹೊಂಬರಡಿ, ರಾಮಪ್ಪ ಕಜ್ಜರಿ, ಮಂಜುನಾಥ ಚಲವಾದಿ, ಅಜ್ಜಯ್ಯಸ್ವಾಮಿ ಆರಾಧ್ಯಮಠ, ಪಂಚಪ್ಪ ಹತ್ತಿಮತ್ತೂರ ,ಚನ್ನಬಸಪ್ಪ ಗುಡ್ಡಣನವರ,ರಾಮಪ್ಪ ಹಲಗೇರಿ, ಹಜರತ್ ಸಾಬ್ ಸೇತಸನದಿ, ಜಾವಿದ ಬಾಷಾ, ರಮೇಶ ಮಸಣಗಿ, ಆರ್. ಎಮ್. ಕರೇಗೌಡ್ರ ಮತ್ತು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ಧರು,