ಸಾರಾಂಶ
ಅ.16-17ರ ಮೊದಲೆರಡು ದಿನ ಮೈಸೂರು ವಿಭಾಗೀಯ ಮಟ್ಟದ ಸ್ಪರ್ಧೆಗಳು, 18-19 ರಂದು ರಾಜ್ಯ ಮಟ್ಟದಸ್ಪರ್ಧೆಗಳು ನಡೆದವು
ಕನ್ನಡಪ್ರಭ ವಾರ್ತೆ, ಕಡೂರುನಾಲ್ಕು ದಿನಗಳ ಕಾಲ ಕಡೂರು ಪಟ್ಟಣದಲ್ಲಿ ಮಳೆ ಮತ್ತಿತರ ಅಡ್ಡಿ ಆತಂಕಗಳ ನಡುವೆಯಶಸ್ವಿಯಾಗಿ ನಡೆದ ರಾಜ್ಯಮಟ್ಟದ ಪ್ರಾಥಮಿಕ- ಪ್ರೌಢಶಾಲೆಗಳ ಮೈಸೂರು ವಿಭಾಗೀಯ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜುನಾಯ್ಕ ಹೇಳಿದರು.
ಕಡೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅ.16-17ರ ಮೊದಲೆರಡು ದಿನ ಮೈಸೂರು ವಿಭಾಗೀಯ ಮಟ್ಟದ ಸ್ಪರ್ಧೆಗಳು ನಡೆದ ನಂತರ ಅ 18-19 ರಂದು ರಾಜ್ಯ ಮಟ್ಟದಸ್ಪರ್ಧೆಗಳು ನಡೆದವು.ಈ ಸ್ಪರ್ಧೆ17 ವರ್ಷದ ಬಾಲಕರ ವಿಭಾಗದಲ್ಲಿ ಕಡೂರು ಕ್ರೇಂಬ್ರಿಡ್ಜ್ ಪಬ್ಲಿಕ್ ಶಾಲೆ, ಬಾಳೆಹೊನ್ನೂರು ಸರ್ಕಾರಿ ಪ್ರೌಢ ಶಾಲೆ, ಪುತ್ತೂರಿನ ವಿವೇಕಾನಂದ ಪ್ರೌಢಶಾಲೆ ಮತ್ತು ಮಂಗಳೂರಿನ ಇಂದಿರಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಆನೇಕಲ್ ತಾಲೂಕಿನ ಸೋಲೂರು ವಿನೋಭಾ ಭಾವೆ ಪ್ರೌಢಶಾಲೆ, ಪುಟ್ಟೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ಚಿಂತಾಮಣಿ ರಾಮಕೃಷ್ಣ ಹೈಸ್ಕೂಲ್ ಹಾಗೂ ಚಿಕ್ಕಬಳ್ಳಾಪುರದ ಅಂಜನಾದ್ರಿ ಹೈಸ್ಕೂಲ್ ತಂಡಗಳ ಆಟ ಗಾರರು ಪಡೆದಿದ್ದಾರೆ. ತೃತೀಯ ಸ್ಥಾನದಲ್ಲಿ ಹುದಗಿಯ ಕರಿಬಸವೇಶ್ವರ ಪ್ರೌಢಶಾಲೆ, ಹೊಡೇಕಲ್ಲು, ತುಮಕೂರು ಮತ್ತು ಗೋವೇರಹಳ್ಳಿ ಸರ್ಕಾರಿ ಪ್ರೌಢಶಾಲೆಗಳಿಗೆ ದೊರೆತಿದ್ದು, ಆಯ್ಕೆಗೊಂಡ ಕ್ರೀಡಾಪಟುಗಳು ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು.14 ವರ್ಷದೊಳಗಿನ ಬಾಲಕರ ಸ್ಪರ್ಧೆಗಳಲ್ಲಿ ಕಡೂರಿನ ಪುರ ಕ್ರೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ಅಂಬಳೆ ಮತ್ತು ಆವತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಬೀಕನಹಳ್ಳಿ ಮೊರಾರ್ಜಿ ವಸತಿ ಶಾಲೆ ತಂಡಗಳ ಸದಸ್ಯರು ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಬಳೆಗಾರನ ಹಳ್ಳಿಯ ವಿ ಬ್ಲೂಮ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಗೆಹಳ್ಳಿ, ಕೈವಾರದ ಕೀರ್ತನ ಇಂಟರ್ ನ್ಯಾಷನಲ್ ಸ್ಕೂಲ್, ಕಡವನಮಾರಿಯ ನವೋದಯ ಹೈಸ್ಕೂಲ್ ಮತ್ತು ಕೃಷ್ಣರಾಜಪುರದ ಭಾರತ ರತ್ನ ಇಂಗ್ಲಿಷ್ ಸ್ಕೂಲ್ ತಂಡಗಳು ಪಡೆದಿವೆ. ತೃತೀಯ ಸ್ಥಾನ ವನ್ನು ಬಾಗಲಕೋಟೆ ಜಿಲ್ಲೆ ಮುಧೋಳದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆ, ಕಂಕನಾಡಿ ವಿಟ್ಟಲ್ ರಾಯ್ ಕನ್ನಡ ಮಾಧ್ಯಮ ಶಾಲೆ ಮತ್ತು ಇನ್ನಿತರ 2 ಶಾಲೆಗಳ ತಂಡಗಳು ಹಂಚಿಕೊಂಡಿವೆ .14 ವರ್ಷದೊಳಗಿನ ಬಾಲಕಿಯರ ವಿಭಾಗದ ಸ್ಪರ್ಧೆಗಳಲ್ಲಿ ಪುತ್ತೂರಿನ ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ವಿಟ್ಲದ ಪ್ರಾಥಮಿಕ ಶಾಲೆ, ಮಂಡ್ಯ ದಕ್ಷಿಣ ವಲಯದ ಕಾರ್ಮೆಲ್ ಕಾನ್ವೆಂಟ್ ಮತ್ತು ನಾಗಮಂಗಲದ ಅಭ್ಯಾಸ್ ಇಂಟರ್ ನ್ಯಾಷನಲ್ ಶಾಲೆ ತಂಡಗಳು ಪ್ರಥಮ ಸ್ಥಾನ ಪಡೆದಿವೆ. ದ್ವಿತೀಯ ಸ್ಥಾನವನ್ನು ಹಿಡಕಲ್ಲಿನ ಸೂರಣ್ಣನವರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರದ ಶಾರದಾ ವಿದ್ಯಾ ನಿಕೇತನ ಹಾಗೂ ಇನ್ನಿತರ 2 ಶಾಲೆಗಳು, ತೃತೀಯ ಸ್ಥಾನದಲ್ಲಿ ಕಂಠಿನ ಕುಂಟೆ ಶಾಲೆ, ನೆಲಮಂಗಲದ ಜ್ಞಾನ ವಾಹಿನಿ ವಿದ್ಯಾ ಕೇಂದ್ರ, ಬೆಂಗಳೂರು ದಕ್ಷಿಣ ಜಿಗಣಿಯ ಶಾಲೆ ತಂಡಗಳು ಪಡೆದಿವೆ ಎಂದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಿಬ್ಬನ್ ಪೇಟೆ ರಾಮಕೃಷ್ಣ ಹೈ ಸ್ಕೂಲ್, ತೀರ್ಥಹಳ್ಳಿ ಮಾಲೂರಿನ ಸರ್ಕಾರಿ ಪ್ರಾಥಮಿಕ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಜಿಗಣಿಯ ನಿತ್ಯಾನಂದ ಸ್ವಾಮಿ ಪ್ರೌಢಶಾಲೆ, ನಾಗನಾಥಪುರದ ಬೆಂಗಳೂರು ಇಂಗ್ಲಿಷ್ ಸ್ಕೂಲ್ ತಂಡಗಳು ಪಡೆದಿವೆ. ದ್ವಿತೀಯ ಸ್ಥಾನವನ್ನು ರಾಯಭಾಗದ ಚಂಚಲಿ ನೋಬೆಲ್ ಕನ್ನಡ ಶಾಲೆ, ವಿಜಯಪುರದ ರೇವಣ ಸಿದ್ದೇಶ್ವರ ಶಾಲೆ ಮತ್ತು ಇನ್ನಿತರ ಎರಡು ಶಾಲೆಗಳು ಪಡೆದಿವೆ. ತೃತೀಯ ಸ್ಥಾನವನ್ನು ಪುತ್ತೂರಿನ ರಾಮಕುಂಜದ ರಾಮ ಕುಂಜಢೇಶ್ವರ ಪ್ರೌಢ ಶಾಲೆ, ಮಂಗಳೂರಿನ ಸಂಕೋಲಿಗೆ ಭಗವತಿ ಪ್ರೌಢಶಾಲೆ, ಕುಂದಾಪುರದ ಯಡಾಡಿ ಮತ್ಯಾಡಿ ಮೊರಾರ್ಜಿ ವಸತಿ ಶಾಲೆ ಮತ್ತು ಉಡುಪಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ತಂಡಗಳು ಪಡೆದಿವೆ ಎಂದು ಅಂತಿಮ ಫಲಿತಾಂಶದ ಮಾಹಿತಿ ನೀಡಿದರು. ಕಬಡ್ಡಿ ಸಂಯೋಜಕ ಗೋಪಿ ಮಾತನಾಡಿ, ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಶಾಸಕ ಕೆ.ಎಸ್.ಆನಂದ್ ಮತ್ತು ಸಹಯೋಗ ನೀಡಿದ ಕ್ರೇಂಬ್ರಿಡ್ಜ್ ಪಬ್ಲಿಕ್ ಶಾಲೆ ಮತ್ತು ಇತರ ಶಾಲಾ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು.
20ಕೆಕೆಡಿಯು1.ಬಿಇಒ ಸಿದ್ದರಾಜು ನಾಯ್ಕ.