ಸಾರಾಂಶ
ಜೋಯಿಡಾ: ಪ್ರತಿಯೊಬ್ಬ ಮನುಷ್ಯನಲ್ಲೂ ಸೂಪ್ತವಾದ ಕಲೆ ಇರುತ್ತವೆ. ಅದು ಬೆಳಕಿಗೆ ಬರಲು ಇಂತಹ ವೇದಿಕೆ ಸಹಕಾರಿಯಾಗಿವೆ ಎಂದು ಕಾರವಾರದ ಮಾಜಿ ಶಾಸಕ ಗಂಗಾಧರ ಭಟ್ ತಿಳಿಸಿದರು.
ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಗುರಿಯೇನು ಅರಿತು ಸಾಧಿಸಲು ಮುಂದುವರಿಯಬೇಕು. ಯಾವುದೇ ಕೆಲಸದಲ್ಲಿ ಅಡೆತಡೆ ಇದ್ದೇ ಇರುತ್ತವೆ. ಅದರ ಬಗ್ಗೆ ಚಿಂತಿಸದೇ ಮುಂದೆ ಸಾಗಬೇಕು ಎಂದರು.ಸುಬ್ರಾಯ ಹೆಗಡೆ ಚೌಕ ಮಾತನಾಡಿ, ಯಕ್ಷಗಾನ ಕಲಿತು ದೇಶ- ವಿದೇಶಗಳಲ್ಲೂ ಕುಣಿದು ಬಂದಿದ್ದೇನೆ. ನಿಮ್ಮ ಊರು ಸಮೃದ್ಧ ಊರು. ಒಂದು ಊರಿಗೆ ಇರಬೇಕಾದ ಎಲ್ಲವೂ ಇಲ್ಲಿ ಅಚ್ಚುಕಟ್ಟಾಗಿ ಇದೆ ಎಂದರು.
ಯಕ್ಷ ಶಾಲ್ಮಲಾ ಸಂಸ್ಥೆಯ ನಾಗರಾಜ ಜೋಶಿ ಮಾತನಾಡಿ, ಪ್ರಪಂಚದಲ್ಲಿಯೆ ಅತ್ಯಂತ ಸುಂದರ ಕಲೆ ಎಂದರೆ ಅದು ಯಕ್ಷಗಾನ ಕಲೆ. ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ನವರಸಗಳಿಂದ ಕೂಡಿದೆ ಎಂದರು.ಆರ್.ಎನ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ದಯಾನಂದ ಉಪಾಧ್ಯಾಯ ಮಂಜುನಾಥ ಭಾಗ್ವತ, ಶಿವರಾಂ ದಬಗಾರ, ನರಸಿಂಹ ಭಾಗ್ವತ, ಶ್ರೀಕೃಷ್ಣ ದಿಗ್ಗಾಳಿ, ಇಂದುಮತಿ ದೇಸಾಯಿ, ಮಹಾಲಕ್ಷ್ಮಿ ದಬಗಾರ ಉಪಸ್ಥಿತರಿದ್ದರು. ಸಂಧ್ಯಾ ದೇಸಾಯಿ, ಸೀತಾ ದಾನಗೇರಿ ನಿರ್ವಹಿಸಿದರು. ಗಂಗಾಧರ ಭಟ್ ಉದ್ಘಾಟಿಸಿದ ವೇದಿಕೆಯಲ್ಲಿ ಗಣ್ಯರು ಪ್ರಶಸ್ತಿ ವಿತರಿಸಿದರು. ನಂತರ ಸಪ್ತಾಹ ಕೊನೆಯ ದಿನ ಅಂಕೋಲಾದ ಆನಂದ ಆಗೇರ ಆವರ ನಿರ್ದೇಶನದಲ್ಲಿ ಮಹಿಳೆಯರಿಂದ ಕಂಸ ದಿಗ್ವಿಜಯ ಯಕ್ಷಗಾನ ನಡೆಯಿತು.ಫ್ರಾನ್ಸ್, ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಹಳಿಯಾಳ: ಕರ್ನಾಟಕ ಸುವರ್ಣ ಸಂಭ್ರಮ- 50ರ ಅಂಗವಾಗಿ ಫ್ರಾನ್ಸ್ ಮತ್ತು ಜರ್ಮನಿ ಕನ್ನಡ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಹಳಿಯಾಳದ ಹೊಂಗಿರಣ ಬೊಂಬೆಯಾಟ ಕಲಾತಂಡದ ಪ್ರದರ್ಶನ ನ. 1ರಂದು ನಡೆಯಲಿದೆ.ಹಳಿಯಾಳದ ಹೊಂಗಿರಣ ಬೊಂಬೆಯಾಟ ಕಲಾತಂಡ ದೇಶದೆಲ್ಲೆಡೆ ಹಲವಾರು ಪ್ರದರ್ಶನ ನೀಡಿದ್ದು, ದಸರಾ ಸೇರಿದಂತೆ ಈ ವರ್ಷ ಅಯೋಧ್ಯೆ ಶ್ರೀ ರಾಮಮಂದಿರ ಲೋಕಾರ್ಪಣೆ ಸಮಾರಂಭದಲ್ಲೂ ಈ ತಂಡ ಪ್ರದರ್ಶನ ನೀಡಿ ಬಾರಿ ಪ್ರಶಂಸೆಗೆ ಪಾತ್ರವಾಗಿತ್ತು. ವಿದೇಶದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಪ್ರದರ್ಶನ ನೀಡಲಿರುವ ಹೊಂಗಿರಣ ಬೊಂಬೆಯಾಟ ಕಲಾತಂಡದ ಮುಖ್ಯಸ್ಥರಾದ ಬೊಂಬೆಯಾಟ ಕಲಾವಿದ ಸಿದ್ದಪ್ಪ ಬಿರಾದಾರ ಈ ಕುರಿತು ಮಾಹಿತಿ ನೀಡಿದ್ದಾರೆ.ನ. 1ರಂದು ಬೆಳಗ್ಗೆ 10.30ಕ್ಕೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಹಾಗೂ ನವೆಂಬರ್ 2ರಂದು ಜರ್ಮನಿಯ ಬರ್ಲಿನ್‌ನಲ್ಲಿ ಸಂಜೆ 4ಕ್ಕೆ ಕನ್ನಡ ರಾಜ್ಯೋತ್ಸವ ಸಂಭ್ರಮ ನಡೆಯಲಿದೆ. ಅದರಲ್ಲಿ ಹಳಿಯಾಳದ ಹೊಂಗಿರಣ ಬೊಂಬೆಯಾಟ ಕಲಾತಂಡ ಕನ್ನಡ ನಾಡು- ನುಡಿ ಹಿರಿಮೆ ಬಿಂಬಿಸುವ ಕರ್ನಾಟಕ ಗತ ವೈಭವ ಎಂಬ ನೂತನ ಬೊಂಬೆಯಾಟದ ಪ್ರದರ್ಶನ ನೀಡಲಿದ್ದಾರೆ.ಶಿರಸಿಯ ನಾರಾಯಣ ಭಾಗವತ ಹಾಗೂ ಹಳಿಯಾಳದ ಕಾಳಿದಾಸ ಬಡಿಗೇರ ಅವರು ಬೊಂಬೆಯಾಟಕ್ಕೆ ಸಾಹಿತ್ಯ ರಚಿಸಿದ್ದಾರೆ. ವಿಶ್ವನಾಥ ಹಿರೇಮಠ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ ಎಂದು ಬಿರಾದಾರ ತಿಳಿಸಿದ್ದಾರೆ.