ದೇಶವನ್ನು ಪ್ರಪಾತಕ್ಕೆ ತಳ್ಳಲು ವ್ಯವಸ್ಥಿತ ಪಿತೂರಿ

| Published : Apr 29 2024, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಹೇಗಾದರೂ ಸರಿ ಅಧಿಕಾರ ಹಿಡಿಯಲೇಬೇಕೆಂದು ಕಾಂಗ್ರೆಸ್‌ ಮನಸಿಗೆ ತೋಚಿದ್ದನ್ನು ಘೋಷಿಸುತ್ತಾ ದೇಶವನ್ನು ತುಳಿಯಲು ಹೊರಟಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹೇಗಾದರೂ ಸರಿ ಅಧಿಕಾರ ಹಿಡಿಯಲೇಬೇಕೆಂದು ಕಾಂಗ್ರೆಸ್‌ ಮನಸಿಗೆ ತೋಚಿದ್ದನ್ನು ಘೋಷಿಸುತ್ತಾ ದೇಶವನ್ನು ತುಳಿಯಲು ಹೊರಟಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಗಂಭೀರ ಆರೋಪ ಮಾಡಿದರು.

ಲೋಕಸಭಾ ಚುನಾವಣೆ ನಿಮಿತ್ತ ನವನಗರದ 32ನೇ ವಾರ್ಡ್‌ನ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ರಾಹುಲ್‌ ಗಾಂಧಿ ಜನರ ಆಸ್ತಿಯನ್ನು ಎಕ್ಸ್-ರೇ ಮಾಡಿ ಎಲ್ಲವನ್ನು ಹಂಚುವುದಾಗಿ ಹೇಳುತ್ತಿದ್ದಾರೆ, ಸ್ಯಾಮ್ ಪಿತ್ರೋಡಾ ತಂದೆಯ ಆಸ್ತಿ ಮಕ್ಕಳಿಗೆ ಸೇರಬೇಕೆಂದರೆ ಶೇ.55ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟುವ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂಬ ಸಲಹೆ ನೀಡಿದ್ದಾನೆ, ಈ ಸ್ಯಾಮ ಪಿತ್ರೋಡಾ ಸಾಮಾನ್ಯ ಕಾಂಗ್ರಸ್‌ ನಾಯಕನಲ್ಲ, ಈತ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸಲಹೆಗಾರನಾಗಿದ್ದ. ಪ್ರಸ್ತುತ ರಾಹುಲ್‌ ಗಾಂಧಿ ಆಪ್ತ ಸಲಹೆಗಾರ, ಈತ ಕಾಂಗ್ರೆಸ್ ಬ್ರೈನ್ ಇದ್ದ ಹಾಗೆ. ದೇಶದ ಅಭಿವೃದ್ಧಿಗೆ ತೊಡಕು ಉಂಟು ಮಾಡುವ ಕಾಂಗ್ರೆಸ್ಸಿನ ಪ್ರಲೋಭನೆಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ದೇಶದಲ್ಲಿ ಬಡವರನ್ನು ಬಡವರಾಗಿಸಿ, ಅಭಿವೃದ್ಧಿ ಮಾಡದೆ ಬರಿ ಸುಳ್ಳಿನ ರಾಜಕಾರಣ ಮಾಡಿರುವುದೇ ಕಾಂಗ್ರೆಸ್ಸಿನ ಸಾಧನೆ, ಈ ಅಜೆಂಡಾ ಈಗಲೂ ಮುಂದುವರಿಸಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಅಭಿವೃದ್ಧಿ ಆಗುತ್ತಿರುವುದನ್ನು ಕಾಂಗ್ರೆಸ್ಸಿಗೆ ಸಹಿಸಲು ಆಗುತ್ತಿಲ್ಲ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಶಾಂತಿ ನೆಲೆಸಿದ್ದು, ಪಕ್ಕದ ಚೀನಾ, ಪಾಕಿಸ್ತಾನದ ಸದ್ದಡಗಿದೆ, ದೇಶದ ಸುರಕ್ಷತೆ ದೃಷ್ಟಿಯಿಂದ ಸಮರ್ಥ ಸರ್ಕಾರ, ಸಮರ್ಥ ಪ್ರಧಾನಮಂತ್ರಿ ಮೋದಿಯವರಾಗಿದ್ದಾರೆ, ದೇಶದಲ್ಲಿ ಸಮಾನ ನಾಕರಿಕ ಸಂಹಿತೆ ಜಾರಿಗೆ ತರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.

ಸಭೆಯಲ್ಲಿ ಮಾಜಿ ಬಿಟಿಡಿಎ ಅಧ್ಯಕ್ಷ ಜಿ.ಎನ್. ಪಾಟೀಲ, ಬಸವರಾಜ ಯಂಕಂಚಿ, ರಾಜುರೇವಣಕರ, ಎಂ.ಎ. ದೊರೆಗೋಳ, ಎಸ್.ಎಸ್. ಚಿತ್ತವಾಡಗಿ, ಎಸ್.ಬಿ. ಬಂಕದ, ಕಲ್ಲಪ್ಪ ತೋರತ, ಎಸ್.ಜಿ. ಜಳಜಿ, ನಗರಸಭೆ ಸದಸ್ಯೆ ಸವಿತಾ ಲಂಕೆನ್ನವರ, ಬಿ.ಎಸ್. ಕಳ್ಳಿಗುಡ್ಡ, ರುದ್ರಪ್ಪ ಮ್ಯಾಗಿನಹಳ್ಳಿ, ಜಗದೀಶ ಅಕ್ಕಿಮರಡಿ, ರಾಮಣ್ಣ ಜುಮನಾಳ ಸೇರಿದಂತೆ ಅನೇಕರು ಇದ್ದರು.-----------------------

----ಕೋಟ್‌-----

ತನ್ನ ಸ್ವಾರ್ಥಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಕಾಂಗ್ರೆಸ್ ಮತ್ತೆ ಭಾರತವನ್ನು ಪ್ರಪಾತಕ್ಕೆ ತಳ್ಳುವ ಯೋಜನೆ, ಯೋಚನೆ ವ್ಯವಸ್ಥೆಗಳನ್ನೇ ತರಲು ಮುಂದಾಗಿರುವುದು ನೋಡಿದರೆ ಕಾಂಗ್ರೆಸ್‌ ವಿದೇಶಿ ಶಕ್ತಿಗಳ ರೂಪಿಸಿದ ಷಡ್ಯಂತ್ರಕ್ಕೆ ಕೈಜೋಡಿಸಿದಂತೆ ಕಾಣುತ್ತಿದೆ. ಇದರಿಂದ ಜನರು ಜಾಗೃತರಾಗಬೇಕು. ದೇಶದ ಜನರ ಸಂಪತ್ತು ಜನರ ಕೈಯಲ್ಲಿರಬೇಕು, ದೇಶದ ಹಿತಕ್ಕಾಗಿ ಬಿಜೆಪಿಗೆ ಮತನೀಡಿ.

- ಡಾ.ವೀರಣ್ಣ ಚರಂತಿಮಠ ಮಾಜಿ ಶಾಸಕ