ಸಾರಾಂಶ
ರಬಕವಿ-ಬನಹಟ್ಟಿ: ಸಮಾಜ, ದೇಶದ ದಿಕ್ಕು ಬದಲಿಸುವ ಶಕ್ತಿ ಶಿಕ್ಷಕನಿಗೆ ಮಾತ್ರವಿದೆ. ಜ್ಞಾನ ಸಂಪನ್ಮೂಲ ವ್ಯಕ್ತಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಶಿಕ್ಷಕನಾಗಬಯಸೇಕೆಂದು ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಮಾಜ, ದೇಶದ ದಿಕ್ಕು ಬದಲಿಸುವ ಶಕ್ತಿ ಶಿಕ್ಷಕನಿಗೆ ಮಾತ್ರವಿದೆ. ಜ್ಞಾನ ಸಂಪನ್ಮೂಲ ವ್ಯಕ್ತಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಶಿಕ್ಷಕನಾಗಬಯಸೇಕೆಂದು ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.ನಗರದ ಜನತಾ ಶಿಕ್ಷಣ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಕರನ್ನು ಸಮಾಜಕ್ಕೆ ಒದಗಿಸುವುದೇ ಶಿಕ್ಷಣ ಮಹಾವಿದ್ಯಾಲಯದ ಧ್ಯೇಯ. ಅಧ್ಯಯನಶೀಲ ಪ್ರವೃತಿಯಿಂದ ನೆಲದ ಸತ್ವ, ಅಭಿರುಚಿ, ಸಂಸ್ಕೃತಿಗೆ ಪೂರಕವಾಗಿ ಶಿಕ್ಷಣ ನೀಡುವುದೇ ಮುಖ್ಯ ಗುರಿಯಾಗಿದೆ ಎಂದು ಪೂಜಾರಿ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕೊಣ್ಣೂರಿನ ಹೊರಗಿನಮಠದ ವಿಶ್ವಪ್ರಭು ಶಿವಾಚಾರ್ಯರು ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಹಿರಿದು. ಕೇವಲ ಸ್ವಾರ್ಥ ಅಥವಾ ಕಾಟಾಚಾರಕ್ಕೆ ಶಿಕ್ಷಣ ಪಡೆಯದೆ ಸಮಾಜಕ್ಕಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಣ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.ಈ ವೇಳೆ ಶಿಕ್ಷಣ ವಿದ್ಯಾಲಯದ ಚೇರಮನ್ ಶಂಕರ ಜಾಲಿಗಿಡದ, ಓಂಪ್ರಕಾಶ ಕಾಬರಾ, ಪ್ರಾಚಾರ್ಯೆ ಎಂ.ವಿ. ಬೂದಿ, ಎಲ್.ವಿ. ನಿಂಬರಗಿ ಇದ್ದರು. ಎಸ್.ಎಸ್.ನಡುವಿನಮನಿ, ಎಸ್.ಐ.ಮೇಲಗಿರಿ, ಎಂ.ಎಸ್.ಮಠಪತಿ, ಈರಣ್ಣ ಬಿಳ್ಳೂರ, ಎಸ್.ಎಸ್.ನೇಸೂರ, ಜಯಶ್ರೀ ಕೊಲ್ಹಾಪುರ ಹಾಜರಿದ್ದರು. ಭಾಗ್ಯಶ್ರೀ ಬಿಳ್ಳೂರ ಸ್ವಾಗತಿಸಿದರು. ರಾಮಪ್ಪ ರಾವಳ ನಿರೂಪಿಸಿದರು. ರುಕ್ಮಿಣಿ ಹರಿಜನ ವಂದಿಸಿದರು.