ಶಿಕ್ಷಕ ನಮ್ಮನ್ನು ಅಂಧಕಾರದಿಂದ ಹೊರತರುವ ದೈವಪ್ರಭೆ

| Published : Mar 25 2024, 12:53 AM IST

ಶಿಕ್ಷಕ ನಮ್ಮನ್ನು ಅಂಧಕಾರದಿಂದ ಹೊರತರುವ ದೈವಪ್ರಭೆ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ - ಬನಹಟ್ಟಿ: ಶಿಕ್ಷಕ ನಮ್ಮನ್ನು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನತ್ತ ಕರೆದೊಯ್ಯುವ ದೈವಪ್ರಭೆ. ಶಿಕ್ಷಕ, ಶಿಷ್ಯರ ಅಭ್ಯುದಯ ಕಂಡು ಸಂತಸಪಡುವ ಏಕೈಕ ಮಹಾನ್ ವ್ಯಕ್ತಿ. ಶಿಕ್ಷಕ ಶ್ರೀಗಂಧದಂತೆ ತಮ್ಮ ಸೇವೆಯುದ್ದಕ್ಕೂ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪಣ ತೊಟ್ಟು ಅಹರ್ನಿಶಿ ಶ್ರಮಿಸುವ ದೇವದೂತನಿದ್ದಂತೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ಕಣಬೂರ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ - ಬನಹಟ್ಟಿ ಶಿಕ್ಷಕ ನಮ್ಮನ್ನು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನತ್ತ ಕರೆದೊಯ್ಯುವ ದೈವಪ್ರಭೆ. ಶಿಕ್ಷಕ, ಶಿಷ್ಯರ ಅಭ್ಯುದಯ ಕಂಡು ಸಂತಸಪಡುವ ಏಕೈಕ ಮಹಾನ್ ವ್ಯಕ್ತಿ. ಶಿಕ್ಷಕ ಶ್ರೀಗಂಧದಂತೆ ತಮ್ಮ ಸೇವೆಯುದ್ದಕ್ಕೂ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪಣ ತೊಟ್ಟು ಅಹರ್ನಿಶಿ ಶ್ರಮಿಸುವ ದೇವದೂತನಿದ್ದಂತೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ಕಣಬೂರ ಹೇಳಿದರು. ಈಚೆಗೆ ಸಂಸ್ಥೆಯ ೧೦ನೇ ವರ್ಗದ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಜನ್ಮ ಮತ್ತು ಸಂಸ್ಕಾರ ನೀಡಿದರೆ, ಗುರು ನಮ್ಮನ್ನು ಭವಸಾಗರದಿಂದ ಯಶಸ್ಸಿನ ದೋಣಿ ಮೂಲಕ ಜ್ಞಾನದೆಡೆ ಕರೆದೊಯುವ ದೇವರು. ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ತಂದೆ - ತಾಯಿ ಮತ್ತು ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದು ಕಿವಿ ಮಾತು ಹೇಳಿದರು. ಶಿಕ್ಷಕರ ಪಾದಪೂಜೆ: ಬಸವರಾಜ ಕಣಬೂರ ಅವರು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 32 ಶಿಕ್ಷಕ, ಶಿಕ್ಷಕಿಯರ ಪಾದಪೂಜೆ ನೆರವೇರಿಸಿದರು. ಹೂಮಳೆಗರೆದು ಆರತಿ ಎತ್ತಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಈ ಮೂಲಕ ಶಿಕ್ಷಕರ ಬಗ್ಗೆ ತಾವು ಹೊಂದಿರುವ ಅಪರಿಮಿತ ಪೂಜ್ಯ ಭಾವನೆ ವ್ಯಕ್ತಪಡಿಸಿದರು.

ಸಂಸ್ಥೆಯ ನಿರ್ದೇಶಕ ಚನ್ನಪ್ಪ ಇಂಗಳಗಿ, ಸುಭಾಸ ಪೂಜಾರಿ, ಮುಖ್ಯಶಿಕ್ಷಕ ಈರಪ್ಪ ಲಕ್ಕಪ್ಪಗೋಳ, ಸುಜಾತಾ ಬಾಣಕಾರ, ಭಾರತಿ ತೇಲಿ, ಗೀತಾ. ರೂಪಾ ನ್ಯಾಮಗೌಡ, ವಿಜಯಲಲಕ್ಷ್ಮೀ ನಿಗಡಿ, ಸದಯ್ಯಾ ಅವರಕೋಡ, ಶಶಿಧರ ಬಡಿಗೇರ ಮೊದಲಾದ ಸಿಬ್ಬಂದಿ ಭಾವುಕರಾಗಿ ಈ ಹೃದಯಸ್ಪರ್ಶಿ ಸನ್ಮಾನ ನಮ್ಮ ಹೊಣೆಗಾರಿಕೆ ಹೆಚ್ಚಿಸಿದೆ ಮತ್ತು ಬೋಧನಾ ವೃತ್ತಿಯಲ್ಲಿರುವ ನಮಗೆ ಸಾರ್ಥಕತೆ ಮೂಡಿಸಿದೆ ಎಂದು ನುಡಿದರು. ಕೋಟ್...ಖಾಸಗಿ ಶಿಕ್ಷಣ ಸಂಸ್ಥೆಗಳೆಂದರೆ ಶಿಕ್ಷಕರನ್ನು ಜೀತದಾಳುಗಳಂತೆ ಕಾಣುತ್ತಾರೆಂಬ ಭಾವನೆ ಹಲವರಲ್ಲಿದೆ. ಹಿಪ್ಪರಗಿ ಗ್ರಾಮದ ಬಸವೇಶ್ವರ ಸಂಸ್ಥೆ ಕಾಯಾಧ್ಯಕ್ಷ ಬಸವರಾಜ ಕಣಬೂರ ಶಿಕ್ಷಕರನ್ನು ದೇವರೆಂದು ಭಾವಿಸಿ ಗೌರವಿಸಿರುವುದು ಶಿಕ್ಷಕರಿಗೆ ಸಮಾಜದಲ್ಲಿರುವ ಗೌರವದ ಪ್ರತೀಕವಾಗಿದೆ. ಇಂಥ ನಡವಳಿಕೆ ಅಪರೂಪವಾಗಿದೆ. ಎಲ್ಲ ಸಂಸ್ಥೆಗಳಲ್ಲೂ ಶಿಕ್ಷಕರನ್ನು ಗೌರವದಿಂದ ಕಾಣುವಂತ ಈ ಪ್ರಸಂಗ ಮಾದರಿಯಾಗಿದೆ. ಶಿಕ್ಷಕರು ಕೂಡಾ ತಮಗೆ ದೊರೆತ ಗೌರವಕ್ಕೆ ಚ್ಯುತಿಯಾಗದಂತೆ ಹೆಚ್ಚಿನ ಹೊಣೆಗಾರಿಕೆ ನಿಭಾಯಿಸಲು ಸ್ಫೂರ್ತಿ ನೀಡಿದಂತಾಗಿದೆ.

ಅಶೋಕ ಬಸಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಮಖಂಡಿ.