ಗ್ರಾಮಸ್ಥರ ಪಾಲಿಗೆ ದೇವರಾಗಿರುವ ಶಿಕ್ಷಕ

| Published : Sep 05 2025, 01:01 AM IST

ಸಾರಾಂಶ

ಕನ್ನಡಪ್ರಭ ವಾತೆ೯ ಇಂಡಿ ಲೋಕಕ್ಕೆ ಶಿಕ್ಷಣದ ಬೆಳಕು ಹರಡಿ ಆದಶ೯ ಶಿಕ್ಷಕನಾಗಿ, ದೇವ ಮಾನವನಾಗಿ ಬಾಳಿದ ರೇವಣಸಿದ್ದಪ್ಪ ಮಾಸ್ತರರ ನೆನಪಿಗಾಗಿ ಇಂಡಿ ತಾಲೂಕಿನ ಅಥಗಾ೯ ಗ್ರಾಮದಲ್ಲಿ 1925 ರಲ್ಲಿಯೇ ಗ್ರಾಮಸ್ಥರು ದೇಗುಲ ನಿರ್ಮಿಸಿದ್ದಾರೆ. ಪಲ್ಲಕ್ಕಿಯನ್ನು ತಯಾರಿಸಿದ್ದು, ಪ್ರತಿ ವಷ೯ ಶಿವರಾತ್ರಿ ದಿನ ಗ್ರಾಮದಲ್ಲಿ ಅವರ ಜಾತ್ರೆಯನ್ನು ಮಾಡಲಾಗುತ್ತದೆ. ರೇವಣಸಿದ್ದಪ್ಪ ಮಾಸ್ತರ ಪಲ್ಲಕ್ಕಿ ಮೆರವಣಿಗೆಯನ್ನು ನಿಂತು ನೋಡಬೇಕು, ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ಪಲ್ಲಕ್ಕಿ ಹೊತ್ತಿರುವರು ಇವರನ್ನು ದಾಟಿ ಹೋಗುತ್ತಾರೆ. ಇಷ್ಟೊಂದು ಭಯಭಕ್ತಿಯಿಂದ ಅವರನ್ನು ಪೂಜಿಸಲಾಗುತ್ತಿದೆ. ರೇವಣಸಿದ್ದಪ್ಪ ಮಾಸ್ತರರ ಕತ೯ವ್ಯ ಪ್ರಜ್ಞೆ ಅವರನ್ನು ಸ್ಥಾನಕ್ಕೇರಿಸಿದೆ.

ಖಾಜು ಸಿಂಗೆಗೋಳಕನ್ನಡಪ್ರಭ ವಾತೆ೯ ಇಂಡಿ

ಲೋಕಕ್ಕೆ ಶಿಕ್ಷಣದ ಬೆಳಕು ಹರಡಿ ಆದಶ೯ ಶಿಕ್ಷಕನಾಗಿ, ದೇವ ಮಾನವನಾಗಿ ಬಾಳಿದ ರೇವಣಸಿದ್ದಪ್ಪ ಮಾಸ್ತರರ ನೆನಪಿಗಾಗಿ ಇಂಡಿ ತಾಲೂಕಿನ ಅಥಗಾ೯ ಗ್ರಾಮದಲ್ಲಿ 1925 ರಲ್ಲಿಯೇ ಗ್ರಾಮಸ್ಥರು ದೇಗುಲ ನಿರ್ಮಿಸಿದ್ದಾರೆ. ಪಲ್ಲಕ್ಕಿಯನ್ನು ತಯಾರಿಸಿದ್ದು, ಪ್ರತಿ ವಷ೯ ಶಿವರಾತ್ರಿ ದಿನ ಗ್ರಾಮದಲ್ಲಿ ಅವರ ಜಾತ್ರೆಯನ್ನು ಮಾಡಲಾಗುತ್ತದೆ. ರೇವಣಸಿದ್ದಪ್ಪ ಮಾಸ್ತರ ಪಲ್ಲಕ್ಕಿ ಮೆರವಣಿಗೆಯನ್ನು ನಿಂತು ನೋಡಬೇಕು, ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ಪಲ್ಲಕ್ಕಿ ಹೊತ್ತಿರುವರು ಇವರನ್ನು ದಾಟಿ ಹೋಗುತ್ತಾರೆ. ಇಷ್ಟೊಂದು ಭಯಭಕ್ತಿಯಿಂದ ಅವರನ್ನು ಪೂಜಿಸಲಾಗುತ್ತಿದೆ. ರೇವಣಸಿದ್ದಪ್ಪ ಮಾಸ್ತರರ ಕತ೯ವ್ಯ ಪ್ರಜ್ಞೆ ಅವರನ್ನು ಸ್ಥಾನಕ್ಕೇರಿಸಿದೆ.ಗ್ರಾಮದಲ್ಲಿ 98 ವಷ೯ಗಳ ಹಿಂದೆಯೇ ಶಿಕ್ಷಕನನ್ನು ದೇವರ ಸ್ಥಾನದಲ್ಲಿರಿಸಿ ದೇಗುಲ ನಿರ್ಮಿಸಿ ಪೂಜಿಸಲಾಗುತ್ತಿದೆ. ಇದು ಇಡೀ ಶಿಕ್ಷಕ ವೖಂದಕ್ಕೆ ಸಲ್ಲುವ ಗೌರವ. ಬಿಜಾಪೂರ ಜಿಲ್ಲೆಯ ಮನಗೂಳಿ ಗ್ರಾಮದ ಅವರಸಂಗ ಮನೆತನದ ಶಿವಪ್ಪ ಹಾಗೂ ಲಕ್ಷ್ಮೀಬಾಯಿ ದಂಪತಿಯ ಪುತ್ರನಾಗಿ ಮೇ 1889ರಂದು ಜನಸಿದ ರೇವಣಸಿದ್ದಪ್ಪ, ಅಧ್ಯಾತ್ಮ ಜೀವಿ, ಅಪಾರ ಜ್ಞಾನಿಯಾಗಿದ್ದರು. ಬಳಿಕ ಶಿಕ್ಷಕರಾಗಿ ಅಥಗಾ೯ ಗ್ರಾಮಕ್ಕೆ ಬಂದು ನೆಲೆಸಿದರು. ಅವರು ನೀಡುವ ಶಿಕ್ಷಣದ ಮಾದರಿ, ಅಧ್ಯಾತ್ಮ ಹಾಗೂ ಸಂಸ್ಕೖತಿ ಪಾಠಗಳಿಗೆ ಪ್ರಭಾವಿತರಾದ ಗ್ರಾಮಸ್ಥರು ರೇವಣಸಿದ್ದಪ್ಪನವರು ತಮ್ಮೂರ ದೇವರೆಂದು ಒಪ್ಪಿದರು. ಈ ಆದಶ೯, ಶಿಕ್ಷಕ 1925 ಫೆಭ್ರುವರಿ 23 ರಂದು ನಿಧನರಾದರು,ಅವರ ಸ್ಮರಣಾರ್ಥವಾಗಿ ದೇವರೆಂದು ಕಾಣುವ ಸದುದ್ದೇಶದಿಂದ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಒಂದು ದೇವಾಲಯ ನಿಮಿ೯ಸಿದ್ದು, ಅವರ ಮೂರ್ತಿ ತಯಾರಿಸಿ ಇಂದಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದೇವರಂತೆಯೇ ಭಕ್ತಿಭಾವದಿಂದ ನೋಡಲಾಗುತ್ತಿದೆ.ಕೋಟ್‌ಗ್ರಾಮಸ್ಥರ ಮನೆ, ಮನಗಳಲ್ಲಿ ಮಾಸ್ತರರ ನೆನಪು, ಜಗಲಿಯ ಮೇಲೆ ಅವರ ಭಾವಚಿತ್ರ. ದಿನನಿತ್ಯ ಪೂಜೆ ನಡೆಯುತ್ತದೆ. ಒಬ್ಬ ಪ್ರಾಥಮಿಕ ಶಾಲೆಯ ಮಾಸ್ತರರನ್ನು ಈ ರೀತಿ ದೇಗುಲ ಕಟ್ಟಿ ಪೂಜಿಸುತ್ತಿರುವುದು ನಾಡಿನಲ್ಲಿ ಬೇರೆಲ್ಲೂ ಇರಲಿಕ್ಕಿಲ್ಲ. ಶಿಕ್ಷಕರು ನಿಸ್ವಾಥ೯ದಿಂದ, ಕತ೯ವ್ಯ ಪ್ರಜ್ಞೆಯಿಂದ, ಆದಶ೯ ಮೌಲ್ಯಗಳಿಂದ ಸೇವೆ ಮಾಡಿದರೆ ದೇವರೆಂಬ ನಂಬಿಕೆ ಗ್ರಾಮಸ್ಥರಿಗೆ ಬರುವದು ಸಹಜ.ಎಸ್‌.ಆರ್‌.ನಡಗಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿಕೋಟ್‌ಇಂದಿಗೂ ತಮ್ಮ ದೈನಂದಿನ ಚಟುವಟಿಕೆ ಪ್ರಾರಂಭಿಸುವ ಮೊದಲು ಮಾಸ್ತರರ ಗುಡಿಗೆ ಭೇಟಿ ನೀಡಿ ದಶ೯ನ ಪಡೆದು ಪ್ರಾರಂಭಿಸುವ ಪರಿಪಾಠವಿದೆ. ಶಿಕ್ಷಕ ರೇವಣಸಿದ್ದಪ್ಪ ಮಾಸ್ತರರ ಅಂದವಾದ ದೇಗುಲ ಕಟ್ಟಿ, ದೇಗುಲದಲ್ಲಿ ಪಂಚಲೋಹದ ಅವರ ಮೂತಿ೯ಗೆ ದಿನನಿತ್ಯ ಎರಡು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ. ಅದಕ್ಕೊಬ್ಬ ಪೂಜಾರಿ ನೇಮಿಸಿದ್ದು ಸದಾ ನಂದಾದೀಪ ಉರಿಯುತ್ತಿರುತ್ತದೆ.ಗಣಪತಿ ಬಾಣಿಕೋಲ, ಗ್ರಾಮಸ್ಥರ