ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕಿ

| Published : Sep 05 2025, 01:00 AM IST

ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡ ಮಟ್ಟದ ಭಕ್ತ ಪ್ರಹ್ಲಾದ ನಾಟಕ ಮಾದರಿಯಲ್ಲಿಯೇ ಶಾಲಾ ಮಕ್ಕಳನ್ನು ಬಳಸಿಕೊಂಡು ಡ್ರಾಮಾ ಪ್ರದರ್ಶಿಸಿದ್ದು ಶಿಕ್ಷಕಿ ಸರಸ್ವತಿ ಹೆಗ್ಗಳಿಕೆ

ಮುಡಿಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಸ್ವತಿ ಮಕ್ಕಳಿಗೆ ಅಚ್ಚುಮೆಚ್ಚು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೊಡ್ಡ ಮಟ್ಟದ ಭಕ್ತ ಪ್ರಹ್ಲಾದ ನಾಟಕ ಮಾದರಿಯಲ್ಲಿಯೇ ಶಾಲಾ ಮಕ್ಕಳನ್ನು ಬಳಸಿಕೊಂಡು ಡ್ರಾಮಾ ಪ್ರದರ್ಶಿಸಿದ್ದು ಶಿಕ್ಷಕಿ ಸರಸ್ವತಿ ಹೆಗ್ಗಳಿಕೆ. ಮಕ್ಕಳ ಭೌತಿಕ ಮಟ್ಟ ಗಮನಿಸಿ ಉದಾಹರಣೆ ಮೂಲಕ ಕಲಿಕೆ, ಆಂಗ್ಲಭಾಷೆ, ಕನ್ನಡ, ಸಮಾಜ ವಿಷಯಗಳ ಬೋಧನೆ ಮಕ್ಕಳ ಕಲಿಕಾ ಆಸಕ್ತಿಯನ್ನು ಗಮನಿಸಿ ಅವರಿಗೆ ಪೂರಕ ರೀತಿಯಲ್ಲಿ ಕಲಿಸುವ ಜೊತೆಗೆ ಅವರಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ರೂಪಿಸುವಲ್ಲಿ ಮಕ್ಕಳ ಜೊತೆ ತಾವೇ ಮಕ್ಕಳಂತೆ ಬೆರೆತು ಪಾಠ. ಪ್ರವಚನಗಳನ್ನು ಕಲಿಸುವ ಮೂಲಕ ಕೊಳ್ಳೇಗಾಲ ಶೈಕ್ಷಣಿಕ ವಲಯದ ಮುಡಿಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಸ್ವತಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ .

ಪಾಠ ಮಾಡುವುದಷ್ಟೆ ನಮ್ಮ ಜವಾಬ್ದಾರಿ ಎಂದು ಕೈಚಲ್ಲಿ ಕೂರದ ಇವರು ಮಕ್ಕಳಲ್ಲಿ ಕಲಿಕಾಸಕ್ತಿಯನ್ನು ಗಮನಿಸುತ್ತಾರೆ, ಅದೇ ರೀತಿಯಲ್ಲಿ ಮಕ್ಕಳ ಭೌತಿಕ ಮಟ್ಟವನ್ನು ಗಮನಿಸಿ ಅವರ ಕಲಿಕಾಸಕ್ತಿಗೆ ಪೂರಕವಾಗಿ ಸ್ಪಂದಿಸಿ ಅದೇ ಮಾದರಿಯಲ್ಲಿ ಉದಾಹರಣೆಗಳ ಮೂಲಕ ಕಲಿಸುವಲ್ಲಿ ತಾವು ಮಕ್ಕಳಂತೆ ಬದಲಾಗಿ ತಮ್ಮ ಕಾರ್ಯಪ್ರವೃತ್ತಿ ಮೆರೆಯುತ್ತಿದ್ದಾರೆ. ನಿರ್ಗಳವಾಗಿ ಆಂಗ್ಲ ಭಾಷೆ ಜೊತೆ ಕನ್ನಡ, ಸಮಾಜ ವಿಷಯಗಳನ್ನು ಕಥೆಗಳ ಮೂಲಕ ಉಜದಾಹರಣೆಗಳ ಜೊತೆ ಬೋಧಿಸುವಲ್ಲಿ ಇವರು ಪರಿಣಿತ ಶಿಕ್ಷಕರು ಎಂದರೆ ಅತಿಶಯೋಕ್ತಿ ಎನಿಸದು. ಇವರ ಕಳೆದ 2 ವರ್ಷಗಳ ಹಿಂದೆ 28ಕ್ಕೂ ಅಧಿಕ ಶಾಲಾ ಮಕ್ಕಳನ್ನೆ ಬಳಸಿಕೊಂಡು ಭಕ್ತ ಪ್ರಹ್ಲಾದ ನಾಟಕ ಪ್ರದರ್ಶಿಸಿ, ಆನಾಟಕ ಕಲಿಯಲು ತಾವೇ ಗುರುಗಳಾಗಿ,

ಬೇಸಿಗೆ ರಜೆ ಯಲ್ಲೂ ಶಾಲೆಗೆ ಆಗಮಿಸಿ ಕೆಲ ದಿನಗಳ ಕಾಲ ಮಕ್ಕಳನ್ನೆ ತಮ್ಮ ಮನೆಗೆ ಕರೆಸಿಕೊಂಡು ನಾಟಕ ಕಲಿಸಿ ಅದನ್ನು ಬೖಹತ್ ವೇದಿಕೆಯಲ್ಲಿ ಪ್ರದರ್ಶಿಸಿ ಮಕ್ಕಳ ಪ್ರತಿಭೆ ಪ್ರೋತ್ಸಾಹದ ಜೊತೆಗೆ ಅವರಿಂದ ಗಮನಾರ್ಹ ಸಾಧನೆ ಮಾಡಿಸಿ ಬೖಹತ್ ನಾಟಕದ ಮಾದರಿಯೇ ಮಕ್ಕಳಿಗೆ ನುರಿತ ಮೇಕಪ್ ಕಲಾವಿದರನ್ನು ಕರೆಸಿ ವೇಷ-ಭೂಷಣ ತೊಡಿಸಿ

ರಾತ್ರಿ 2ಗಂಟೆತನಕ ಪೋಷಕರು, ಗಣ್ಯರು ಕೂತು ನಾಟಕ ವೀಕ್ಷಿಸುವಂತೆ ಮಾಡಿದ ಹೆಗ್ಗಳಿಕೆ ಸರಸ್ವತಿ ಅವರಿಗೆ ಸಲ್ಲಬೇಕು.

ಹನೂರು ಶೈಕ್ಷಣಿಕ ವಲಯದ ಕೆಂಪಯ್ಯನ ಹಟ್ಟಿಯಲ್ಲಿ 1994ರಲ್ಲಿ ಮೊದಲ ಶಿಕ್ಷಕರಾಗಿ ನೇಮಕಗೊಂಡು ಬಳಿಕ ಹೊನ್ನೂರು, ಹೊಸ ಹಂಪಾಪುರ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದು ಪ್ರಸ್ತುತ ಮುಡಿಗುಂಡದಲ್ಲಿ 9ವರುಷಗಳ ಸೇವೆ ಸಲ್ಲಿಸುತ್ತಿದ್ದು ತಮ್ಮ 30 ವರ್ಷಗಳ ವೃತ್ತಿ ಜೀವನದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರ ಸೇವೆಗೆ ಸಂದಿವೆ.---

ಸರಸ್ವತಿ