ಅಕ್ಷರದ ಬೆಳಕು ನೀಡುವ ಶಿಕ್ಷಕ ವೃತ್ತಿ

| Published : Jun 09 2024, 01:36 AM IST

ಸಾರಾಂಶ

ಎಷ್ಟೇ ದೊಡ್ಡ ಹುದ್ದೆಗೆ ಹೋದರೂ ತಮಗೆ ಅಕ್ಷರ ಕಲಿಸಿದ ಗುರುವನ್ನು ಕಂಡಾಗ ಕೈಮುಗಿಯುವ ಕೆಲಸವನ್ನು ಯಾರೇ ಆಗಲಿ ಮಾಡುತ್ತಾರೆ ಅಂತಹ ಘನತೆಯಿಂದ ಕೂಡಿದ ವೃತ್ತಿ ಇದಾಗಿದ್ದು, ಗುರುವಿಗೆ ಯಾರೂ ಸಮನಾರಲ್ಲ

ಕನ್ನಡಪ್ರಭ ವಾರ್ತೆ ಕೋಲಾರಸುಮಾರು ೩೦ ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಲೂರು ತಾಲ್ಲೂಕಿನ ಆಗಲಕೋಟೆ ಶಾಲೆಯ ಮುಖ್ಯ ಶಿಕ್ಷಕ ವಿ.ವೆಂಕಟೇಶಪ್ಪರನ್ನು ನಗರದ ಆರ್‌ವಿ ಯೋಗ ತಂಡದಿಂದ ಸನ್ಮಾನಿಸಿದರು.ಯೋಗ ಗುರು ಗೋಪಾಲರೆಡ್ಡಿ ಮಾತನಾಡಿ, ಶಿಕ್ಷಕ ವೃತ್ತಿ ಇತರೆಲ್ಲಾ ಕೆಲಸಗಳಿಗಿಂತ ಅತ್ಯಂತ ಪವಿತ್ರವಾದುದು, ಇಂತಹ ವೃತ್ತಿಯಲ್ಲಿ ಸಾವಿರಾರು ಮಕ್ಕಳಿಗೆ ಅಕ್ಷರ ಕಲಿಸಿ ಅನೇಕರ ಬಾಳಿಗೆ ಬೆಳಕಾಗುವ ಕೆಲಸ ಮಾಡಿರುವ ವೆಂಕಟೇಶಪ್ಪ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಶಿಕ್ಷಕರನ್ನು ಸ್ಮರಿಸುತ್ತಾರೆ

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ ಮಾತನಾಡಿ, ಸಮಾಜದಲ್ಲಿ, ಸರ್ಕಾರದಲ್ಲಿ ಯಾವುದೇ ಉದ್ಯೋಗ ಮಾಡಿದರೆ ನಿವೃತ್ತರಾದ ನಂತರ ಅಂತಹವರನ್ನು ಗುರುತಿಸುವವರು ತುಂಬಾ ವಿರಳ ಆದರೆ ಶಿಕ್ಷಕ ವೃತ್ತಿಯಲ್ಲಿ ಮಾತ್ರ ಜೀವನ ಪೂರ್ತಿ ಮಾತ್ರವಲ್ಲ, ನಂತರವೂ ಶಿಕ್ಷಕರನ್ನು ಸ್ಮರಿಸುತ್ತಾರೆ ಎಂದರು.

ಎಷ್ಟೇ ದೊಡ್ಡ ಹುದ್ದೆಗೆ ಹೋದರೂ ತಮಗೆ ಅಕ್ಷರ ಕಲಿಸಿದ ಗುರುವನ್ನು ಕಂಡಾಗ ಕೈಮುಗಿಯುವ ಕೆಲಸವನ್ನು ಯಾರೇ ಆಗಲಿ ಮಾಡುತ್ತಾರೆ ಅಂತಹ ಘನತೆಯಿಂದ ಕೂಡಿದ ವೃತ್ತಿ ಇದಾಗಿದ್ದು, ಗುರುವಿಗೆ ಸಮಾನರುಂಟೆ ಎಂಬ ಮಾತು ಸತ್ಯವಾಗಿದೆ, ಸಾಧನೆಗೆ ಗುರಿ ಇರಬೇಕು, ಆ ಗುರಿ ತಲುಪಲು ನಮ್ಮೊಂದಿಗೆ ಗುರು ಇರಬೇಕು ಎಂಬ ಮಾತು ಸತ್ಯ ಎಂದರು.

ಆರ್.ವಿ.ಯೋಗ ತಂಡದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣಸ್ವಾಮಿ, ಎಲ್‌ಐಸಿ ಮುನಿಯಪ್ಪ, ನಿವೃತ್ತ ಸಿಡಿಪಿಒ ನಾಗರಾಜ ಗೌಡ,ನಾಗರಾಜ್, ಹಾಳೆಪಾಳ್ಯ ಶ್ರೀನಿವಾಸ್, ಸೊಸೈಟಿ ಶ್ರೀನಿವಾಸ್, ರಾಮನಾಯಕ್ ವೆಂಕಟೇಶ್ ಡಾ.ಗೌರಿನಾಯ್ಡು, ಲಕ್ಷ್ಮಣ್ ಇದ್ದರು.