ಸಾರಾಂಶ
ಲೋಕಾಪುರ ಹೋಬಳಿಯ ಚೌಡಾಪುರ ತೋಟದ ಒಂದೇ ಕುಟುಂಬದ ೭ ಮಂದಿಗೆ ಹೃದಯಾಘಾತಕ್ಕೆ ಬಲಿಯಾದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ ಕಳೆದ ಒಂದೂವರೆ ದಶಕದಲ್ಲಿ ಆಸ್ಪತ್ರೆ ಸೇರಿ ಅಸುನೀಗಿದ ೭ಮಂದಿಯ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಲೋಕಾಪುರ ಹೋಬಳಿಯ ಚೌಡಾಪುರ ತೋಟದ ಒಂದೇ ಕುಟುಂಬದ ೭ ಮಂದಿಗೆ ಹೃದಯಾಘಾತಕ್ಕೆ ಬಲಿಯಾದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ ಕಳೆದ ಒಂದೂವರೆ ದಶಕದಲ್ಲಿ ಆಸ್ಪತ್ರೆ ಸೇರಿ ಅಸುನೀಗಿದ ೭ಮಂದಿಯ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು.ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ ಮಲಘಾಣ ಹಾಗೂ ಡಾ.ಸುನೀಲ ಬೆನ್ನೂರ ಆರೋಗ್ಯಾಧಿಕಾರಿಗಳ ಸಿಬ್ಬಂದಿ ಹಮ್ಮಿದ್ ಮುದಕವಿ, ಜೆ.ಪಿ. ಜಲಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಮುಖಂಡಾದ ರಮೇಶ ಯರಗಟ್ಟಿ, ಕಾಶಲಿಂಗ ಮಾಳಿ ಕುಟುಂಬಸ್ಥರು ಇದ್ದರು.
ಹಲವು ವರ್ಷಗಳಿಂದ ಕುಟುಂಬದ ಸದಸ್ಯರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಆದರೂ ಸರಕಾರ ನಮ್ಮ ನೆರವಿಗೆ ಬಂದಿಲ್ಲ. ಹೃದಯಾಘಾತದಿಂದ ಏಳು ಸಾವನ್ನಪ್ಪಿರುವುದು ಕುಟುಂಬದ ಆಘಾತ ತಂದಿದೆ. ನಾಲ್ಕು ಜನಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಇದಕ್ಕಾಗಿ ಆಸ್ಪತ್ರೆಗೆ ಸಾಕಷ್ಟು ಹಣ ಕಳೆದುಕೊಂಡಿದ್ದೇವೆ ಎಂದು ಸ್ಟಂಟ್ ಅಳವಡಿಸಿಕೊಂಡಿರುವ ಈರಣ್ಣ ಫಕೀರಪ್ಪ ದೊಡಮನಿ ಅಳಲು ತೋಡಿಕೊಂಡರು.-
ಜಿಲ್ಲಾ ವೈದ್ಯಾಧಿಕಾರಿಗಳ ಆದೇಶದ ಹಿಲ್ಲೆಲೆ ಚೌಡಾಪುರ ಗ್ರಾಮಕ್ಕೆ ಆಗಮಿಸಿ ಹೃದಯಘಾತದಿಂದ ಮರಣಹೊಂದಿದ ಕುಟುಂಬದ ಮಾಹಿತಿ ಪಡೆದುಕೊಂಡಿದ್ದೇವೆ.ಗ್ರಾಮದಲ್ಲಿ ಮುಂದಿನ ವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಧುಮೇಹ, ಬಿಪಿ, ಕ್ಯಾನ್ಸರ್, ಮುಂತಾದ ಅಸಾಂಕ್ರಾಮಿಕ ರೋಗಗಳ ತಪಾಸಣೆ ಕೈಗೊಳ್ಳಲಾಗುವುದು.- ಡಾ. ವೆಂಕಟೇಶ ಮಲಘಾಣ, ತಾಲೂಕು ವೈದ್ಯಾಧಿಕಾರಿ