ಭಗವಾ ಧ್ವಜ ತಯ್ಯಾರಿಸಿ ಹಂಚಲು ಮುಂದಾದ ಮಹಿಳೆಯರ ತಂಡ

| Published : Jan 20 2024, 02:06 AM IST

ಭಗವಾ ಧ್ವಜ ತಯ್ಯಾರಿಸಿ ಹಂಚಲು ಮುಂದಾದ ಮಹಿಳೆಯರ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಜ.22ರಂದು ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕಿನ ಕಾಡವಾದ ಗ್ರಾಮದ ಮಹಿಳೆಯರು ಭಗವಾ ಧ್ವಜ ತಯಾರಿಸಿ ಮನೆ ಮನೆಗೆ ಹಂಚಲು ಮುಂದಾಗಿದ್ದಾರೆ.

ಬೀದರ್: ಜ.22ರಂದು ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕಿನ ಕಾಡವಾದ ಗ್ರಾಮದ ಮಹಿಳೆಯರು ಭಗವಾ ಧ್ವಜ ತಯಾರಿಸಿ ಮನೆ ಮನೆಗೆ ಹಂಚಲು ಮುಂದಾಗಿದ್ದಾರೆ.

ಗ್ರಾಮದ 6 ಜನ ಮಹಿಳೆಯರಿಂದ ಧ್ವಜ ತಯಾರಿಸಲಾಗುತಿದ್ದು, ಜ.22ರಂದು ಗ್ರಾಮದ ಎಲ್ಲ ಮನೆಗಳ ಮೇಲೂ ಭಗವಾ ಧ್ವಜ ಹಾರಾಡಬೇಕೆಂಬ ಇಚ್ಛೆಯಿಂದ ಧ್ವಜ ತಯಾರಿಸಲಾಗುತ್ತಿದೆ.

ಗ್ರಾಮದ ಇಂದುಮತಿ‌ ಮರಕಂದಾ, ಸವಿತಾ ನಿನ್ನಿ, ಶ್ರೀದೇವಿ ಮೀನಕೇರಿ, ಸವಿತಾ ಶೀಲವಂತ, ಪದ್ಮಾವತಿ ಕರ್ಕಂನಳ್ಳಿ, ಅಂಬಿಕಾ ಹೂಗಾರರಿಂದ ಧ್ವಜ ತಯಾರಿಸಲಾಗುತ್ತಿದೆ.

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ‌ ಕಾರ್ಯಕರ್ತರಿಂದ ಧ್ವಜದ ಬಟ್ಟೆ ವಿತರಣೆ ಮಾಡಿದ್ದು, ತಾವೇ ಸ್ವತಃ ಹೊಲಿಗೆಯಂತ್ರದಿಂದ ತಯಾರಿಸಿ ವಿತರಿಸಲು ಮಹಿಳೆಯರು ಮುಂದಾಗಿದ್ದಾರೆ.

ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆ ವಿತರಣೆಯಿಂದ ಪ್ರೇರಣೆಗೊಂಡ ಮಹಿಳೆಯರು. ರಾಮ ಪ್ರಾಣ ಪ್ರತಿಷ್ಟಾಪನೆ ದಿನದಂದು ಅಳಿಲು ಸೇವೆ ಇರಲೇಂದು ಧ್ವಜ ತಯಾರಿಸುತಿದ್ದಾರೆ.

ಈಗಾಗಲೆ 500 ಧ್ವಜ ತಯಾರಿಸಿ, ಇನ್ನುಳಿದ ಧ್ವಜ ತಯಾರಿಸಲು ಮುಂದಾದ ಮಹಿಳೆಯರು. ಸುಮಾರು 1 ಸಾವಿರಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಧ್ವಜ ವಿತರಿಸಲು ಮುಂದಾಗಿದ್ದಾರೆ.