ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಸರಿಯಾದ ವೇದಿಕೆಗಳು ದೊರೆಯದೆ ಕಲಾವಿದರು ಪಲಾಯನ ಮಾಡುತ್ತಿದ್ದಾರೆ ಎಂದು ಖ್ಯಾತ ಕಲಾವಿದ ನಿಂಗರಾಜ ಸಿಂಗಾಡಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರೊ.ಎಸ್.ಎಸ್.ಕೋರಿ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಮತ್ತು ದೈಹಿಕವಾಗಿ ಸದೃಢವಾಗಲು ಸಾಧ್ಯ ಎಂದರು.ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಡಾ.ಆರ್.ವಿ.ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಸಮಯ, ಶಿಸ್ತು, ಶ್ರದ್ಧೆ ಎಂಬ ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ ಹೊಸಮನಿ ಮಾತನಾಡಿದರು. ಪ್ರೊ.ಐ.ಎಸ್.ಕಾಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಗೊಂಗಡಿ, ಎಸ್.ಕೆ.ಉಪ್ಪಾರ, ಡಾ.ಜಿ.ಡಿ.ಅಕಮಂಚಿ, ಸುಪ್ರಿಯ ಶೇರಿಕಾರ, ಅರುಣ ಮಹಾಲಿಂಗಪುರ ಉಪಸ್ಥಿತರಿದ್ದರು.ಜೆ.ಎ.ಬಿರಾದಾರ ನಿರೂಪಿಸಿದರು. ಟಿ.ಎಂ.ಪವಾರ ಸ್ವಾಗತಿಸಿದರು. ಕೆ.ಆರ್.ಖಾನಾಪುರ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಬಿ.ಮನಗೊಂಡ, ಅಮರೇಶ ಸಾಲಕ್ಕಿ, ಬಿ.ಟಿ.ಅಂಗಡಿ, ಎಸ್.ಆರ್.ಭುಯ್ಯಾರ್, ಎಂ.ಟಿ.ದೊಡಮನಿ, ಎಸ್.ಟಿ.ತೇಲಕರ, ಎಸ್.ಎಂ.ನಾಯ್ಕೋಡಿ, ಸಿ.ಟಿ. ಕಂದಗಲ್, ವಿ.ವಿ.ಪಾಟೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.