ಜೆಎಸ್ಎಸ್ ಅಂತರ ಸಂಸ್ಥೆಗಳ ಕ್ರೀಡಾಕೂಟದ ಫಲಿತಾಂಶ

| Published : Dec 10 2024, 12:33 AM IST

ಸಾರಾಂಶ

ವೈಯಕ್ತಿಕ ಪ್ರಶಸ್ತಿ - ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆ

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಸುತ್ತೂರು ಕ್ಷೇತ್ರದಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಸಂಸ್ಮರಣೆಯ ಅಂಗವಾಗಿ ಇತ್ತೀಚೆಗೆ ನಡೆದ ಮೂರು ದಿನಗಳ ಜೆಎಸ್ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ವಿವಿಧ ಶಾಲಾ ಕಾಲೇಜುಗಳು ಮೇಲಾಟಗಳಲ್ಲಿ (ಅಥ್ಲೆಟಿಕ್ಸ್) ವೈಯಕ್ತಿಕ ಮತ್ತು ತಂಡ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗ ವೈಯಕ್ತಿಕ ಪ್ರಶಸ್ತಿ - ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆ, ಸುತ್ತೂರಿನ ವಿದ್ಯಾರ್ಥಿಗಳಾದ ಮೋಹಿತ್ ಕುಮಾರ್ ಮಹಾತೋ 13 ಅಂಕಗಳು ಮತ್ತು ಲೈಸಾರಾಮ್ ಜಿನಾಲಕ್ಷ್ಮಿ 13 ಅಂಕಗಳನ್ನು ಪಡೆದು ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂಡ ಪ್ರಶಸ್ತಿ - ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆ, ಸುತ್ತೂರು ಬಾಲಕರ ವಿಭಾಗದಲ್ಲಿ 47 ಅಂಕಗಳು ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುತ್ತೂರು ಬಾಲಕಿಯರ ವಿಭಾಗದಲ್ಲಿ 44 ಅಂಕಗಳನ್ನು ಪಡೆದು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಪ್ರೌಢಶಾಲಾ ವಿಭಾಗ - ವೈಯಕ್ತಿಕ ಪ್ರಶಸ್ತಿ - ಬಾಲಕರ ವಿಭಾಗದಲ್ಲಿ ಜೆಎಸ್ಎಸ್ ಪಬ್ಲಿಕ್ ಶಾಲೆ, ಜೆ.ಪಿ.ನಗರ ಮೈಸೂರು ಶಾಲೆಯ ವಿದ್ಯಾರ್ಥಿಯಾದ ಸಿ. ಕೈಲಾಶ್ - 15 ಅಂಕಗಳು ಮತ್ತು ಬಾಲಕಿಯರ ವಿಭಾಗದಲ್ಲಿ ಜೆಎಸ್ಎಸ್ ಪ್ರೌಢಶಾಲೆಯ ಆರ್. ನಿಸರ್ಗ - 15 ಅಂಕಗಳನ್ನು ಪಡೆದು ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂಡ ಪ್ರಶಸ್ತಿ : ಜೆಎಸ್ಎಸ್ ಪಬ್ಲಿಕ್ ಶಾಲೆ, ಬಾಗೆ ಬಾಲಕರ ವಿಭಾಗದಲ್ಲಿ 37 ಅಂಕಗಳು ಮತ್ತು ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು ಬಾಲಕಿಯರ ವಿಭಾಗದಲ್ಲಿ 36 ಅಂಕಗಳನ್ನು ಪಡೆದು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಪದವಿಪೂರ್ವ ಕಾಲೇಜು ವಿಭಾಗ : ವೈಯಕ್ತಿಕ ಪ್ರಶಸ್ತಿ : ಬಾಲಕರ ವಿಭಾಗದಲ್ಲಿ ಜೆಎಸ್ಎಸ್ ಪಬ್ಲಿಕ್ ಶಾಲೆ, ಎಚ್ಎಸ್ಆರ್ ಲೇಔಟ್, ಬೆಂಗಳೂರು (ಪ.ಪೂ.ವಿಭಾಗ), ಸಚೇತ್ ಶ್ರೀನಿವಾಸ್- 10 ಅಂಕಗಳು ಮತ್ತು ಬಾಲಕಿಯರ ವಿಭಾಗದಲ್ಲಿ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು, ಚಾಮರಾಜನಗರದ ಎಚ್.ಜಿ. ಮೋನಿಕಾ - 8 ಅಂಕಗಳನ್ನು ಪಡೆದು ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂಡ ಪ್ರಶಸ್ತಿ : ಬಾಲಕರ ವಿಭಾಗದಲ್ಲಿ ಜೆಎಸ್ಎಸ್ ಪದವಿಪೂರ್ವ ಕಾಲೇಜು, ಊಟಿ ರಸ್ತೆ, ಮೈಸೂರು 16 ಅಂಕಗಳು, ಮತ್ತು ಬಾಲಕಿಯರ ವಿಭಾಗದಲ್ಲಿ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು, ಚಾಮರಾಜನಗರ 22 ಅಂಕಗಳನ್ನು ಪಡೆದು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಪದವಿ ಕಾಲೇಜು ವಿಭಾಗ : ವೈಯಕ್ತಿಕ ಪ್ರಶಸ್ತಿ : ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ವಿದ್ಯಾರ್ಥಿಯಾದ ಧ್ರುವ ಬಲ್ಲಾಳ್ 10 ಅಂಕಗಳು ಮತ್ತು ಲಕ್ಷ 10 ಅಂಕಗಳನ್ನು ಪಡೆದು ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಂಡ ಪ್ರಶಸ್ತಿ : ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ಪುರುಷರ ವಿಭಾಗದಲ್ಲಿ 35 ಅಂಕಗಳು ಮತ್ತು ಮಹಿಳೆಯರ ವಿಭಾಗದಲ್ಲಿ ಜೆಎಸ್ಎಸ್ ಮಹಿಳಾ ಕಾಲೇಜು, ಸರಸ್ವತಿಪುರಂ, ಮೈಸೂರು 26 ಅಂಕಗಳನ್ನು ಪಡೆದು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.. ಪಥಚಲನೆ ಮತ್ತು ಪ್ರಮುಖ ಆಟಗಳ ವಿಭಾಗಪಥಚಲನ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜೆಎಸ್ಎಸ್ ಪಬ್ಲಿಕ್ ಶಾಲೆ, ಜೆ.ಪಿ. ನಗರ, ಮೈಸೂರು, ಪ್ರೌಢಶಾಲಾ ವಿಭಾಗದಲ್ಲಿ ಜೆಎಸ್ಎಸ್ ಪ್ರೌಢಶಾಲೆ, ಹೊರೆಯಾಲ, ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು, ಸರಸ್ವತಿಪುರಂ, ಮೈಸೂರು, ಪದವಿ ಕಾಲೇಜು ವಿಭಾಗದಲ್ಲಿ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು, ಈ ಶಾಲಾ-ಕಾಲೇಜುಗಳು ಪ್ರಥಮ ಸ್ಥಾನ ಪಡೆದಿವೆ.ಪ್ರಾಥಮಿಕ ಶಾಲಾ ವಿಭಾಗಗಳ ಕಬಡ್ಡಿಯಲ್ಲಿ ಬಾಲಕರ ವಿಭಾಗದಲ್ಲಿ ಧಾರವಾಡದ ಜೆಎಸ್ಎಸ್ ಪಬ್ಲಿಕ್ ಶಾಲೆ ಮತ್ತು ಬಾಲಕಿಯರ ವಿಭಾಗದಲ್ಲಿ ಸುತ್ತೂರು ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಪಡೆದರೆ ಅರ್ನಾವ್ ಪಿ. ಪಾಟೀಲ್ ಉತ್ತಮ ಆಟಗಾರ ಪ್ರಶಸ್ತಿ, ಹಬಾನ ಎಚ್. ಲಿಂಗ್ಡೋ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.ಪ್ರೌಢಶಾಲಾ ವಿಭಾಗಗಳ ಖೋ-ಖೋದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯು ಪ್ರಥಮ ಸ್ಥಾನ ಪಡೆದು, ಮಹಾಂತೇಶ್ ಉತ್ತಮ ಆಟಗಾರ ಪ್ರಶಸ್ತಿ ಬೋರಮ್ಮ. ಬಿ.ಎನ್. ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗಗಳ ವಾಲಿಬಾಲ್ನಲ್ಲಿ ಸರಗೂರಿನ ಜೆಎಸ್ಎಸ್ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದರೆ, ಸರಗೂರು ಶಾಲೆಯ ಮಹಮ್ಮದ್ ಅಖಿಬ್ ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಥ್ರೋಬಾಲ್ ನಲ್ಲಿ ಜೆಎಸ್ಎಸ್ ಪ್ರೌಢಶಾಲೆ ಸುತ್ತೂರು ಇವರು ಪ್ರಥಮ ಸ್ಥಾನ ಪಡೆದರೆ, ಸುತ್ತೂರು ಶಾಲೆಯ ಪೂರ್ವಿಕ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.ಪದವಿಪೂರ್ವ ಕಾಲೇಜು ವಿಭಾಗಗಳ ಪುರುಷರ ವಾಲಿಬಾಲ್ ಜೆಎಸ್ಎಸ್ ಪದವಿಪೂರ್ವ ಕಾಲೇಜು, ಜೆಎಸ್ಎಸ್ಟಿಐ ಆವರಣ, ಮೈಸೂರು ಪ್ರಥಮ ಸ್ಥಾನ, ಈ ಕಾಲೇಜಿನ ಪ್ರೀತಮ್ ಉತ್ತಮ ಆಟಗಾರ ಪ್ರಶಸ್ತಿ ಮತ್ತು ಬಾಲ್ ಬ್ಯಾಡ್ಮಿಂಟನ್ ನಲ್ಲಿ ಹುಲ್ಲಹಳ್ಳಿಯ ಜೆಎಸ್ಎಸ್ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದಿದೆ.ಎನ್.ಕೆ. ಆದಿತ್ಯ- ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಮಹಿಳೆಯರ ಥ್ರೋಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ನಲ್ಲಿ ಮೈಸೂರು ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರೆ, ಎ.ಎನ್. ಹರ್ಷಿತ ಮತ್ತು ಜೆ. ಪೂಜಾ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ. ಪದವಿ ಕಾಲೇಜು ವಿಭಾಗಗಳ ಪುರುಷರ ವಾಲಿಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ನಲ್ಲಿ ಮೈಸೂರು ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಥಮ ಸ್ಥಾನ ಪಡೆದರೆ, ವಾಲಿಬಾಲ್ ನಲ್ಲಿ ಎಂ.ಪಿ. ಶ್ರೀನಿವಾಸ್, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಎಸ್. ಚಂದನ್ - ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಮಹಿಳೆಯರ ಥ್ರೋಬಾಲ್ನಲ್ಲಿ ಮೈಸೂರಿನ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ಪ್ರಥಮ ಸ್ಥಾನ ಪಡೆದರೆ, ಎಚ್.ಎಂ. ದೀಪ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ. ಬಾಲ್ ಬ್ಯಾಡ್ಮಿಂಟನ್ ನಲ್ಲಿ ಕೊಳ್ಳೇಗಾಲ ಜೆಎಸ್ಎಸ್ ಮಹಿಳಾ ಕಾಲೇಜು ಪ್ರಥಮ ಸ್ಥಾನ ಪಡೆದರೆ ಟಿ.ಎಸ್. ಸಿಂಚನ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.ಕ್ರೀಡಾಕೂಟದ ದಾಖಲೆ - ಈ ವರ್ಷದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗ ಬಾಲಕಿಯರ 4x100 ಮೀ. ರಿಲೇಯಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುತ್ತೂರು, ಪ್ರೌಢಶಾಲಾ ವಿಭಾಗದ ಬಾಲಕರ 800 ಮತ್ತು 1,500 ಮೀ. ಓಟದಲ್ಲಿ ಜೆಎಸ್ಎಸ್ ಪಬ್ಲಿಕ್ ಶಾಲೆ, ಜೆ.ಪಿ. ನಗರದ ವಿದ್ಯಾರ್ಥಿಯಾದ ಸಿ. ಕೈಲಾಶ್ ಮತ್ತು ಪದವಿ ಕಾಲೇಜು ವಿಭಾಗದಲ್ಲಿ 100 ಮತ್ತು 400 ಮೀ. ಓಟದಲ್ಲಿ ಮೈಸೂರಿನ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಯಾದ ಧೃವ ಬಲ್ಲಾಳ್ ಮತ್ತು 4x100 ಮೀ. ಪುರುಷರ ರಿಲೇಯಲ್ಲಿ ಮೈಸೂರಿನ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ದಾಖಲೆ ಮಾಡಿದ್ದಾರೆ ಪ್ರಶಸ್ತಿ ವಿಜೇತ ಕ್ರೀಡಾಪಟುಗಳನ್ನು ಜೆಎಸ್ಎಸ್ ಮಹಾವಿದ್ಯಾಪೀಠದ ಎಲ್ಲ ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳು, ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.