ಸಾರಾಂಶ
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಬಳ್ಳಾರಿಯ ಗ್ರಾಹಕರಿಗಾಗಿ ಹೋಟೆಲ್ ಪೋಲಾ ಪ್ಯಾರಡೈಸ್‌ನಲ್ಲಿ ಮಾ. 2ರಿಂದ 4ರ ವರೆಗೆ ಮೂರು ದಿನಗಳ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ.
ಬಳ್ಳಾರಿ: ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಬಳ್ಳಾರಿಯ ಗ್ರಾಹಕರಿಗಾಗಿ ಹೋಟೆಲ್ ಪೋಲಾ ಪ್ಯಾರಡೈಸ್‌ನಲ್ಲಿ ಮಾ. 2ರಿಂದ 4ರ ವರೆಗೆ ಮೂರು ದಿನಗಳ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದ್ದು, ಮೇಯರ್ ಬಿ. ಶ್ವೇತಾ ಅವರು ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳ ಸಂಗ್ರಹ ವಿಶಿಷ್ಟ ಶ್ರೇಣಿಯೊಂದಿಗೆ, ಶುದ್ಧ ಚಿನ್ನ ಮತ್ತು ರತ್ನಗಳು ಮತ್ತು ಅತ್ಯುತ್ತಮವಾದ ಕರಕುಶಲ ಆಭರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್, ನಮ್ಮ ಹೊಸ ಶ್ರೇಣಿಯ ಸಂಗ್ರಹದೊಂದಿಗೆ ವ್ಯಕ್ತಿತ್ವಕ್ಕೆ ಸರಿ ಹೊಂದುವ ಅಪರೂಪದ ಆಭರಣಗಳನ್ನು ಪ್ರಸ್ತುತಪಡಿಸುತ್ತಿದೆ. ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠವಾಗಿದ್ದು ಕಲ್ಪನೆ, ಸೃಜನಶೀಲತೆಯೊಂದಿಗೆ ಸಂಪೂರ್ಣ ಶ್ರೇಣಿಯ ಆಭರಣ ಸಂಗ್ರಹಗಳಾಗಿವೆ ಎಂದು ತಿಳಿಸಿದರು.ಪ್ರದರ್ಶನ ಮೇಳದ ಮುಖ್ಯಸ್ಥ ಶ್ರೀಹರಿ ಪ್ರಸಾದ್ ಮಾತನಾಡಿ, ಬಳ್ಳಾರಿ ಗ್ರಾಹಕರೊಂದಿಗೆ ಆಡಂಬರ ಮತ್ತು ವಿಜೃಂಭಣೆಯಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಚರಿಸಲು ಸಿ. ಕೃಷ್ಣಯ್ಯ ಚೆಟ್ಟಿ ವಿಶೇಷವಾದ ಕೊಡುಗೆ ನೀಡುತ್ತಿದೆ. ನೀವು ಬೆಳ್ಳಿಯ ಮೇಲೆ ಶೇ. 2, ಚಿನ್ನದ ಮೇಲೆ ಶೇ. 4 ರಿಯಾಯಿತಿ, ಡೈಮಂಡ್ ಮೇಲೆ ಶೇ.6 ಮತ್ತು ₹18.69 ಲಕ್ಷ ಮೌಲ್ಯದ ವಜ್ರದ ಮೇಲೆ ಶೇ.6 ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದರು. ಕೆ. ತೇಜಸ್ ಕಾರ್ಲಾ , ಪೋಲಾ ಪ್ಯಾರಡೈಸ್ ಹೋಟೆಲ್‌ನ ಮಾಲೀಕ ಪ್ರವೀಣ್ ಪೋಲಾ ಮತ್ತಿತರರಿದ್ದರು.