ನೇಪಾಳಕ್ಕೆ ಹೊರಟ ಮಲೆನಾಡಿನ ಥ್ರೋಬಾಲ್ ಆಟಗಾರರ ತಂಡ
KannadaprabhaNewsNetwork | Published : Oct 28 2023, 01:15 AM IST
ನೇಪಾಳಕ್ಕೆ ಹೊರಟ ಮಲೆನಾಡಿನ ಥ್ರೋಬಾಲ್ ಆಟಗಾರರ ತಂಡ
ಸಾರಾಂಶ
ನೇಪಾಳಕ್ಕೆ ಹೊರಟ ಮಲೆನಾಡಿನ ಥ್ರೋಬಾಲ್ ಆಟಗಾರರ ತಂಡ
ಈ ಎರಡು ತಂಡದಲ್ಲಿ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ 16 ವಿದ್ಯಾರ್ಥಿಗಳು ಭಾಗಿ ಕನ್ನಡಪ್ರಭ ವಾರ್ತೆ, ಕೊಪ್ಪ ಬಾಲ್ ಪಂದ್ಯದ 19 ವರ್ಷ ಒಳಗಿನ ಹುಡುಗ-ಹುಡುಗಿಯರ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನೇಪಾಳದ ಪೋಕ್ರಾದ ಆರ್ಮಿ ಕ್ಯಾಂಪಸ್‌ನಲ್ಲಿ ಅ.28,29, 30ರಂದು ನಡೆಯಲಿದ್ದು, ಇಂಡಿಯನ್ ಕ್ಯಾಂಪಸ್ ಆಫ್ ಸೋಶಿಯಲ್ ಅಂಡ್ ಎಜುಕೇಶನ್ (ರಿ.) (ICSC) ವತಿಯಿಂದ ಭಾರತದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಎರಡು ತಂಡದಲ್ಲಿ 16 ವಿದ್ಯಾರ್ಥಿಗಳು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯವರು ಆಡುತ್ತಿರುವುದು ವಿಶೇಷ. ಇವರೊಂದಿಗೆ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಉತ್ತರ ಪ್ರದೇಶದ ಮೂವರು, ಮಹಾರಾಷ್ಟ್ರದ ಇಬ್ಬರು, ಅಸ್ಸಾಂನ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಈ ತಂಡದ ಜೊತೆಗೆ ಥ್ರೋಬಾಲ್ ಇಂಡಿಯನ್ ಕೋಚ್ ಗುರುಮೂರ್ತಿ, ತಂಡದ ಮ್ಯಾನೇಜರ್ ಚೇತನ್, ಪತ್ರಕರ್ತ ಸಂಘದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಚಿತ್ತೋರಿಯಾ, ನ್ಯೂಸ್ ನೆಕ್ಸ್ಟ್ ಯುಪಿ ಯ ಕಾರ್ಯದರ್ಶಿ ಪಂಕಜ್ ಇದ್ದಾರೆ. ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳಿರುವ ಈ ತಂಡ ಜಯಗಳಿಸಿ, ಭಾರತ ತಂಡಕ್ಕೆ ಗೆಲುವು ತಂದು ಕೊಡಲಿ ಎಂದು ಮಲೆನಾಡಿನ ಅನೇಕ ದೇವಸ್ಥಾನಗಳಲ್ಲಿ ಕ್ರೀಡಾಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ನೇಪಾಳದಲ್ಲಿ ನಡೆಯುವ ಥ್ರೋಬಾಲ್ ಕ್ರೀಡೆಯಲ್ಲಿ 16 ವಿದ್ಯಾರ್ಥಿಗಳು ಮಲೆನಾಡಿನವರಾಗಿದ್ದು ಇವರು ಈ ಭಾಗದ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ. ಥ್ರೋಬಾಲ್ ಪಂದ್ಯದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಗೆಲುವು ಸಾಧಿಸಿ ಮಲೆನಾಡಿಗೆ ಹಾಗೂ ನಮ್ಮ ದೇಶಕ್ಕೆ ಹೆಮ್ಮೆ ತರಲಿ ಎಂದು ಸ್ಪಂದನ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನ ಕುಮಾರ್ ಕಿಬ್ಳಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಆಟಗಾರರು ಬೀರೂರುನಿಂದ ಬೆಂಗಳೂರು, ಗೋರಕ್ ಪುರ್ ಮಾರ್ಗವಾಗಿ ನೇಪಾಳದ ಗಡಿ ಸೊನಾಲಿಯವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದು, ನಂತರ ನೇಪಾಳದ ಪೋಕ್ರ ಆರ್ಮಿ ಕ್ಯಾಂಪಸ್ ಅವರಿಗೆ ಬಸ್ಸಿನಲ್ಲಿ ಪ್ರಯಾಣಿಸಿ ದ್ದಾರೆ. ಬೆಂಗಳೂರು, ಉತ್ತರಪ್ರದೇಶ, ಮಹಾರಾಷ್ಟ್ರ, ಅಸ್ಸಾಂನ ವಿದ್ಯಾರ್ಥಿಗಳು ಪ್ರಯಾಣದ ಮಧ್ಯದಲ್ಲಿ ಇವರೊಂದಿಗೆ ಸೇರಿಕೊಂಡಿದ್ದಾರೆ. --ಕೋಟ--- ಥ್ರೋಬಾಲ್ ಪಂದ್ಯಾವಳಿಗಳಿಗೆ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ವರ್ಷಗಳಿಂದ ವಿದ್ಯಾರ್ಥಿ ಗಳನ್ನು ತಯಾರು ಮಾಡಿ ಪಂದ್ಯಾವಳಿಗೆ ಕರೆದುಕೊಂಡು ಹೋಗುತ್ತಿದ್ದು, ಹೆಚ್ಚಿನ ಪಂದ್ಯಗಳಲ್ಲಿ ಒಂದಲ್ಲ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡು ಬರುತ್ತಿದ್ದಾರೆ. ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಭವಿಷ್ಯದಲ್ಲಿ ಅನೇಕ ರೀತಿಯಲ್ಲಿ ಅನುಕೂಲವಾಗಿದೆ. - ಗುರುಮೂರ್ತಿ, ಥ್ರೋಬಾಲ್ ಇಂಡಿಯನ್ ಕೋಚ್. --- ಬಾಲ್ಯದಿಂದಲೇ ಹೊರಾಂಗಣ ಆಟೋಟದಲ್ಲಿ ಆಸಕ್ತಿ ಇದ್ದು, ಶಾಲಾ ದಿನಗಳಲ್ಲಿ ಅನೇಕ ಆಟೊಟದಲ್ಲಿ ಭಾಗವಹಿಸುತ್ತಿದ್ದೆ. ಕಳೆದ ಬಾರಿ ರಾಷ್ಟ್ರೀಯ ಮಟ್ಟದ ಥ್ರೋಬಾಲ್ ನಲ್ಲಿ ಭಾಗವಹಿಸಿದ್ದು, ಪ್ರಸ್ತುತ ನೇಪಾಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಆಟಕ್ಕೆ ಅವಕಾಶ ಸಿಕ್ಕಿದೆ. ಇದಕ್ಕೆ ಹೆಚ್ಚಿನ ಶ್ರಮ ಹಾಕಿ ಗೆಲ್ಲುವ ಪ್ರಯತ್ನದಲ್ಲಿ ಇದ್ದೇವೆ. -ಅಪರ್ಣ ಸಿ ಡಿ, ಥ್ರೋಬಾಲ್ ಆಟಗಾರ್ತಿ. (ಕೊಪ್ಪ ತಾಲೂಕು, ಮೇಗುಂದಾ ಹೋಬಳಿ, ಹೇರೂರು ಗ್ರಾಪಂನ ಚಂದ್ರಗಿರಿ ದಿನೇಶ್,ಅನುಪಮಾ ಮಗಳು)