ಸಾರಾಂಶ
ಐಕಳ ಕಂಬಳದಲ್ಲಿ ಒಟ್ಟು 177 ಜೊತೆ ಕೋಣಗಳು ಭಾಗವಹಿಸಿತ್ತು. ಅದರಲ್ಲಿ ಕನೆ ಹಲಗೆ: 11 ಜೊತೆ, ಅಡ್ಡಹಲಗೆ: 6 ಜೊತೆ, ಹಗ್ಗ ಹಿರಿಯ: 18 ಜೊತೆ, ನೇಗಿಲು ಹಿರಿಯ: 28 ಜೊತೆ, ಹಗ್ಗ ಕಿರಿಯ: 29 ಜೊತೆ, ನೇಗಿಲು ಕಿರಿಯ: 85 ಜೊತೆ ಕೋಣಗಳು ಭಾಗವಹಿಸಿತ್ತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಐಕಳ ಕಂಬಳದಲ್ಲಿ ಒಟ್ಟು 177 ಜೊತೆ ಕೋಣಗಳು ಭಾಗವಹಿಸಿತ್ತು. ಅದರಲ್ಲಿ ಕನೆ ಹಲಗೆ: 11 ಜೊತೆ, ಅಡ್ಡಹಲಗೆ: 6 ಜೊತೆ, ಹಗ್ಗ ಹಿರಿಯ: 18 ಜೊತೆ, ನೇಗಿಲು ಹಿರಿಯ: 28 ಜೊತೆ, ಹಗ್ಗ ಕಿರಿಯ: 29 ಜೊತೆ, ನೇಗಿಲು ಕಿರಿಯ: 85 ಜೊತೆ ಕೋಣಗಳು ಭಾಗವಹಿಸಿತ್ತು.ಕನೆ ಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸುವುದು) ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ, ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ.
ಅಡ್ಡ ಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ. ಪೂಜಾರಿ ‘ಬಿ’ (11.68), ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ. ದ್ವಿತೀಯ: ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ಕುಮಾರ್ ರೈ ಬೋಳ್ಯಾರು (12.47), ಹಲಗೆ ಮುಟ್ಟಿದವರು: ಭಟ್ಕಳ ಪಾಂಡು.ಹಗ್ಗ ಹಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ ‘ಬಿ’ (11.41), ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ (11.88), ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ಹಗ್ಗ ಕಿರಿಯ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ‘ಬಿ’ (11.52), ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ, ದ್ವಿತೀಯ: 80 ಬಡಗ ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (11.71), ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.ನೇಗಿಲು ಹಿರಿಯ: ಪ್ರಥಮ: ಬೆಳ್ಳಿಪ್ಪಾಡಿ ಕೈಪ ಭರತ್ ಕೇಶವ ಮಂಕು ಭಂಡಾರಿ (11.45), ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.66), ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ನೇಗಿಲು ಕಿರಿಯ: ಪ್ರಥಮ: ಮುನಿಯಾಲು ಉದಯ ಕುಮಾರ್ ಶೆಟ್ಟಿ ‘ಎ’ (11.95), ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್, ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶೆಟ್ಟಿ (12.38), ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.