ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗಂಡನನ್ನು ಬಿಟ್ಟು ಗುಂಡನ ಹಿಂದೆ ಹೋದವಳ ಕಥೆಯಲ್ಲಿ ಈಗ ಕೊರಟಗೆರೆ ಪೊಲೀಸರ ತನಿಖೆಯಿಂದ ಬೀಗ್‌ಟ್ವಿಸ್ಟ್ ಸಿಕ್ಕಿದೆ. ೩ ಜನ ಆರೋಪಿಗಳ ಮೇಲೆ ಪ್ರಥಮವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಮತ್ತೇ ತನಿಖೆ ಚುರುಕು ಮಾಡಿದಾಗ ಬರೋಬ್ಬರಿ ೬ ಜನ ಆರೋಪಿಗಳು ಪೊಲೀಸರ ಅತಿಥಿಗಳಾಗಿ ಜೈಲೂಟ ಮಾಡಲು ಸಿದ್ದರಾಗಿದ್ದಾರೆ.ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ ಸಿದ್ದರಬೆಟ್ಟದ ಮಾರ್ಗದ ಕೆಪಿಟಿಸಿಎಲ್ ಘಟಕದ ಬಳಿ ಜು.೨೮ರ ಭಾನುವಾರ ರಾತ್ರಿ ೮ಗಂಟೆಯ ವೇಳೆಯಲ್ಲಿ ಪ್ರಕಾಶ ಎಂಬಾತನ ಹತ್ಯೆಯಾಗಿತ್ತು. ಘಟನೆಗೆ ಸಂಬಂಧ ತನಿಖೆ ಚುರುಕುಗೊಳಿಸಿದ ಕೊರಟಗೆರೆ ಪೊಲೀಸರಿಗೆ ಹೆಂಡತಿಯ ಪಾತ್ರದ ಜೊತೆ ಹಳೇ ಪ್ರೇಮಿಯ ಕೈವಾಡ ಸೇರಿ ೬ಜನ ಆರೋಪಿಗಳ ಕೈವಾಡ ಇರುವುದು ಪತ್ತೆಯಾಗಿದೆ. ಅಂಚೆಕಚೇರಿಯ ಸಿಬ್ಬಂದಿಯಾಗಿದ್ದ ಮೃತ ಪ್ರಕಾಶದ ಕೊಲೆಯ ಪ್ರಕರಣದಲ್ಲಿ ಬೆಂಗಳೂರಿನ ಗೋವಿಂದರಾಜು(೩೬), ಮಲ್ಲೇಕಾವಿನ ಹರ್ಷಿತಾ(೨೮), ಸೋಮಶೇಖರ್(೨೭), ಮಹೇಶ್(೩೨), ಕಂಬದಹಳ್ಳಿಯ ದರ್ಶನ್(೨೪), ಬಾಗೂರು ರಂಗಸ್ವಾಮಿ ಎಂಬ ೬ಜನ ಆರೋಪಿಗಳಾಗಿದ್ದು ತನಿಖೆ ಇನ್ನಷ್ಟು ಚುರುಕುಗೊಂಡಿದೆ.ಅನಾಥವಾದ ೨ವರ್ಷದ ಗಂಡುಮಗುಗುಲ್ಬರ್ಗಾ ಜಿಲ್ಲೆಯ ಚಿಂಚಲಿ ಗ್ರಾಮದ ಮೃತ ಪ್ರಕಾಶ(೩೨)ನಿಗೆ ಇದೇ ಇನ್ಸ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಮಲ್ಲೇಕಾವಿನ ಆರೋಪಿ ಹರ್ಷಿತಾ ಜೊತೆ ಮದುವೆಯಾಗಿ ೩ವರ್ಷವಾಗಿ ೨ವರ್ಷದ ಗಂಡು ಮಗುವಿದೆ.ಆದರೆ ಈ ನಡುವೆ ಗೋವಿಂದರಾಜ್ ಎಂಬುವವನ ಜೊತೆಗೆ ಪ್ರೇಮಾಂಕುರವಾಗಿ ೩ತಿಂಗಳ ಹಿಂದೆಯಷ್ಟೇ ಹರ್ಷಿತಾ ಗೋವಿಂದರಾಜು ಅಲಿಯಾಸ್ ಗುಂಡನ ಜೊತೆ ಮನೆ,ಗಂಡ ಮತ್ತು ಮಗು ಬಿಟ್ಟು ಹೋಗಿದ್ದಳು. ಗಂಡನ ದೂರಿನ ಬಳಿಕ ಪೊಲೀಸರ ಮೂಲಕ ರಾಜಿಸಂಧಾನ ಆಗಿತ್ತು. ನಂತರ ಗಂಡನ ಮನೆಗೆ ಬಂದಿದ್ದ ಹರ್ಷಿತಾ ಪ್ರೇಮಿಯ ಜೊತೆಗಿರಲು ಗಂಡ ಬಿಡುತ್ತಿಲ್ಲ ಎಂದು ಹೇಳಿ ಗಂಡನ ಪ್ರಾಣವನ್ನೇ ತೆಗೆಯುವ ನಿರ್ಧಾರಕ್ಕೆ ಬಂದು ಸುಪಾರಿ ನೀಡದ್ದಳು. ಅದರಂತೆ ಎಲ್ಲರೂ ಸೇರಿ ಪ್ರಕಾಶ್ ಹತ್ಯೆ ಮಾಡಿದ್ದಾರೆ. ಆದರೆ ಈಗ ಹರ್ಷಿತ ಜೈಲುಪಾಲಾಗಿದ್ದು ೨ವರ್ಷದ ಗಂಡುಮಗು ಅನಾಥವಾಗಿದೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಪಿಎಸೈಗಳಾದ ಚೇತನಗೌಡ, ಯೊಗೀಶ್, ಎಎಸೈ ಮಂಜುನಾಥ ೬ಜನ ಆರೋಪಿಗಳನ್ನು ಕೊಲೆಯಾದ ೨೪ಗಂಟೆಯೊಳಗೆ ಅರೆಸ್ಟ್ ಮಾಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))