ಪ್ರವಾಸ ಪ್ರವಾಸಿಗನ ಸ್ವನಾಭವದ ಒಂದು ದಾಖಲೆ: ಲೇಖಕಿ ಶೈಲಜಾ ಹಾಸನ್‌

| Published : Dec 25 2024, 12:50 AM IST

ಪ್ರವಾಸ ಪ್ರವಾಸಿಗನ ಸ್ವನಾಭವದ ಒಂದು ದಾಖಲೆ: ಲೇಖಕಿ ಶೈಲಜಾ ಹಾಸನ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಸ ಕಥನ ಪ್ರವಾಸಿಗನ ‌ಸ್ವಾನುಭವದ ಒಂದು ದಾಖಲೀಕರಣವಾಗಿದೆ ಎಂದು ಲೇಖಕಿ ಶೈಲಜಾ ಹಾಸನ್‌ ಹೇಳಿದರು. ಹಾಸನದಲ್ಲಿ ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ‘ತಿಂಗಳ ತಿರುಳು’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತಿಂಗಳ ತಿರುಳು । ಪ್ರವಾಸ ಕಥನ ಮಂಡನೆ । ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ಕಾರ್ಯಕ್ರಮ । ಲೇಖಕಿಯರ ಬಳಗ ಆಯೋಜನೆ

ಕನ್ನಡಪ್ರಭ ವಾರ್ತೆ ಹಾಸನ

ಪ್ರವಾಸ ಕಥನ ಪ್ರವಾಸಿಗನ ‌ಸ್ವಾನುಭವದ ಒಂದು ದಾಖಲೀಕರಣವಾಗಿದೆ ಎಂದು ಲೇಖಕಿ ಶೈಲಜಾ ಹಾಸನ್‌ ಹೇಳಿದರು.

ಜಿಲ್ಲಾ ಲೇಖಕಿಯರ ಬಳಗದಿಂದ ಕೆಂಪು ಚಲುವಾಜಮ್ಮಣ್ಣಿ ಮಹಿಳಾ ಸಮಾಜದಲ್ಲಿ ನಡೆದ ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ‘ತಿಂಗಳ ತಿರುಳು’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರವಾಸ ಕಥನ ಕೂಡ ಒಂದು ಪ್ರಕಾರವಾಗಿದ್ದು ದೇಶ ಸುತ್ತು ಇಲ್ಲ ಕೋಶ ಓದು ಎಂಬ ನಾಣ್ಣುಡಿಯಂತೆ ದೇಶ ಸುತ್ತುವುದು ಸುತ್ತುವಿಕೆಗಷ್ಡೇ ಸೀಮಿತವಾಗದೆ ದೇಶ ಸುತ್ತಿದ ಅನುಭವ ಸಾರವನ್ನು ದಾಖಲಿಸುವ ಒಂದು ಬರಹ. ಕೆಲವರಿಗೆ ಪ್ರವಾಸ ಹಣದ ಹಾಗೂ ಸಮಯದ ವ್ಯಯವೆನಿಸಿದರೆ ಪ್ರವಾಸ ಹಲವರ ಬಯಕೆ, ಅಭಿಲಾಷೆ, ಹವ್ಯಾಸ. ಹಾಗೆಯೇ ಅದನ್ನು ದಾಖಲೀಕರಿಸಿ ತಾವು ಕಂಡ ಪಯಣಿಸಿದ ಪ್ರೇಕ್ಷಣೀಯ ಸ್ಥಳಗಳ ಪರಿಚಯವನ್ನು ಓದುಗನಿಗೆ ಒದಗಿಸುವ ಹಾಗೂ ಓದುಗನ ಕಣ್ಮುಂದೆ ತರುವಂತಹದ್ದೇ ಪ್ರವಾಸ ಕಥನ. ಪ್ರವಾಸದ ಕುರಿತು ನೆಹರೂರವರು ‘ಪ್ರವಾಸ ಮಾಡಿ ಇಲ್ಲವೆ ಪ್ರವಾಸ ಕಥನವನ್ನು ಓದಿ’ ಎಂದು ಹೇಳಿದ ಮಾತನ್ನು ಉಲ್ಲೇಖಿಸಿದರು.

ಇತ್ತೀಚೆಗೆ ತಾವು ಕೈಗೊಂಡ ವಿದೇಶ ಪ್ರವಾಸದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ತಾವು ಬಾಲ್ಯದಿಂದಲೂ ಪ್ರವಾಸಪ್ರಿಯರು ಕಾಲೇಜು ದಿನಗಳಲ್ಲಿ, ವಿವಾಹ ನಂತರ ಸಮಾನ ಮನಸ್ಕರಾದ ಪತಿಯೊಂದಿಗೆ ಪ್ರತೀ ವರ್ಷ ಬೇಸಿಗೆ ದಸರಾ ರಜೆಯಲ್ಲಿ ಇಡೀ ದೇಶವನ್ನು ನೋಡಿದ್ದು, ಇತ್ತೀಚೆಗೆ ವಿದೇಶ ಪ್ರವಾಸದ ಬಯಕೆಯನ್ನು ಮೊದಲ ಬಾರಿಗೆ ಸಿಂಗಪೂರ್, ಮಲೇಷಿಯಾ ದೇಶಗಳಿಗೆ ಪಯಣಿಸುವುದರ ಮೂಲಕ ಈಡೇರಿಸಿಕೊಂಡಿರುವುದಾಗಿ ತಿಳಿಸುತ್ತಾ, ಸಿಂಗಪೂರ್, ಮಲೇಷಿಯಾದ ಹತ್ತು ದಿನದ ಪ್ರವಾಸದಲ್ಲಿ ಅಲ್ಲಿನ ಭಾಷೆ, ಊಟ, ಸಂಸ್ಕ್ರತಿ, ಉಡುಗೆ ತೊಡುಗೆ ಹವಾಮಾನ ಆಡಳಿತ ವ್ಯವಸ್ಥೆ, ರಾಜಕೀಯ, ಮಹಿಳೆಯರಿಗಿರುವ ರಕ್ಷಣೆ ಹಾಗೂ ಪ್ರವಾಸಿಗರಿಗೆ ಅಲ್ಲಿನವರು ಸಹಕರಿಸುವ ಪರಿ ಎಲ್ಲವನ್ನೂ ಸವಿಸ್ತಾರವಾಗಿ ಅರುಹಿದರು.

ಅದರೊಂದಿಗೆ ಆ ದೇಶಗಳ ಸ್ವಚ್ಛತೆಯ ಕುರಿತು ಕೂಡ ಬಹಳಷ್ಟು ಶ್ಲಾಘಿಸಿದರು. ತಮ್ಮೊಂದಿಗೆ ಪ್ರವಾಸ ಮಾಎಇದ ಹಲವಾರು ಸಹ ಪಯಣಿಗರು ತಮ್ಮ ಮಕ್ಕಳು ತಮ್ಮನ್ನು ಪ್ರವಾಸಕ್ಕೆ ಕಳುಹಿಸಿರುವುದಾಗಿ ಹೇಳಿದಾಗ, ಕುಟುಂಬದ ಬಾಂಧವ್ಯ ಹೆತ್ತವರ ಮೇಲಿನ ಪ್ರೀತಿ, ವಿಶ್ವಾಸಗಳು ಎಲ್ಲೋ ಕಳೆದು ಹೋಗುತ್ತಿವೆ ಎನ್ನುವಂತಹ ಈ ಸಂದರ್ಭದಲ್ಲಿ, ಹೆತ್ತವರ ಮೇಲಿನ ಪ್ರೀತಿ ಕುಟುಂಬದ ಬಾಂಧವ್ಯ, ಬದ್ಧತೆ ಇನ್ನೂ ಉಳಿದಿದೆ ಎಂದು ಸಂತಸವಾಯಿತು ಎಂದರು.

ಹಲವರಿಗೆ ಪ್ರವಾಸ ಪ್ರಯಾಸವೆನಿಸಬಹುದು ಅಂಥವರು ಪ್ರವಾಸ ಕಥನಗಳನ್ನು ಓದಿದರೆ ಪ್ರವಾಸ ಮಾಡಿದಷ್ಟೇ ಆನಂದ ಅನುಭವ ದೊರೆಯಬಹುದು ಎಂದರು. ಶಿವರಾಮ ಕಾರಂತರು, ವಿ.ಕೃ ಗೋಕಾಕರು, ಹಾಗೂ ನೇಮಿವಂದ್ರ ರವರ ಪ್ರವಾಸ ಕಥನಗಳು ಬಹಳಷ್ಟು ಓದುಗರನ್ನು ತಲುಪಿದ್ದು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಪ್ರವಾಸ ಕಥನಗಳನ್ನು ಬರೆಯುತ್ತಿದ್ದು, ನಮ್ಮ ಹಾಸನ ಜಿಲ್ಲೆಯ ಸಾಹಿತಿ ಹೇಮಾಕ್ಷಮ್ಮ ಅವರು ಉತ್ತಮ ಪ್ರವಾಸ ಕಥನವನ್ನು ಬರೆದಿರುವುದನ್ನು ಸ್ಮರಿಸಿದರು.

ಅಧ್ಯಕ್ಷರಾದ ರಾಜೇಶ್ವರಿ ಹುಲ್ಲೇನಹಳ್ಳಿ, ಕಾರ್ಯದರ್ಶಿ ಸುಮಾ ಪ್ರಾರ್ಥಸಿದರು, ಗಿರಿಜಾಂಬ ಸ್ವಾಗತಿಸಿದರೆ ಭಾರತಿ ವಂದಿಸಿದರು. ಗಿರಿಜಾ ನಿರ್ವಾಣಿ ಕಾರ್ಯಕ್ರಮ ನಿರೂಪಿಸಿದರು. ಬಳಗದ ಸದಸ್ಯೆಯರು ಇದ್ದರು.