ಸಾರಾಂಶ
ರಿಪ್ಪನ್ ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ನಾಗರತ್ನ ಎಂಬುವರ ಮನೆಯ ಮೇಲೆ ಮಧ್ಯಾಹ್ನ ಭಾರಿ ಮಳೆಗಾಳಿಗೆ ತೆಂಗಿನಮರವೊಂದು ಬಿದ್ದು ಆಪಾರ ಹಾನಿ ಸಂಭವಿಸಿದ್ದು ಸ್ಥಳಕ್ಕೆ ಶಾಸಕ ಆರಗಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಿಪ್ಪನ್ ಪೇಟೆ
ಮಂಗಳವಾರ ಮಧ್ಯಾಹ್ನ ಭಾರಿ ಮಳೆಗಾಳಿಗೆ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಮನೆಯೊಂದರ ಮೇಲೆ ತೆಂಗಿನಮರವೊಂದು ಬಿದ್ದು ಆಪಾರ ಹಾನಿ ಸಂಭವಿಸಿದ್ದು, ಸ್ಥಳಕ್ಕೆ ಶಾಸಕ ಆರಗಜ್ಞಾನೇಂದ್ರ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣವೇ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ವಾಸದ ಮನೆಯ ಬಳಿಯಲ್ಲಿದ್ದ ತೆಂಗಿನಮರವೊಂದು ಗಾಳಿ ಮಳೆಗೆ ಮನೆಯ ಮೇಲೆ ಬಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸರ್ಕಾರ ಕೂಡಲೇ ಹಾನಿಗೀಡಾಗಿರುವ ರೈತ ಕುಟುಂಬಕ್ಕೆ ತುರ್ತು ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ಕೋಡೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಕರಿಗೆರಸು ಶಂಕರಪ್ಪ,ಪುಟ್ಟಪ್ಪ,ರಮೇಶ್ ಭಟ್,ಇನ್ನಿತರರು ಹಾಜರಿದ್ದರು.