ಕನ್ನಡಪ್ರಭ ವಾರ್ತೆ ಕಾರವಾರ
ಕೈಗಾ ಅಣುಸ್ಥಾವರದ ವಿಸ್ತರಿತ 5 ಮತ್ತು 6ನೇ ಘಟಕಗಳಿಗಾಗಿ ಗುಜರಾತ್‌ನಿಂದ ಸಾಗಿಸಲಾಗುತ್ತಿದ್ದ ಬೃಹತ್ ಯಂತ್ರೋಪಕರಣದ ವಾಹನವೊಂದು ಗುರಿ ತಲುಪುವ ಕೆಲವೇ ಕಿಮೀಗಳ ದೂರದಲ್ಲೇ ಪಲ್ಟಿಯಾದ ಘಟನೆ ತಾಲ್ಲೂಕಿನ ಹರ್ಟುಗಾ ಗ್ರಾಮದ ಬಳಿ ನಡೆದಿದೆ. ಭಾರಿ ಗಾತ್ರದ ಯಂತ್ರದ ಭಾಗವು ರಸ್ತೆಯಂಚಿಗೆ ಉರುಳಿ ಬಿದ್ದ ಪರಿಣಾಮ ಮಲ್ಲಾಪುರ-ಕೈಗಾ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಮಲ್ಲಾಪುರದಿಂದ ಕೈಗಾಕ್ಕೆ ಸಂಪರ್ಕಿಸುವ ಮಾರ್ಗದ ಹರ್ಟುಗಾ ಗ್ರಾಮದ ಬಳಿಯ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ವಾಹನವು ಹೊತ್ತಿದ್ದ ಯಂತ್ರವು ಅತ್ಯಂತ ಭಾರಿ ತೂಕ ಮತ್ತು ಗಾತ್ರದ್ದಾಗಿದ್ದರಿಂದ, ತಿರುವಿನಲ್ಲಿ ಚಲಿಸುವಾಗ ಏಕಾಏಕಿ ಒಂದು ಬದಿಗೆ ವಾಲಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನವು ಯಂತ್ರದ ಸಮೇತ ರಸ್ತೆಯ ಪಕ್ಕಕ್ಕೆ ಅಡ್ಡಲಾಗಿ ಬಿದ್ದಿದೆ. ಕೈಗಾ ಯೋಜನಾ ಪ್ರದೇಶ ತಲುಪಲು ಕೇವಲ 3 ರಿಂದ 4 ಕಿಮೀ ದೂರವಿರುವಾಗಲೇ ಈ ದುರ್ಘಟನೆ ನಡೆದಿದೆ.ಈ ಬೃಹತ್ ಯಂತ್ರದ ಭಾಗವು ಕಳೆದ ಫೆಬ್ರುವರಿ ತಿಂಗಳಿನಲ್ಲಿ ಗುಜರಾತ್‌ನಿಂದ ತನ್ನ ಪ್ರಯಾಣ ಆರಂಭಿಸಿತ್ತು. ಏ. 15ರಂದು ಕಾರವಾರವನ್ನು ಪ್ರವೇಶಿಸಿದ್ದ ಈ ವಾಹನ, ಯಂತ್ರದ ಗಾತ್ರದ ಹಿನ್ನೆಲೆ ಅತೀ ನಿಧಾನವಾಗಿ ಚಲಿಸುತ್ತಿತ್ತು. ಕಳೆದ 20 ದಿನಗಳಿಂದ ಕಾರವಾರದಿಂದ ಕೈಗಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ವಾಹನ, ಕೊನೆಗೂ ನಿಗದಿತ ಸ್ಥಳ ತಲುಪುವ ಮುನ್ನವೇ ಅಪಘಾತಕ್ಕೀಡಾಗಿದೆ.ಭಾರಿ ವಾಹನವು ರಸ್ತೆಯ ಮೇಲೆ ಅಡ್ಡಲಾಗಿ ಬಿದ್ದಿರುವುದರಿಂದ ಈ ಮಾರ್ಗದ ವಾಹನ ಸಂಚಾರಕ್ಕೆ ಭಾರಿ ಅಡಚಣೆಯುಂಟಾಗಿದೆ. ಕೈಗಾಕ್ಕೆ ತೆರಳುವ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಸ್ಥಳಕ್ಕೆ ಕೈಗಾ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದು, ಬೃಹತ್ ಕ್ರೇನ್‌ಗಳ ಸಹಾಯದಿಂದ ಯಂತ್ರವನ್ನು ಮೇಲೆತ್ತಲು ಮತ್ತು ರಸ್ತೆ ತೆರವುಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಯಂತ್ರೋಪಕರಣಕ್ಕೆ ಆಗಿರುವ ಹಾನಿಯ ಬಗ್ಗೆ ತಾಂತ್ರಿಕ ತಜ್ಞರ ತಂಡದಿಂದ ಪರಿಶೀಲನೆ ನಡೆಯಬೇಕಿದೆ.ಹೋಗಿದೆ.... ಕೈಗಾ ತಲುಪುವ 3 ಕಿಮೀ ಮುನ್ನವೇ ಯಂತ್ರ ಹೊತ್ತಿದ್ದ ವಾಹನ ಪಲ್ಟಿ, ಸಂಚಾರ ಅಸ್ತವ್ಯಸ್ತ
ಕೈಗಾ ಅಣುಸ್ಥಾವರದ ವಿಸ್ತರಿತ 5 ಮತ್ತು 6ನೇ ಘಟಕಗಳಿಗಾಗಿ ಗುಜರಾತ್‌ನಿಂದ ಸಾಗಿಸಲಾಗುತ್ತಿದ್ದ ಬೃಹತ್ ಯಂತ್ರೋಪಕರಣದ ವಾಹನವೊಂದು ಗುರಿ ತಲುಪುವ ಕೆಲವೇ ಕಿಮೀಗಳ ದೂರದಲ್ಲೇ ಪಲ್ಟಿಯಾದ ಘಟನೆ ತಾಲ್ಲೂಕಿನ ಹರ್ಟುಗಾ ಗ್ರಾಮದ ಬಳಿ ನಡೆದಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.