ಸಾರಾಂಶ
ಜೀವನದಲ್ಲಿ ಗಳಿಸಿದ ಸಂಪತ್ತು ಕದಿಯಬಹುದು ಜೀವನದಲ್ಲಿ ಕಲಿತ ಜ್ಞಾನ ಹಾಗೂ ಶರೀರ ಸಂಪತ್ತು ಕದಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಡಂಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಐಗಳಿ
ಜೀವನದಲ್ಲಿ ಗಳಿಸಿದ ಸಂಪತ್ತು ಕದಿಯಬಹುದು ಜೀವನದಲ್ಲಿ ಕಲಿತ ಜ್ಞಾನ ಹಾಗೂ ಶರೀರ ಸಂಪತ್ತು ಕದಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಡಂಗಿ ಹೇಳಿದರು.ಸಮೀಪದ ಬಾಡಗಿ ಗ್ರಾಮದ ಹನುಮಾನ ದೇವರ ಜಾತ್ರೆಯ (ಓಕಳಿ) ನಿಮಿತ್ತ ಹಮ್ಮಿಕೊಂಡಿದ್ದ ಅಂತಾರಾಜ್ಯಮಟ್ಟದ ನಿಗದಿ ಪಡಿಸಿದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಿಗೆ ಪ್ರೋತ್ಸಾಹಿಸಲು ಒಂದು ಮೈದಾನ, ಕುಸ್ತಿ ಪಟುಗಳಿಗೆ ಗರಡಿ ಮನೆ, ಪ್ರತಿ ಗ್ರಾಮಗಳಲ್ಲಿ ಇರಬೇಕು. ಮನೆಗೊಬ್ಬ ಕುಸ್ತಿಪಟು ಇದ್ದರೇ ಆಗ್ರಾಮ ಸದೃಢ ಗ್ರಾಮವಾಗಲಿದೆ ಎಂದು ತಿಳಿಸಿದರು.ಯುವ ಧುರೀಣ ಅಣ್ಣಾರಾಯ ಹಾಲಳ್ಳಿ(ಐಗಳಿ) ಮಾತನಾಡಿ, ಗ್ರಾಮೀಣ ಕ್ರೀಡೆಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕಾಣಲು ಸಿಗುತ್ತದೆ. ಕಕಮರಿ, ಐಗಳಿ, ಅಡಹಳಟ್ಟಿ, ಬಾಡಗಿ, ಯಲಿಹಡಲಗಿ, ಗ್ರಾಮಗಳಲ್ಲಿ ಕುಸ್ತಿ ಪಂದ್ಯಾವಳಿಗಳು ಜಾತ್ರೆ ಇವೆ. ಬೇರೆ ಬೇರೆ ರಾಜ್ಯದಿಂದ ಕುಸ್ತಿ ಪಟುಗಳನ್ನು ಕರಿಸಿ ಸುಂದರ ಸ್ಪರ್ಧೆಯನ್ನು ಬಾಡಗಿ ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ. ಕಮಿಟಿಯವರು ಸಮಾನ ಮನಸ್ಕರದಿಂದ ಜಾತ್ರೆ ಮಾಡುವುದು ನಾಡಿಗೆ ಮಾದರಿ ಎಂದರು.ಕೊಲ್ಲಾಪುರ ಪೈ ಸುರೇಶ ಠಾಕೂರ ಎದುರಾಳಿ ಕೋಹಳ್ಳಿಯ ಸಂಗಮೇಶ ಅವರನ್ನು ಸೋಲಿಸಿದರು. ಪೈ ಶಿವಯ್ಯ ಶಿವಯ್ಯ ಕಂಕಣವಾಡಿ ಎದುರಾಳಿ ಪೈ ವಿಕಾಸ ಗೋತ್ರೆ ಅವರನ್ನು ಸೋಲಿಸಿದರು. ಬಾಡಗಿ ಗ್ರಾಮದ (ಮೂಕ) ಪೈ ಮಹಾಂತೇಶ ಎದುರಾಳಿ ಕೊಲ್ಲಾಪುರದ ಹಣಮಂತ ಅವರನ್ನು ಕೆಲವೇ ನಿಮಿಷಗಳಲ್ಲಿ ಸೋಲಿಸಿದರು. ಸುಮಾರು 20 ಜೋಡಿ ಕುಸ್ತಿಗಳು ಜರುಗಿದವು. ಜಟ್ಟಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು.ಈ ವೇಳೆ ಕಮಿಟಿಯ ಹಿರಿಯರಾದ ಸತ್ಯಪ್ಪ ಬಿರಾದಾರ, ರಾಮಚಂದ್ರ ಬಿಜ್ಜರಗಿ, ಸಾಬು ತೇಲಿ, ಮನೋಹರ ಜಂಬಗಿ, ರಾಜು ಬಿರಾದಾರ, ಚಂದ್ರಕಾಂತ ಮಮದಾಪುರ, ಸಿದ್ದು ಹಳ್ಳಿ ಸೇರಿದಂತೆ ಜಾತ್ರಾ ಕಮಿಟಿ, ಗ್ರಾಮಸ್ಥರು ಇದ್ದರು. ನಿರ್ಣಾಯಕರಾಗಿ ಮಲ್ಲಪ್ಪ ಕುಂಬಾರಹಳ್ಳಿ, ವಿಜಯಪುರದ ಮಾಲೀಕ ಮಾಜಿ ಕುಸ್ತಿಪಟು ನಿಂಗಪ್ಪ ಕುಂದರಗಿ ಕಾರ್ಯ ನಿರ್ವಹಿಸಿದರು.