ರಾಮನಗರ: ನಗರದ ಪ್ರದೇಶದ ಪಿಎಂಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಸರಳ ಜೀವನಶೈಲಿ, ಪರಿಸರದೊಂದಿಗಿನ ಅವಿನಾಭಾವ ಸಂಬಂಧ ಪರಿಚಯಿಸಲು ಗ್ರಾಮಾನುಭವ ಪ್ರವಾಸ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬೈರೇಗೌಡ ತಿಳಿಸಿದರು
ರಾಮನಗರ: ನಗರದ ಪ್ರದೇಶದ ಪಿಎಂಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಸರಳ ಜೀವನಶೈಲಿ, ಪರಿಸರದೊಂದಿಗಿನ ಅವಿನಾಭಾವ ಸಂಬಂಧ ಪರಿಚಯಿಸಲು ಗ್ರಾಮಾನುಭವ ಪ್ರವಾಸ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬೈರೇಗೌಡ ತಿಳಿಸಿದರು.
ಕಾಲೇಜಿನಲ್ಲಿ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಾನುಭವ ಪ್ರವಾಸ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕಗಳ ನಾಲ್ಕು ಗೋಡೆಗಳ ಆಚೆಗಿನ ನೈಜ ಬದುಕನ್ನು ಪರಿಚಯಿಸುವ ಅತ್ಯುತ್ತಮ ಮಾಧ್ಯಮ. ನಗರ ಪ್ರದೇಶಗಳಲ್ಲಿ ಬೆಳೆಯುವ ಮಕ್ಕಳಿಗೆ ಹಳ್ಳಿಯ ಸೊಗಡು, ಕೃಷಿ ಚಟುವಟಿಕೆಗಳು, ರೈತರ ಕಷ್ಟ ಸುಖಗಳು ಹಾಗೂ ಆಹಾರ ಉತ್ಪಾದನೆಯ ಹಿಂದಿರುವ ಶ್ರಮದ ಅರಿವು ಈ ಪ್ರವಾಸದಿಂದ ನೇರವಾಗಿ ಲಭಿಸುತ್ತದೆ ಎಂದರು.ಸ್ಥಳೀಯ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಗಳ ಪರಿಚಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ. ಹಳ್ಳಿಯ ಜನರ ಆತಿಥ್ಯ, ಪರಸ್ಪರ ಸಹಕಾರ ಮನೋಭಾವ ಮತ್ತು ಸಮುದಾಯ ಜೀವನದ ಮೌಲ್ಯಗಳನ್ನು ಹತ್ತಿರದಿಂದ ನೋಡುವುದರಿಂದ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ತಂತ್ರಜ್ಞಾನ ಮತ್ತು ಯಾಂತ್ರಿಕ ಬದುಕಿನ ಒತ್ತಡದಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯು ವುದರಿಂದ ಅವರಲ್ಲಿ ಹೊಸ ಚೈತನ್ಯ, ಕುತೂಹಲ ಮತ್ತು ಪ್ರಾಯೋಗಿಕ ಜ್ಞಾನ ವೃದ್ಧಿಯಾಗುತ್ತದೆ, ಇದು ಮುಂದೆ ಅವರ ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗಲಿದೆ ಎಂದು ತಿಳಿಸಿದರು.
ನಮ್ಮ ಪಿಎಂಸಿ ವತಿಯಿಂದ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜಿನ 400 ವಿದ್ಯಾರ್ಥಿಗಳಿಗೆ 8 ತಂಡಗಳಲ್ಲಿ ನಿಯೋಜಿತ ರೈತರ ಕೃಷಿ ತೋಟಗಳಿಗೆ ಗ್ರಾಮಾನುಭವದ ಪ್ರವಾಸ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಪ್ರಗತಿಪರ ರೈತರ ಕೃಷಿ ಭೂಮಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗುವುದು. ಈ ವೇಳೆ ಮಕ್ಕಳಿಗೆ ಕೃಷಿ ಅಧಿಕಾರಿಗಳು, ರೈತರು ಮಕ್ಕಳಿಗೆ ಮಾಹಿತಿ ಒದಗಿಸಲಿದ್ದಾರೆ ಎಂದು ಬೈರೇಗೌಡ ತಿಳಿಸಿದರು.ಸಭೆಯಲ್ಲಿ ಪಿಎಂಸಿ ಶಾಲೆಗೆ ಮಂಜೂರಾಗಿರುವ ಅನುದಾನದಲ್ಲಿ ಮ್ಯೂಸಿಕ್, ಕಂಪ್ಯೂಟರ್ ಶಿಕ್ಷಕರ ನೇಮಕ, ಗೌರವಧನ ನೀಡುವುದು, ಸೆಕ್ಯುರಿಟಿ ನೇಮಕ, ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.
ಸಮಿತಿ ಸದಸ್ಯರಾದ ಬಿ.ಆರ್.ಗಿರಿಜಾ ನಳಿನಿ, ಸಲ್ಮಾ ಸುಲ್ತಾನ, ಪ್ರಭಾರ ಪ್ರಾಂಶುಪಾಲರಾದ ಕೆ.ಅನ್ಸರ್ ಉಲ್ ಹಕ್ , ಪ್ರೌಢಶಾಲಾ ಮುಖ್ಯೋಪಾ ಧ್ಯಾಯ ಶಿವಸ್ವಾಮಿ, ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ, ಉಪನ್ಯಾಸಕರಾದ ವಿಜಯ್, ಡಾ.ನರಸಿಂಹಸ್ವಾಮಿ ಬಸವರಾಜು, ಚಿತ್ರಾ ಮತ್ತಿತರರು ಹಾಜರಿದ್ದರು.ಕೋಟ್............
ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಗ್ರಾಮಾನುಭವ ಪ್ರವಾಸ ಕಾರ್ಯಕ್ರಮ ಅನುವು ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಇದರಿಂದ ದಿನನಿತ್ಯ ಸೇವಿಸುವ ಅನ್ನದ ಹಿಂದೆ ಎಷ್ಟೊಂದು ರೈತರ ಬೆವರಿದೆ ಎಂಬುದನ್ನು ಪ್ರತ್ಯಕ್ಷವಾಗಿ ಕಂಡಾಗ ವಿದ್ಯಾರ್ಥಿಗಳಲ್ಲಿ ಅನ್ನದಾತನ ಬಗ್ಗೆ ಗೌರವ ಮತ್ತು ಆಹಾರವನ್ನು ವ್ಯರ್ಥ ಮಾಡಬಾರದು ಎಂಬ ಜವಾಬ್ದಾರಿ ಮೂಡುತ್ತದೆ.- ಬೈರೇಗೌಡ, ಉಪಾಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ.
17ಕೆಆರ್ ಎಂಎನ್ 2.ಜೆಪಿಜಿಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬೈರೇಗೌಡ ಅಧ್ಯಕ್ಷತೆಯಲ್ಲಿ
ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಜಂಟಿ ಸಭೆ ನಡೆಯಿತು.