ಕಾರವಾರ ಬಳಿ ಬೆನ್ನಿನ ಮೇಲೆ ಎಲೆಕ್ಟ್ರಾನಿಕ್ ಚಿಪ್ ಇರುವ ಬೃಹತ್ ಗಾತ್ರದ ರಣಹದ್ದು ಪತ್ತೆ!

| Published : Nov 11 2024, 01:06 AM IST / Updated: Nov 11 2024, 08:14 AM IST

ಕಾರವಾರ ಬಳಿ ಬೆನ್ನಿನ ಮೇಲೆ ಎಲೆಕ್ಟ್ರಾನಿಕ್ ಚಿಪ್ ಇರುವ ಬೃಹತ್ ಗಾತ್ರದ ರಣಹದ್ದು ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಭಾನುವಾರ ಮಧ್ಯಾಹ್ನ ಈ ಪಕ್ಷಿಯನ್ನು ಗಮನಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ಪಕ್ಷಿ ಎಲ್ಲಿಂದ ಬಂದಿರಬಹುದು? ಚಿಪ್ ಮತ್ತು ಪಟ್ಟಿ ಹೇಗೆ ಮತ್ತು ಏಕೆ ಪಕ್ಷಿಗೆ ಅಳವಡಿಸಲಾಗಿದೆ ಎನ್ನುವ ಕುರಿತು ಗೊಂದಲಗಳಿತ್ತು.

ಕಾರವಾರ: ಬೆನ್ನಿನ ಮೇಲೆ ಎಲೆಕ್ಟ್ರಾನಿಕ್ ಚಿಪ್ ಮಾದರಿಯನ್ನು ಹೊಂದಿರುವ ಬೃಹತ್ ಗಾತ್ರದ ರಣಹದ್ದು ನಗರದ ನದಿವಾಡಾದಲ್ಲಿ ಭಾನುವಾರ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿತ್ತು. ಆದರೆ ಆ ಪಕ್ಷಿ ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ಸಂಶೋಧನೆಗೆ ಒಳಪಟ್ಟಿರುವುದು ಎಂದು ಸ್ಥಳೀಯ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಪಕ್ಷಿಯ ೨ ಕಾಲುಗಳಿಗೆ ಹಸಿರು, ನೀಲಿ ಬಣ್ಣದ ಪಟ್ಟಿಯಿದ್ದು, ಅದರ ಮೇಲೆ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಬರೆಯಲಾಗಿದೆ. ಈ ಪಕ್ಷಿಯ ಬೆನ್ನಿನ ಮೇಲೆ ಚಿಕ್ಕದಾದ ಸೋಲಾರ್ ಎಲ್‌ಇಡಿ ಲೈಟ್ ಮಾದರಿಯ ಎಲೆಕ್ಟ್ರಾನಿಕ್ ಚಿಪ್ ಕಾಣುತ್ತಿದೆ. ಕಾರವಾರ ತಾಲೂಕಿನಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆಯಂತಹ ಸೂಕ್ಷ್ಮ ಪ್ರದೇಶಗಳಿದ್ದು, ಗೂಢಾಚಾರಿಕೆ ಆತಂಕವೂ ಎದುರಾಗಿತ್ತು.

ಸಾರ್ವಜನಿಕರು ಭಾನುವಾರ ಮಧ್ಯಾಹ್ನ ಈ ಪಕ್ಷಿಯನ್ನು ಗಮನಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ಪಕ್ಷಿ ಎಲ್ಲಿಂದ ಬಂದಿರಬಹುದು? ಚಿಪ್ ಮತ್ತು ಪಟ್ಟಿ ಹೇಗೆ ಮತ್ತು ಏಕೆ ಪಕ್ಷಿಗೆ ಅಳವಡಿಸಲಾಗಿದೆ ಎನ್ನುವ ಕುರಿತು ಗೊಂದಲಗಳಿತ್ತು.''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಡಿಸಿಎಫ್ ರವಿಶಂಕರ, ಮಹಾರಾಷ್ಟ್ರದ ತಡೋಬಾ ಹುಲಿ ರಾಷ್ಟ್ರೀಯ ಉದ್ಯಾನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ (ಬಿಎನ್‌ಎಚ್‌ಎಸ್) ಸಂಶೋಧನೆ ನಡೆಯುತ್ತಿದ್ದು, ೫ ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. 

ಅದರಲ್ಲಿ ಒಂದು ಇಲ್ಲಿಗೆ ಬಂದಿದೆ. ಬಿಎನ್‌ಎಚ್‌ಎಸ್ 100 ವರ್ಷ ಹಳೆಯ ಸಂಸ್ಥೆಯಾಗಿದ್ದು, ಪಕ್ಷಿಗಳ ಬಗ್ಗೆ ಸಂಶೋಧನೆ ಮಾಡುತ್ತದೆ ಎಂದರು.ಎರಡ್ಮೂರು ದಶಕಗಳಿಂದ ಕರಾವಳಿ ಭಾಗದಲ್ಲಿ ರಣಹದ್ದು ವಿರಳವಾಗಿ ಕಾಣಿಸಿಕೊಂಡಿದ್ದು, ಈ ಪ್ರಭೇದ ಅಳಿದುಹೋಗಿದೆ ಎನ್ನುವ ಭಾವನೆಯಿತ್ತು. ಕಳೆದ ೨೦ ದಿನಗಳ ಹಿಂದೆ ಕುಮಟಾ ತಾಲೂಕಿನ ಮಿರ್ಜಾನ್ ಬಳಿ ರಣಹದ್ದು ಕಾಣಿಸಿಕೊಂಡಿತ್ತು.

ಸೊಪ್ಪು, ಕಾಯಿಪಲ್ಯೆ ಮೇಲೆ ಎಂಜಲು ಉಗಿದ ವ್ಯಕ್ತಿ

ಕಾರವಾರ: ನಗರದಲ್ಲಿ ನಡೆಯುವ ಭಾನುವಾರದ ಸಂತೆಗೆ ಬಂದಿದ್ದ ವ್ಯಾಪಾರಿ ಸೊಪ್ಪು, ಕಾಯಿಪಲ್ಯೆಗಳ ಮೇಲೆ ನೀರು ಹಾಕುವಾಗ ಎಂಜಲು ಉಗಿಯುತ್ತಿರುವುದನ್ನು ನೋಡಿ ಸ್ಥಳೀಯರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ಲ ಮೂಲಕ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಜಲು ಉಗಿದ ವ್ಯಾಪಾರಿಯಾಗಿದ್ದು, ಭಾನುವಾರ ಸಂತೆಯಾದ ಕಾರಣ ಇಲ್ಲಿನ ಪಿಕಳೆ ರಸ್ತೆಯಲ್ಲಿ ವಿವಿಧ ಬಗೆಯ ಸೊಪ್ಪುಗಳನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದು, ಸೊಪ್ಪಿಗೆ ನೀರು ಹಾಕುವ ಜತೆಗೆ ಎಂಜಲು ಕೂಡ ಉಗಿದಿದ್ದು, ಇದನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಹಲಾಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವ್ಯಾಪಾರಿ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಜಲು ಉಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.