ಅಧ್ಯಾತ್ಮದಲ್ಲಿ ಬದುಕುವ ಮಾರ್ಗ

| Published : Mar 30 2024, 12:48 AM IST

ಸಾರಾಂಶ

ರಬಕವಿ-ಬನಹಟ್ಟಿ: ಅಧ್ಯಾತ್ಮದಲ್ಲಿ ಬದುಕುವ ಮಾರ್ಗ ಅಡಗಿದೆ. ಅಧ್ಯಾತ್ಮ ಹೂವಿನಂತೆ ಮನಸು ಅರಳಿಸಬಲ್ಲದು. ಸಮಾಜದ ಒಳಿತಿಗೆ ಅಧ್ಯಾತ್ಮದ ಅವಶ್ಯಕತೆಯಿದೆ ಎಂದು ಸಂಗಪ್ಪ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಅಧ್ಯಾತ್ಮದಲ್ಲಿ ಬದುಕುವ ಮಾರ್ಗ ಅಡಗಿದೆ. ಅಧ್ಯಾತ್ಮ ಹೂವಿನಂತೆ ಮನಸು ಅರಳಿಸಬಲ್ಲದು. ಸಮಾಜದ ಒಳಿತಿಗೆ ಅಧ್ಯಾತ್ಮದ ಅವಶ್ಯಕತೆಯಿದೆ ಎಂದು ಸಂಗಪ್ಪ ಮಹಾರಾಜರು ಹೇಳಿದರು.

ಬನಹಟ್ಟಿಯ ವಿಠ್ಠಲ ಮಂದಿರದಲ್ಲಿ ನಡೆದ ಅಧ್ಯಾತ್ಮ ಸಪ್ತಾಹದಲ್ಲಿ ಮಾತನಾಡಿದ ಅವರು, ಜೀವನದ ಸೂಕ್ಷ್ಮತೆ ಅರಿಯಲು ಗುರು ಹಾಗೂ ಅಧ್ಯಾತ್ಮಕ್ಕೆ ಶರಣಾಗುವೆ ಎಂದರು.

ಮಾನವರ ಮುಗ್ಧತೆಯಲ್ಲಿ ಅಧ್ಯಾತ್ಮದ ಮಹಾನ್ ತಿರುಳು ಅಡಗಿರುತ್ತದೆ. ದೈವತ್ವದ ಅರ್ಥ ನಿಗೂಢ, ಅಧ್ಯಾತ್ಮ ತೀವ್ರ ಹಸಿವು ಮತ್ತು ದೈವತ್ವದ ಹೃದಯ ಶ್ರೀಮಂತಿಕೆ ಹೊಂದುವ ಮೂಲಕ ನಿನ್ನನ್ನು ನೀನು ಮೊದಲು ತಿದ್ದಿಕೊಂಡು ಮುನ್ನುಗ್ಗಿದಾಗ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು.

ಗಿರಮಲ್ಲಪ್ಪ ಚನಾಳ ಮಹಾರಾಜರು, ಕುಮಾರ ಬಕರೆ, ಪ್ರಭು ಕೋಪರ್ಡೆ, ನಾಗಪ್ಪ ಬಕರೆ, ವಿಜಯ ಕೋಪರ್ಡೆ, ಬಾಳಕೃಷ್ಣ ಹಾಸಿಲಕರ, ಮಹಾನಿಂಗ ಹಾಸಿಲಕರ, ಗಂಗಪ್ಪ ಹಾಸಿಲಕರ ಸೇರಿದಂತೆ ಅನೇಕರಿದ್ದರು.