ಚಲಿಸುತ್ತಿದ್ದ ಬಸ್ಸಿನಿಂದ ಕಳಚಿದ ಚಕ್ರ

| Published : Jan 14 2025, 01:00 AM IST

ಸಾರಾಂಶ

ಚಲಿಸುತ್ತಿದ್ದ ಸಾರಿಗೆ ಬಸ್‌‌‌‌ನ ಹಿಂದಿನ ಚಕ್ರಗಳು ಕಳಚಿ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿದ್ದ ಚಿಕ್ಕಮಗಳೂರು ಡಿಪೋದ ಸಾರಿ ಬಸ್‌ನ ಹಿಂದಿನ ಚಕ್ರಗಳು ಕಳಚಿ ಬೀಳುತ್ತಿದ್ದಂತೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿದೆ. ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ಅಪಾಯವಾಗಿಲ್ಲ. ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕಳುಹಿಸಿಕೊಡಲಾಯಿತು.

ಹಾಸನ: ಚಲಿಸುತ್ತಿದ್ದ ಸಾರಿಗೆ ಬಸ್‌‌‌‌ನ ಹಿಂದಿನ ಚಕ್ರಗಳು ಕಳಚಿ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿದ್ದ KA-18 F 0548 ನಂಬರ್‌ನ ಚಿಕ್ಕಮಗಳೂರು ಡಿಪೋದ ಸಾರಿ ಬಸ್‌ನ ಹಿಂದಿನ ಚಕ್ರಗಳು ಕಳಚಿ ಬೀಳುತ್ತಿದ್ದಂತೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿದೆ. ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ಅಪಾಯವಾಗಿಲ್ಲ. ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕಳುಹಿಸಿಕೊಡಲಾಯಿತು.

ಕೆಲವೇ ದಿನಗಳ ಹಿಂದಷ್ಟೇ ಹಾಸನದಿಂದ ಬೇಲೂರು ಕಡೆಗೆ ಹೋಗುತ್ತಿದ್ದ ಬಸ್ಸಿನ ಚಕ್ರ ಕೂಡ ಕುಪ್ಪಳ್ಳಿ ಬಳಿ ಕಳಚಿಕೊಂಡಿತ್ತು. ಆದರೆ, ಚಾಲಕ ಬಸ್ಸನ್ನು ನಿಯಂತ್ರಿಸಿದ್ದರಿಂದ ಅಪಾಯಗಳಾಗಲಿಲ್ಲ. ಪದೇಪದೆ ಇಂತಹ ಘಟನೆ ನಡೆಯುತ್ತಿರುವುದನ್ನು ನೋಡಿದಾಗ ಕೆಎಸ್ಸಾರ್ಟಿಸಿ ಡಿಪೋಗಳಲ್ಲಿ ಬಸ್‌ಗಳನ್ನು ಎಷ್ಟರಮಟ್ಟಿಗೆ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ.