ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕಾಡು ಮತ್ತು ಕಾಫಿ ತೋಟಗಳಲ್ಲಿ ನೆಲೆಸಿರುವ ಹುಲಿ, ಚಿರತೆಯನ್ನು ಹೋಲುವ ಕಾಡುಬೆಕ್ಕು (ಪೆರ್ಪಣ) ಗದ್ದೆಹಳ್ಳದ ಮನೆ ಆವರಣದಲ್ಲಿ ಪ್ರತ್ಯಕ್ಷವಾಗಿ ಮನೆಮಂದಿಯ ಆತಂಕಕ್ಕೆ ಕಾರಣವಾಯಿತು.ಬುಧವಾರ ರಾತ್ರಿ ತನ್ನ ಬಿಡಾರದಿಂದ ತಪ್ಪಿಸಿಕೊಂಡ ಕಾಡುಬೆಕ್ಕು (ಪೆರ್ಪಣ) ಸುಂಟಿಕೊಪ್ಪ ಗದ್ದೆಹಳ್ಳದ ನಿವಾಸಿ ಎಂ.ಎ. ಸತೀಶ್ ಎಂಬವರ ಮನೆ ಬಳಿಗೆ ಬಂದು ಸಾಕುಬೆಕ್ಕಿನೊಂದಿಗೆ ಕಾದಾಟಕ್ಕಿಳಿಯಿತು. ನಂತರ ಕೊಟ್ಟಿಗೆ ಒಳಗೆ ನುಸುಳಿ ಸದ್ದು ಮಾಡತೊಡಗಿತು. ಅದನ್ನು ಕಂಡ ಮನೆಯವರು ಹೌಹಾರಿದರು.
ಮನೆಗೆ ಬಂದ ಅಪರೂಪದ ಅತಿಥಿ ಹುಲಿ ಮರಿ ಅಲ್ಲ ಪೆರ್ಪಣ ಎಂದು ತಿಳಿದ ಮೇಲೆ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಊರಗ ತಜ್ಞ ಹಾಗೂ ಪ್ರಾಣಿಪ್ರಿಯ ಪಿ. ಬಾಲಚಂದ್ರ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಬಾಲಚಂದ್ರ ಪೆರ್ಪಣವನ್ನು ಸುರಕ್ಷಿತವಾಗಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.ನಂತರ ಕುಶಾಲನಗರ ಆರಣ್ಯ ಇಲಾಖೆಯ ಉಮೇಶ್ ಅವರಿಗೆ ಮಾಹಿತಿ ನೀಡಿ, ಸತೀಶ್ ಅವರೊಂದಿಗೆ ತೆರಳಿ ಅರಣ್ಯ ಇಲಾಖೆಯ ಗಾರ್ಡ್ಸ ಮ್ಮುಖದಲ್ಲಿ ಸುರಕ್ಷಿತವಾಗಿ ಆನೆಕಾಡು ಅರಣ್ಯದ ಒಳಗೆ ಬಿಟ್ಟಿದ್ದಾರೆ.ಕಾಡಂಚುವಾಸಿಗಳ ಸಮಸ್ಯೆ ಪರಿಹಾರ ಪ್ರಯತ್ನ: ಭೋಸರಾಜು ಭರವಸೆಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರು ಎದುರಿಸುತ್ತಿರುವ ತೊಂದರೆಗಳನ್ನು ಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಪರಿಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಭರವಸೆ ನೀಡಿದ್ದಾರೆ.ಗುರುವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸಮ್ಮುಖದಲ್ಲಿ ಸಭೆ ನಡೆಸಿ ಕೊಡಗು ಆದಿವಾಸಿ ಮುಖಂಡರು ಸೇರಿದಂತೆ ರಾಜ್ಯದ ವಿವಿಧ ಆದಿವಾಸಿ ಬುಡಕಟ್ಟು ಪ್ರಮುಖರಿಂದ ಸಮಸ್ಯೆಗಳನ್ನು ಆಲಿಸಿದರು.ಸಭೆಯಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ಅಭಿವೃದ್ಧಿ ಸಂಸ್ಥೆ-ಅಧ್ಯಕ್ಷರು ವಿಠಲ್, ಕೊಡಗು ವಿಭಾಗ ಉಪಾಧ್ಯಕ್ಷ ಜಿ.ಬಿ.ಬೊಜ್ಜಮ್ಮ,ವಿರಾಜಪೇಟೆ ವಿಭಾಗದ ಪ್ರಧಾನ ಕಾರ್ಯದರ್ಶಿ ದಿಡ್ಡಳ್ಳಿ ಮುತ್ತಮ್ಮ, ಮೈಸೂರು ಕಾರ್ಯದರ್ಶಿ ಗಿರೀಶ್ ಬಿ.ಸಿ,ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷ ಡಾ. ನಿಶ್ಚಲ್ ದಂಬೆಕೋಡಿ ಮತ್ತಿತರರಿದ್ದರು.