ಬಂಡೀಪುರದ ಹಿರಿಕೆರೆ ಬಳಿ ಕಾಡಾನೆ ಸಾವು

| Published : May 05 2025, 12:50 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಹಂಗಳ ಸೌತ್‌ ನ ಸೋಮನಾಥಪುರ ಸ್ಯಾಂಡಲ್‌ ರಿಸರ್ವ್‌ನ ಹಿರಿಕೆರೆ ಅರಣ್ಯ ಪ್ರದೇಶದ ಬಳಿ ಸುಮಾರು ೩೫ ವರ್ಷದ ಕಾಡಾನೆ ಮೃತ ದೇಹ ಗಸ್ತಿನಲ್ಲಿದ್ದ ಸಿಬ್ಬಂದಿ ನೋಡಿದ ಬಳಿಕ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಆರ್‌ಎಫ್‌ ಒ ಬಿ.ಎಂ.ಮಲ್ಲೇಶ್‌ ಸ್ಥಳ ಪರಿಶೀಲನೆ ಬಳಿಕ ಆನೆ ಶವ ಪರೀಕ್ಷೆ ಪಶು ವೈದ್ಯರು ನೆರವೇರಿಸಿದ ಬಳಿಕ ಮೃತ ದೇಹ ವಿಲೇವಾರಿ ಇಲಾಖೆಯ ನಿಯಮದಂತೆ ಮಾಡಲಾಗಿದೆ. ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್‌ ಕುಮಾರ್‌, ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌, ವನ್ಯಜೀವಿ ಪರಿಪಾಲಕ ನಂಜುಂಡರಾಜೇ ಅರಸ್‌ ಇದ್ದರು.