ಕೀರ್ತನೆ ಮೂಲಕ ಕೊಡುಗೆ ನೀಡಿದ ಜ್ಞಾನಿ

| Published : Nov 09 2025, 02:00 AM IST

ಸಾರಾಂಶ

ಕನಕದಾಸರು ಕ್ರಿ.ಶ. ೧೫೦೯ ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ ಹರಿದಾಸ ಸಂತ, ದಾರ್ಶನಿಕ ಮತ್ತು ಕವಿ. ಮೂಲತಃ ತಿಮ್ಮಪ್ಪ ನಾಯಕ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಇವರು, ಯುದ್ಧದಲ್ಲಿ ಗಾಯಗೊಂಡ ನಂತರ ಸೈನಿಕ ವೃತ್ತಿಯನ್ನು ತ್ಯಜಿಸಿ ಶ್ರೀಕೃಷ್ಣನ ಭಕ್ತರಾದರು. ನಂತರ ಕನಕದಾಸರು’ ಎಂಬ ಹೆಸರನ್ನು ಪಡೆದು, ತಮ್ಮ ಕೀರ್ತನೆಗಳು, ಮೂಲಕ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಣ್ಣಿಗೆ ಕಾಣದ ಅನಂತತೆಯನ್ನು ಮಾನವ ಆಲೋಚನೆಯಲ್ಲಿ ಸಿಲುಕಿಸಿ ಧ್ಯಾನ ಮಾಡಬೇಕು. ಸಾಕಾರವು ನಿಕಾರವನ್ನು ಪ್ರತಿನಿಧಿಸುತ್ತದೆ. ದಾಸ್ಯ ಭಾವದಲ್ಲಿ ದೇವರೊಡನೆ ಸಂಬಂಧ ಸಹಾಯಮಾಡಲೆಂದೇ ಆದಿಕೇಶವನು ಧರೆಗಿಳಿದು ಬಂದಿದ್ದಾನೆ. ಮಾನವನು ತನ್ನನ್ನು ತಾನು ಸತ್ಯಾನ್ವೇಷಣೆಯನ್ನು ಕಾಣುತ್ತಾನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ಮಾತನಾಡಿ, ಕನಕದಾಸರು ಭಾರತದ ದಾಸಪರಂಪರೆಯ ಶ್ರೇಷ್ಠ ಪ್ರತಿನಿಧಿಗಳಲ್ಲಿ ಒಬ್ಬರು. ಅವರು ದಾಸರಷ್ಟೇ ಅಲ್ಲ ಸಂತ, ಕವಿಗಳೂ ಹೌದು. ಅವರ ಕಾವ್ಯಗಳಲ್ಲಿ ಮತ್ತು ಕೀರ್ತನೆಗಳಲ್ಲಿ ಭಕ್ತಿಯ ಭಾವ ತೀವ್ರತೆಯೂ ಇದೆ, ಸಮಾಜವನ್ನು ತಿದ್ದಬೇಕೆಂಬ ಉಮೇದೂ ಇದೆ, ಆಧ್ಯಾತ್ಮಿಕತೆಯ ಅನುಭವ ಸಮೃದ್ದಿಯೂ ಇದೆ ಕಾವ್ಯಗುಣದ ರಸಾಭಿವಕ್ತಿಯೂ ಇದೆ, ತಾರತಮ್ಯಗಳಲ್ಲೇ ವಿಹರಿಸುವ ಆದುನಿಕ ಮನಸ್ಸಿಗೆ ಸಾಮರಸ್ಯದ ಔಷಧವಾಗಬಲ್ಲ ಅನುಭಾವಿ ಕನಕದಾಸ ದಾಸರು ಎಂದು ತಿಳಿಸಿದರು.

ತರಗತಿಗಳಲ್ಲಿ ವಿದ್ಯಾರ್ಥಿಗಳು ಕನಕದಾಸ, ಪುರಂದರದಾಸ ಹಾಗೂ ಇನ್ನು ಮುಂತಾದ ಚಾರಿತ್ರಿಕ ವ್ಯಕ್ತಿಗಳ ಇತಿಹಾಸವನ್ನು ತಿಳಿಯುವುದರಿಂದ ನಿಮಗೆ ಪರೀಕ್ಷೆಗಳಲ್ಲಿ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೆಶಕರಾದ ಎಸ್.ಮಹೇಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರತ್ಮಮ, ದೈಹಿಕ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ಕುಮಾರ್, ಯಶ್‌ಪಾಲ್, ಪರಶಿವಮೂರ್ತಿ, ಮಂಜುಳ ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.