ಸಾರಾಂಶ
ಮಹಿಳೆಯು ಈ ದೇಶದ ಆಸ್ತಿ ಒಬ್ಬ ಮಹಿಳೆ ತನ್ನ ಇಡೀ ಸರ್ವಸ್ವವನ್ನು ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾಳೆ. ಅವಳ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಪ್ರಪಂಚದಲ್ಲಿ ತಾಯಿಗಿಂತ ದೇವರಿಲ್ಲ ಎಂದು ವರ್ಣಿಸುತ್ತಾರೆ, ಇಂದು ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಅತಿ ಹೆಚ್ಚು ಉನ್ನತ ಹುದ್ದೆಗಳಲ್ಲಿ ದೇಶಕ್ಕೆ ತಮ್ಮದೇ ಆದಂತ ಸೇವೆ ಸಲ್ಲಿಸುತ್ತಾ ಗಂಡು ಹೆಣ್ಣು ಎನ್ನುವ ಭೇದವಿಲ್ಲ ಎಂದು ಸಮಾನತೆಯನ್ನು ತೋರಿದ್ದಾರೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಚೇರ್ಮನ್ ಭರತ್ ಕುಮಾರ್ ಎಚ್. ಜಿ. ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ಬಾಹುಬಲಿ ಇಂಜಿನಿಯರ್ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್ ಕಾಯಿಲೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಚೇರ್ಮನ್ ಭರತ್ ಕುಮಾರ್ ಎಚ್. ಜಿ. ರವರು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯು ಈ ದೇಶದ ಆಸ್ತಿ ಒಬ್ಬ ಮಹಿಳೆ ತನ್ನ ಇಡೀ ಸರ್ವಸ್ವವನ್ನು ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾಳೆ. ಅವಳ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಈ ಪ್ರಪಂಚದಲ್ಲಿ ತಾಯಿಗಿಂತ ದೇವರಿಲ್ಲ ಎಂದು ವರ್ಣಿಸುತ್ತಾರೆ, ಇಂದು ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಅತಿ ಹೆಚ್ಚು ಉನ್ನತ ಹುದ್ದೆಗಳಲ್ಲಿ ದೇಶಕ್ಕೆ ತಮ್ಮದೇ ಆದಂತ ಸೇವೆ ಸಲ್ಲಿಸುತ್ತಾ ಗಂಡು ಹೆಣ್ಣು ಎನ್ನುವ ಭೇದವಿಲ್ಲ ಎಂದು ಸಮಾನತೆಯನ್ನು ತೋರಿದ್ದಾರೆ ಎಂದು ತಿಳಿಸಿದರು.ಮಹಿಳೆಯರಲ್ಲಿ ಸಾಮಾನ್ಯವಾಗಿ ಬರುವಂತಹ ಕ್ಯಾನ್ಸರ್ ಕಾಯಿಲೆ ಹೇಗೆ ಬರುತ್ತದೆ ಕಾಯಿಲೆ ಬರಲು ಕಾರಣವೇನು ಹಾಗೂ ಕಾಯಿಲೆಯನ್ನು ಹೇಗೆ ತಡೆಗಟ್ಟಬಹುದು ಎಂಬುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು, ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಮತಿ ಡಾಕ್ಟರ್ ಸಿಂಧು ರವರು ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಕಾಯಿಲೆ ಗುಣಲಕ್ಷಣಗಳು ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ಪ್ರಥಮ ಹಂತದಲ್ಲೇ ಪತ್ತೆ ಹಚ್ಚುವುದರ ಬಗ್ಗೆ ಹಾಗೂ ಆಹಾರ ಪದ್ಧತಿ ಅನುಸರಣೆ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಅಧಿಕಾರಿಗಳಾದ ಯಶೋಧ ವಿದ್ಯಾರ್ಥಿಗಳನ್ನು ಕುರಿತು ವಿದ್ಯಾರ್ಥಿ ಜೀವನ ಹೇಗೆ ಇರಬೇಕು ಎಂಬ ಮಾಹಿತಿಯನ್ನು ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಬಿವುಲ್ಲಾ ಬೇಗ್ ಹಾಗೂ ನಿರ್ದೇಶಕರಾದ ಶಿವಕುಮಾರ್ ಮತ್ತು ಕಾಲೇಜು ಆಡಳಿತ ಮಂಡಳಿ ಉಪಸ್ಥಿತರಿದ್ದರು.